Advertisement

NEP: ಕುಲಪತಿಗಳ ಜತೆ ಇಂದು ಸಿಎಂ ಸಭೆ

11:13 PM Aug 20, 2023 | Team Udayavani |

ಬೆಂಗಳೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನ ಸೌಧದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸರಕಾರಿ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಸಭೆ ಕರೆದಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

Advertisement

ರಾಜ್ಯದ ಉನ್ನತ ಶಿಕ್ಷಣದಲ್ಲಿ ಈಗಾ ಗಲೇ ಎನ್‌ಇಪಿ ಅಳವಡಿಕೆಯಾಗಿದ್ದು, ಈ ನೀತಿಯನ್ನು ರದ್ದುಪಡಿಸುವುದಾಗಿ ಕಾಂಗ್ರೆಸ್‌ ಚುನಾವಣೆ ಪೂರ್ವದಲ್ಲೇ ಘೋಷಿಸಿತ್ತು. ಕಾಂಗ್ರೆಸ್‌ ಸರಕಾರ ರಚನೆಯಾದ ಬಳಿಕವೂ ಎನ್‌ಇಪಿ ರದ್ದು ಪಡಿಸುವುದಾಗಿ ಮುಖ್ಯಮಂತ್ರಿಗಳು ಹೇಳುತ್ತಲೇ ಬಂದಿದ್ದರು. ಸೋಮವಾರ ನಡೆಯುವ ಸಭೆ ಈ ನಿಟ್ಟಿನಲ್ಲಿ ಸರಕಾರ ಇಡುತ್ತಿರುವ ಮೊದಲ ಮಹತ್ವದ ಹೆಜ್ಜೆ ಎನ್ನಲಾಗುತ್ತಿದೆ.

ಉನ್ನತ ಶಿಕ್ಷಣ ಸಚಿವ ಎಂ. ಸಿ. ಸುಧಾಕರ್‌ ಅವರು ಎರಡು ತಿಂಗಳ ಹಿಂದೆ ಕುಲಪತಿಗಳ ಸಭೆ ಕರೆದು ಎನ್‌ಇಪಿ ಬಗ್ಗೆ ಲಿಖೀತವಾಗಿ ತಮ್ಮ ಅಭಿ
ಪ್ರಾಯ ತಿಳಿಸುವಂತೆ ಸೂಚಿಸಿದ್ದರು. ಆದರೆ ಹೆಚ್ಚಿನ ಕುಲಪತಿಗಳು ಲಿಖೀತ ಅಭಿಪ್ರಾಯ ತಿಳಿಸಿರಲಿಲ್ಲ. ಸಿಎಂ ಜತೆಗಿನ ಸಭೆಯಲ್ಲಿ ವಿವಿಗಳ ಆಡಳಿತಾತ್ಮಕ ವಿಷಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

ಮಂಗಳವಾರ ಬಿಜೆಪಿ ಸಭೆ
ಎನ್‌ಇಪಿ ರದ್ದುಗೊಳಿಸುವ ವಿಚಾರ ಮತ್ತು ಸರಕಾರಿ ಶಾಲೆಗಳನ್ನು ಸಿಎಸ್‌ಆರ್‌ ನಿಧಿಯಡಿ ಅಭಿವೃದ್ಧಿಪಡಿಸಿ ಖಾಸಗಿ ಶಾಲೆಗಳಿಗೆ ನಿರ್ವಹಣೆ ನೀಡುತ್ತಿ
ರುವುದನ್ನು ಖಂಡಿಸಿ ಸೋಮವಾರ ಬಿಜೆಪಿಯ ಹಿರಿಯ ನಾಯಕರು ಸಭೆ ನಡೆಸಲಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಶಿಕ್ಷಣ ಸಚಿವರಾದ ಸುರೇಶ್‌ ಕುಮಾರ್‌, ಬಿ. ಸಿ. ನಾಗೇಶ್‌, ಶಿಕ್ಷಣ ಮತ್ತು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆ
ಯಾಗಿರುವ ಬಿಜೆಪಿ ಸದಸ್ಯರು ಹಾಗೂ ಶಿಕ್ಷಣ ತಜ್ಞರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next