Advertisement

ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ :  ಹಳ್ಳಿಗೆ ಬರುವ ಅಧಿಕಾರಿಗಳಿಗೆ ಸಮಸ್ಯೆಗಳ ಸ್ವಾಗತ

03:52 PM Mar 19, 2022 | Team Udayavani |

ನೆಲಮಂಗಲ: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯುವ ಗ್ರಾಮದಲ್ಲಿಯೇ ಅಕ್ರಮ ಮದ್ಯ ಮಾರಾಟದ ಜಾಲ ಹೆಚ್ಚಾಗಿದ್ದು, ನಿಯಂತ್ರಣ ಮಾಡುವಂತೆ ಮಹಿಳೆಯರು

Advertisement

ಒತ್ತಾಯ ಮಾಡಿದ್ದಾರೆ. ತಾಲೂಕಿನಲ್ಲಿ ಮಂಡಿಗೆರೆ ಸುತ್ತಮುತ್ತಲಿನ 18 ಗ್ರಾಮಗಳಲ್ಲಿ ಮೂಲಭೂತ ಸಮಸ್ಯೆ ಜತೆ ಶಾಲಾ -ಕಾಲೇಜು ಬಳಿ ಕೆರೆ ಒತ್ತುವರಿ, ಪುಂಡರ ಹಾವಳಿ, ಬೀಟ್‌ ಪೊಲೀಸ್‌ ಕೊರತೆ, ರಸ್ತೆಗಳ ಒತ್ತುವರಿ, ಕುಡಿಯುವ ನೀರಿನ ಸಮಸ್ಯೆ, ಗೋಮಾಳ ಒತ್ತುವರಿ ಸೇರಿ ‌ತ್ತಾರು ಸಮಸ್ಯೆ ಹೆಚ್ಚಾಗಿದ್ದು, ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಈ ಸಮಸ್ಯೆಗಳು ಪ್ರತಿಧ್ವನಿಸುವ ನಿರೀಕ್ಷೆಯಿದೆ.

ಮಂಡಿಗೆರೆ ಗ್ರಾಮಕ್ಕೆ ಅಧಿಕಾರಗಳ ದಂಡು: ಕಂದಾಯ ಇಲಾಖೆ ಅಧಿಕಾರಿಗಳು ಸೇರಿ ಕೃಷಿ ಇಲಾಖೆ, ತೋಟಗಾರಿಕೆ, ಪಶುಸಂಗೋಪನಾ ಇಲಾಖೆ, ಮಹಿಳಾಮಕ್ಕಳ ಇಲಾಖೆ , ಪೊಲೀಸ್‌ ಇಲಾಖೆ, ಅಬಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದು, ಕೆಲ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ವ್ಯವಸ್ಥೆ ಮಾಡಲು ತಹಶೀಲ್ದಾರ್‌ ಯೋಜನೆ ರೂಪಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಆಗಮನದಿಂದ ಸಮಸ್ಯೆಗಳ ನಿವಾರಣೆಯ ಭರವಸೆಯಲ್ಲಿ ಜನರಿದ್ದು, ವಾಸ್ತವ್ಯದ ನಂತರ ಕಾರ್ಯಕ್ರಮದ ಫ‌ಲಿತಾಂಶ ತಿಳಿಯಲಿದೆ.

ಅಕ್ರಮ ಮಾರಾಟಕ್ಕೆ ಬ್ರೇಕ್‌ ಸಾಧ್ಯವೇ?:

ಮಂಡಿಗೆರೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಜಾಲ ಹೆಚ್ಚಾಗಿದೆ. ಈಗಾಗಲೇ ಕುಡಿದ ಮತ್ತಿ ನಿಂದ 10ಕ್ಕೂ ಹೆಚ್ಚು ಕೌಟಂಬಿಕ ಕಲಹದ ದೂರು20ಕ್ಕೂ ಹೆಚ್ಚು ಜನರು ಮರಣ ಹೊಂದಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಗ್ರಾಮದ ಶೇ. 80ರಷ್ಟು ಯುವಕರು ಮಧ್ಯದ ಚಟಕ್ಕೆ ಬಿದ್ದಿದ್ದು, ಈ ಅಕ್ರಮ ಜಾಲ ಗ್ರಾಮದ ಜನರನ್ನು ನಿದ್ದೆಗೆಡಿಸಿದೆ. ಅಬಕಾರಿ ಇಲಾಖೆ ಹಾಗೂ ಪೊಲೀಸ್‌ ಇಲಾಖೆಗೆ ಮನವಿ ಮಾಡಿದರೂ, ಸಮಸ್ಯೆಗೆ ಪರಿಹಾರ ಸಿಗದೇ ಮಹಿಳೆಯರು ಕಣ್ಣೀರಿನಲ್ಲಿ ಜೀವನ ಮಾಡುತ್ತಿದ್ದಾರೆ. ಗ್ರಾಮದಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟ ಸಂಪೂರ್ಣ ನಿಲ್ಲಿಸ ಬೇಕು ಎಂದು ಗ್ರಾಮದ ಮಹಿಳೆಯರು ಒತ್ತಾಯ ಮಾಡಿದ್ದಾರೆ.

Advertisement

ಕೆರೆಗಳ ಒತ್ತುವರಿ: ಬೂದಿಹಾಳ್‌ ಗ್ರಾಪಂ ವ್ಯಾಪ್ತಿಯ ಕೆರೆಗಳ ಒತ್ತುವರಿ ಹೆಚ್ಚಾಗಿದ್ದು, ಬೊಮ್ಮನಹಳ್ಳಿ ಕೆರೆಯ ಮಧ್ಯಭಾಗದಲ್ಲಿಯೇ ರಸ್ತೆ ಮಾಡಿ ಕೆರೆಯ ಜಾಗ ಕಬಳಿಕೆ ಮಾಡುವ ಉನ್ನಾರ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗ್ರಾಪಂ ಕೆಲ ಅಧಿಕಾರಿಗಳು ಹಣವಂತರ ಪರವಾಗಿದ್ದು, ಬಡಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬ ಬಲವಾದ ಆರೋಪಗಳು ಸಹ ಕೇಳಿಬಂದಿದೆ. ಬೂದಿಹಾಳ್‌ ಸುತ್ತಮುತ್ತಲು ಕಾರ್ಯನಿರ್ವಹಿಸುವ ಕಂಪನಿ ಸಿಎಸ್‌ಆರ್‌ ಹಣದಲ್ಲಿ ಸ್ಥಳೀಯವಾಗಿ ಯಾವುದೇ ಅನುಕೂಲ ಮಾಡದಿದ್ದರೂ ಕ್ರಮವಾಗಿಲ್ಲ.

ಸಕಲ ತಯಾರಿ: ಬೂದಿಹಾಲ್‌ ಗ್ರಾಪಂ ವ್ಯಾಪ್ತಿಯ ಮಂಡಿಗೆರೆ ಗ್ರಾಮದ ಪ್ರೌಢ ಶಾಲೆ ಯಲ್ಲಿ ಶನಿವಾರ(ಇಂದು) ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯುತ್ತಿದ್ದು ತಹಶೀಲ್ದಾರ್‌ ಕೆ.ಮಂಜುನಾಥ್‌ ನೇತೃತ್ವದಲ್ಲಿ ತಯಾರಿ ಕೆಲಸ ನಡೆಸಲಾಗಿದೆ. ಗ್ರಾಮಗಳ ಜನರಿಗೆ ಪಿಂಚಣಿ, ವಿಚೇತನರಿಗೆ ಸಲಕರಣೆ ಸೇರಿದಂತೆ ವಿವಿಧ ಸೌಲಭ್ಯ ನೀಡಲು ಪೂರ್ವ ತಯಾರಿ ಸಹ ಮಾಡಲಾಗಿದೆ. ತಹಶೀಲ್ದಾರ್‌ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಜಿಲ್ಲಾಧಿಕಾರಿ ಆಗಮಿಸುವ ಒತ್ತಾಯ ಹೆಚ್ಚಾಗಿವೆ.

ಜಿಲ್ಲಾಧಿಕಾರಿ ಸೂಚನೆಯಂತೆ ಕಾರ್ಯಕ್ರಮದ ಸಂಪೂರ್ಣ ತಯಾರಿ ಮಾಡಿಕೊಂಡಿದ್ದು, ಮಂಡಿಗೆರೆ ಸುತ್ತಮುತ್ತಲಿನ ಗ್ರಾಮದ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳುವ ಜತೆ ದೂರು ನೀಡಬಹುದಾಗಿದೆ. ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿರುತ್ತಾರೆ.

ಕೆ. ಮಂಜುನಾಥ್‌, ನೆಲಮಂಗಲ ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next