Advertisement

ಭಾರತದ ನಕಲಿ ನೋಟು ಜಾಲದ ಕಿಂಗ್ ಪಿನ್ ಯೂನೂಸ್ ಅನ್ಸಾರಿ ಸೆರೆ; 7 ಕೋಟಿ ವಶ!

09:45 AM May 26, 2019 | Nagendra Trasi |

ನೇಪಾಳ: ಭಾರತದ ನಕಲಿ ನೋಟು ಜಾಲದ ಕಿಂಗ್ ಪಿನ್ ಯೂನೂಸ್ ಅನ್ಸಾರಿ ಹಾಗೂ ಪಾಕಿಸ್ತಾನದ ಮೂವರು ಪ್ರಜೆಗಳನ್ನು ಕಾಠ್ಮಂಡು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದು, ಈತನಿಂದ ಬರೋಬ್ಬರಿ 7 ಕೋಟಿ ಭಾರತದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವುದಾಗಿ ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ನಾವು ಯೂನೂಸ್ ಮಿಯಾ ಅನ್ಸಾರಿ ಜೊತೆ ಮೂವರು ಪಾಕಿಸ್ತಾನಿ ಹಾಗೂ ಇಬ್ಬರು ನೇಪಾಳಿ ಪ್ರಜೆಗಳನ್ನು ಇಲ್ಲಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದೇವೆ. ಅವರ ಬಳಿ ಭಾರತದ ನಕಲಿ ನೋಟುಗಳಿದ್ದವು. ಕತಾರ್ ನಿಂದ ನೇಪಾಳಕ್ಕೆ ಬಂದಿದ್ದರು. ಆದರೆ ಅವರ ಪಾಸ್ ಪೋರ್ಟ್ ನಲ್ಲಿ ಪಾಕಿಸ್ತಾನದಿಂದ ಪ್ರಯಾಣ ಆರಂಭ ಎಂದು ನಮೂದಿಸಿದೆ ಎಂಬುದಾಗಿ ನೇಪಾಳ ಪೊಲೀಸ್ ವಕ್ತಾರ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಬಿಶ್ವೋ ರಾಜ್ ಫೋಖಾರೆಲ್ ಎನ್ ಎನ್ ಐಗೆ ತಿಳಿಸಿದ್ದಾರೆ.

ಬಂಧಿತರಿಂದ ನಾಲ್ಕು ಸೂಟ್ ಕೇಸ್ ವಶಪಡಿಸಿಕೊಂಡಿದ್ದು, ಅದರಲ್ಲಿ ಭಾರತದ 2000 ರೂ. ಮುಖಬೆಲೆಯ 7 ಕೋಟಿ 67 ಲಕ್ಷ ರೂಪಾಯಿ ನಕಲಿ ನೋಟುಗಳು ಇದ್ದಿರುವುದಾಗಿ ವಿವರಿಸಿದ್ದಾರೆ. ಇಬ್ಬರು ನೇಪಾಳಿ ಪ್ರಜೆಗಳಾದ ಸಾಹೆಲ್ ಖಾನ್ (ಯೂನೂಸ್ ಸಂಬಂಧಿ) ಮತ್ತು ಸುಜಾನಾ ರಾಣಾಭಟ್(ಯೂನೂಸ್ ಚಾಲಕ) ಸೇರಿದಂತೆ ಇಬ್ಬರು ನಮ್ಮ ವಶದಲ್ಲಿದ್ದಾರೆ ಎಂದು ಹೇಳಿದರು. ಕಾನೂನು ಬಾಹಿರ ನೋಟುಗಳ ದಂಧೆಗೆ ಸಂಬಂಧಿಸಿದಂತೆ ಕೆಲವು ತಿಂಗಳ ಹಿಂದಷ್ಟೇ ಅನ್ಸಾರಿ ಜೈಲಿನಿಂದ ಬಿಡುಗಡೆಯಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next