Advertisement
ಎನ್‌ಇಪಿ ಜಾರಿಗೆ ಅಗತ್ಯವಿರುವ ಪಠ್ಯ ಕ್ರಮ, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯ ಕ್ರಮ ಇನ್ನೂ ಪ್ರಗತಿಯಲ್ಲಿದೆ. ಹೀಗಾಗಿ ಜೂ.1ರಿಂದಲೇ ಪೂರ್ವ ಪ್ರಾಥಮಿಕ ಹಂತದ ಮಕ್ಕಳಿಗೆ ಎನ್‌ಇಪಿ ಆರಂಭಿಸುವುದು ಕಷ್ಟಸಾಧ್ಯವಾಗಿದೆ. ಒಂದು ವೇಳೆ ಆರಂಭವಾದರೂ ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ಸಿಗಬೇಕಿ ರುವ ಶಿಕ್ಷಣ ನೀಡಲು ವಿಳಂಬವಾಗ ಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
Related Articles
Advertisement
ಪಠ್ಯಕ್ರಮ ವಿನ್ಯಾಸಕ್ಕೆ ಸಮಿತಿ ರಚನೆರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ 3ರಿಂದ 8 ವರ್ಷದ ಮಕ್ಕಳಿಗೆ ಮೊದಲ ಹಂತದಲ್ಲಿ ಶಿಕ್ಷಣ ನೀಡಲಾಗುತ್ತದೆ. (ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಿಕ್ಷಣ) 3ರಿಂದ 6 ವರ್ಷದ ಮಕ್ಕಳಿಗೆ ಅಂಗನವಾಡಿ ಹಾಗೂ 1 ಮತ್ತು 2ನೇ ತರಗತಿ ಶಿಕ್ಷಣವನ್ನು ಶಾಲೆಗಳಲ್ಲಿ ನೀಡಲಿದೆ. ಈ ಮಕ್ಕಳಿಗೆ ಏನನ್ನು ಬೋಧಿಸಬೇಕು ಎಂಬ ಪಠ್ಯಕ್ರಮ ವಿನ್ಯಾಸಗೊಳಿಸುವುದಕ್ಕಾಗಿ 6 ಉಪ ಸಮಿತಿಗಳನ್ನು ರಚಿಸಿ ಎ.19ರಂದು ಆದೇಶ ಹೊರಡಿಸಿದೆ. ಈ ಸಮಿತಿಗಳು 45 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ಪಠ್ಯಕ್ರಮ ವಿನ್ಯಾಸ, ಬೋಧನೆ ಮತ್ತು ಕಲಿಕಾ ಸಾಮಗ್ರಿ ಗಳು, ಮೌಲ್ಯಮಾಪನ, ಮಕ್ಕಳ ಸಾಮರ್ಥ್ಯ ಅಭಿವೃದ್ಧಿ, ಶಿಕ್ಷಣವು ಸಮುದಾಯ ತಲುಪು ವಿಕೆ, ಮಗುವಿನ ಆರಂಭಿಕ ಉತ್ತೇಜನ, ಮೇಲ್ವಿಚಾರಣೆ ಮತ್ತು ಉಸ್ತುವಾರಿ ವಿಷಯ ಗಳನ್ನು ಕುರಿತು ಉಪ ಸಮಿತಿಗಳು ವರದಿ ನೀಡಲಿವೆ. ಇದಾದ ಬಳಿಕ ಪಠ್ಯಕ್ರಮವು ರಚನೆಯಾಗಲಿದೆ. ಸಮಿತಿಯ ಕರ್ತವ್ಯಗಳೇನು?
ಈ ಉಪ ಸಮಿತಿಗಳು ಬಾಲ್ಯಾವಸ್ಥೆ ಯಲ್ಲಿ ಮಕ್ಕಳ ಸಂರಕ್ಷಣೆ ಮತ್ತು ಶಿಕ್ಷಣಕ್ಕಾಗಿ ಭದ್ರ ಬುನಾದಿ ಕಲ್ಪಿಸುವುದು. ಮಕ್ಕಳಲ್ಲಿ ಕುತೂಹಲವನ್ನು ಉಂಟುಮಾಡುವ ಅಕ್ಷರಮಾಲೆ, ಭಾಷೆಗಳು, ಅಂಕಿಗಳು, ಎಣಿಕೆ, ಬಣ್ಣಗಳು, ಒಳಾಂಗಣ ಮತ್ತು ಹೊರಾಂಗಣ ಆಟಗಳು, ಚಿತ್ರ ಬರೆಯು ವುದು, ನಾಟಕ, ಗೊಂಬೆಯಾಟ ಗಳನ್ನು ಹೊಂದಿರುತ್ತದೆ. ಸರಕಾರವು ಈಗಾಗಲೇ ಘೋಷಿಸಿರುವಂತೆ ಎನ್‌ಇಪಿ ಜಾರಿ ಮಾಡ ಲಿದೆ. ಅಂಗನವಾಡಿ ಕಾರ್ಯ ಕರ್ತೆಯ ರಿಗೆ ತರಬೇತಿ ಸಹಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
– ಎಸ್. ಸೆಲ್ವಕುಮಾರ್, ಪ್ರಧಾನ ಕಾರ್ಯದರ್ಶಿ, ಪ್ರಾ.ಮತ್ತು ಪ್ರೌಢಶಿಕ್ಷಣ ಇಲಾಖೆ ಹತ್ತು ದಿನಗಳ ತರಬೇತಿಯಲ್ಲಿ ಚಟುವಟಿಕೆ ಆಧಾರಿತ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಹೇಳಿಕೊಡುವಂತೆ ತಿಳಿಸಿದ್ದಾರೆ. ನಿಖರವಾಗಿ ಏನು ಹೇಳಿಕೊಡ ಬೇಕು ಎಂಬ ಬಗ್ಗೆ ಪಠ್ಯಕ್ರಮ ಬರಲಿದೆ. ಅನಂತರ ಅದನ್ನು ಮತ್ತೂಮ್ಮೆ ತರಬೇತಿ ನೀಡಿ ತಿಳಿಸಿಕೊಡಲಾಗುವುದು ಎನ್ನಲಾಗಿದೆ. ಮತ್ತಷ್ಟು ತರಬೇತಿ ನೀಡಿದ್ದರೆ ಒಳ್ಳೆಯದಿತ್ತು.
– ಹೆಸರು ಹೇಳದ ಅಂಗನವಾಡಿ ಕಾರ್ಯಕರ್ತೆ - ಎನ್.ಎಲ್. ಶಿವಮಾದು