Advertisement

ನೆಮ್ಮದಿ ಕೇಂದ್ರ ಸೇವೆ ಸ್ಥಗಿತ: ಜನರ ಪರದಾಟ

04:37 PM Jun 23, 2018 | |

ದೇವದುರ್ಗ: ಕಳೆದ ಹತ್ತು ದಿನಗಳಿಂದ ಮಿನಿ ವಿಧಾನಸೌಧ  ಕಚೇರಿಯ ನೆಮ್ಮದಿ ಕೇಂದ್ರ ವ್ಯಾಪ್ತಿ ಕೆಲಸ ಕಾರ್ಯಗಳು ಸ್ಥಗಿತವಾಗಿದ್ದು, ವಿದ್ಯಾರ್ಥಿಗಳು ಜನಸಾಮಾನ್ಯರು ಪರದಾಡುವಂತಾಗಿದೆ.

Advertisement

ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆ ಪದಾಧಿಕಾರಿಗಳು ಶುಕ್ರವಾರ ಅಧಿಕಾರಿ
ಶ್ರೀನಿವಾಸ ಅವರನ್ನು ಭೇಟಿಯಾಗಿ ಮನವಿ ಮಾಡಿದರು. ಈಗಾಗಲೇ ಶಾಲಾ-ಕಾಲೇಜು ಆರಂಭವಾಗಿ ಪ್ರವೇಶ ಪಡೆಯಲು ಜಾತಿ ಆದಾಯ, ವಾಸಸ್ಥಳ ಸೇರಿ ಇತರೆ ಪ್ರಮಾಣ ಪತ್ರಗಳಿಗೆ ವಿದ್ಯಾರ್ಥಿಗಳು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಪದೇ-ಪದೇ ನೆಟ್‌ವರ್ಕ್‌ ತೊಂದರೆಯಿಂದ ರೈತರ ಕೆಲಸ ಕಾರ್ಯಕ್ಕೆ ತೊಡಕು ಉಂಟಾಗಿದೆ
ಎಂದು ದೂರಿದರು.

ಇಂದೋ ನಾಳೆ ಸಮಸ್ಯೆ ಬಗೆಹರಿಸುವ ಅಧಿಕಾರಿಗಳ ಮಾತಿಗೆ ಬಹುತೇಕರು ಕಚೇರಿಗೆ ಬಂದು ವಾಪಸ್‌ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಾಡಳಿತ ಸಾರ್ವಜನಿಕರ ಸಮಸ್ಯೆ ತಕ್ಷಣ ಸ್ಪಂದಿಸುವಂತೆ ಕೆಲಸ
ಆಗಬೇಕಾಗಿದೆ. ಇನ್ನೂ ಪಹಣಿ ಸಮಸ್ಯೆಯಂತೂ ಹೇಳತೀರದಂತಾಗಿದೆ.

ಮುಂಗಾರು ಆರಂಭವಾಗಿ ಸಿಬ್ಸಿಡಿಯಲ್ಲಿ ಬೀಜಗಳು ಖರೀದಿಗೆ ಪಹಣಿ ಅವಶ್ಯವಾಗಿದೆ. ನೆಟ್‌ವರ್ಕ್‌ ಸಮಸ್ಯೆಯಿಂದ ಸಕಾಲಕ್ಕೆ ಯಾವುದೇ ಸೌಲಭ್ಯ ಸಿಗದೇ ಬಹುತೇಕರು ಬೇಸತ್ತು ಹೋಗಿದ್ದಾರೆ ಎಂದು ಕರವೇ ಮುಖಂಡ ಎಚ್‌.ಶಿವರಾಜ ದೂರಿದರು.  ಜೆಸ್ಕಾಂ ಇಲಾಖೆಗೆ ವಿದ್ಯುತ್‌ ಬಾಕಿ ಹಣ ಪಾವತಿಸಲು ವಿಳಂಬ ಮಾಡುತ್ತಿರುವುದರಿಂದ ಆಗಾಗ ವಿದ್ಯುತ್‌ ಸ್ಥಗಿತಗೊಳಿಸುತ್ತಿರುವ ಹಿನ್ನೆಲೆ ಜನಸಾಮಾನ್ಯರು ತೊಂದರೆ ಎದುರಿಸುತ್ತಿದ್ದಾರೆ. ಜಾತಿ ಆದಾಯ, ವಾಸಸ್ಥಳ ದಾಖಲಾತಿ ಸೌಲಭ್ಯ ಪಡೆಯಲು ಜನರಿಗೆ ಗ್ರಾಮಲೆಕ್ಕಧಿಕಾರಿಗಳು ಕೈಗೆ ಸಿಗುತ್ತಿಲ್ಲ ಆರೋಪಿಸಿದರು. ಈ
ಸಂದರ್ಭದಲ್ಲಿ ಜಿ.ಬಸವರಾಜ ನಾಯಕ, ಹನುಮಂತ ಮನ್ನಾಪುರಿ, ರಾಮಣ್ಣ ಕರಡಿಗುಡ್ಡ, ಶಿವರಾಜ ಮುಂಡರಗಿ,
ಎಕ್ಬಲ್‌ ಸಾಬ, ಶಿವುಕುಮಾರ ಚಲುವಾದಿ ಇದ್ದರು.

ದೇವದುರ್ಗ: ಕಳೆದ ನಾಲ್ಕು ದಿನಗಳಿಂದ ನೆಟ್‌ವರ್ಕ್‌ ಸ್ಥಗಿತವಾಗಿದ್ದರಿಂದ ಉಪನೋಂದಣೆ ಕಚೇರಿಗೆ ಬೀಗ
ಹಾಕಲಾಗಿದ್ದು, ಕೆಲಸ ಕಾರ್ಯಗಳು ಬಂದಾದ ಹಿನ್ನೆಲೆ ಜನಸಾಮಾನ್ಯರು ಪರದಾಡುವಂತಾಗಿದೆ. ಆದರೆ ಸಂಬಂಧಿ ಸಿದ ಅಧಿಕಾರಿಗಳು ಸಮಸ್ಯೆ ಸರಿದೂಗಿಸಲು ಕಾಳಜಿ ವಹಿಸದೇ ಕಚೇರಿಗೆ ಬೀಗ ಹಾಕಿದ್ದರಿಂದ ಜನರ ಆಕ್ರೋಶಕ್ಕೆ ಕಾರಣ ಎನ್ನಲಾಗುತ್ತಿದೆ.

Advertisement

ಜಮೀನು, ಮನೆ ನೋಂದಣೆ, ಋಣಭಾರ ಇಸಿ ಸೇರಿ ಇತರೆ ಕೆಲಸ ಕಾರ್ಯಗಳು ಸ್ಥತವಾಗಿದ್ದರಿಂದ ಪಟ್ಟಣ
ಸೇರಿ ಸುತ್ತಲಿನ ಗ್ರಾಮಗಳ ಜನರು ಅನೇಕ ತೊಂದರೆ ಎದುರಿಸುವಂತಾಗಿದೆ. ನೆಟ್‌ವರ್ಕ್‌ ಸ್ಥಗಿತವಾಗಿ ನಾಲ್ಕು ದಿನ
ಕಳೆದರೂ ಇಲ್ಲಿಯವರೆಗೆ ತಾಲೂಕಾಡಳಿತ ಅಧಿಕಾರಿಗಳು ಗಮನ ಹರಿಸದೇ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಸ್ಥಳೀಯ ಜನಪ್ರತಿನಿಧಿಗಳ ಕೃಪೆ ಇರುವ ಕಾರಣ ಅಧಿಕಾರಿ ಕಚೇರಿ ಸಮಯವೇ ಮರೆತು ಮನಬಂದಂತೆ
ಬರುವಿಕೆಗಾಗಿ ಜನಸಾಮಾನ್ಯರು ತಾಸುಗಟ್ಟಲೇ ಕಾಯುವಂತ ವಾತಾವರಣ ನಿರ್ಮಾಣವಾಗಿದೆ.

ಪದೇ-ಪದೇ ವಿದ್ಯುತ್‌, ನೆಟ್‌ವರ್ಕ್‌ ಸಮಸ್ಯೆಗಳು ಉಪನೋಂದಣೆ ಕಚೇರಿಗೆ ಹೊಸತನವಲ್ಲ. ಆದರೆ
ಇದಕ್ಕೆ ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳು ಪ್ರಯತ್ನಿಸುತ್ತಿಲ್ಲ ಎಂಬುವುದು ಸಾರ್ವಜನಿಕರ ಆರೋಪ. ನೆಟ್‌ ವರ್ಕ್‌ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಜನಸಾಮಾನ್ಯರ ಕೆಲಸ ಕಾರ್ಯಗಳು ಕೂಡಲೇ ಆರಂಭಿಸಲು
ಗಮನ ಹರಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ನರಸಣ್ಣ ನಾಯಕ ಜಾಲಹಳ್ಳಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next