ಕೊಪ್ಪಳ: ನೆಕ್ಕಂಟಿ ನಾಗರಾಜ ಇದರಲ್ಲಿ ಅಮಾಯಕ. ಆತನು ಅಧಿಕಾರಿಯಲ್ಲ, ಯಾವುದೇ ಸಚಿವರ ಪಿಎ ಅಲ್ಲ. ಆತ ಸಾಮಾನ್ಯ ವ್ಯಕ್ತಿ ಅಷ್ಟೇ. ಯಾವುದೇ ಸ್ಥಾನಮಾನವೂ ಆತನಿಗೆ ಇಲ್ಲ. ಆದರೂ ಆತನನ್ನು ಬಂಧಿಸಿದ್ದಾರೆ, ಈ ಪ್ರಕರಣ ತನಿಖೆಯಲ್ಲಿದೆ. ಆತನ ಬಗ್ಗೆ ನಾನು ಸಾಪ್ಟ್ ಎಂದೇನೂ ಇಲ್ಲ. ಆತನು ಆರೋಪಿ ಅಷ್ಟೇ ಅಪರಾಧಿ ಅಲ್ಲ. ತನಿಖೆ ನಡೆಯಲಿ ಸತ್ಯಾಸತ್ಯತೆ ಹೊರ ಬರುತ್ತದೆ ಎಂದು ಮಾಜಿ ಶಾಸಕ ಬಸವರಾಜ ದಡೆಸಗೂರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಕ್ಕಂಟಿ ನಾಗರಾಜ ನನ್ನ ಸ್ನೇಹಿತ, ಸಚಿವ ಶಿವರಾಜ ತಂಗಡಗಿಗೂ ಸ್ನೇಹಿತ. ಆತನು ನಾಗೇಂದ್ರನಿಗೂ ಸ್ನೇಹಿತ. ಎಲ್ಲ ನಾಯಕರೊಂದಿಗೂ ಆತನು ಒಡನಾಟ ಇದೆ ಎಂದರು.
ಅಧಿಕಾರಿಗಳ ವರ್ಗಾವಣೆ ದಂಧೆ ವಿಚಾರವಾಗಿ ಮಾತನಾಡಿ, ಈ ಸರ್ಕಾರದಲ್ಲಿ ಪ್ರತಿ 11 ತಿಂಗಳು ಅಧಿಕಾರಿಗಳ ವರದಿ ಪಡೆದು ವರ್ಗಾವಣೆ ಮಾಡಲಾಗುತ್ತಿದೆ. ನಮ್ಮ ಸರ್ಕಾರದಲ್ಲಿ ಇಂಹ ವ್ಯವಸ್ಥೆ ಇರಲಿಲ್ಲ. ಕನಿಷ್ಟ ಎರಡು ವರ್ಷ ಅಧಿಕಾರಿಗಳು ಇರುತ್ತಿದ್ದರು. ಕೊಪ್ಪಳ ಎಸ್ಪಿ ವರ್ಗಾವಣೆಗೆ ಮೂವರು ಶಾಸಕರು ತಡೆ ಮಾಡಿದರೆ ಜಿಲ್ಲಾ ಮಂತ್ರಿ ಶಿವರಾಜ ತಂಗಡಗಿ ವರ್ಗಾವಣೆ ಮಾಡಿಸಿದ್ದಾರೆ. ಈಗಿನ ಮಂತ್ರಿಯು ವರ್ಗಾವಣೆ ದಂಧೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ನಾನು ಕ್ಲೀನ್ ಎನ್ನುತ್ತಾರೆ. ಆದರೆ ಹಿಂದಿನ ಬಾಗಿಲಿಂದ ಎಲ್ಲ ಮಂತ್ರಿಯಿಂದ ಹಣ ಪಡೆಯುತ್ತಿದ್ದಾರೆ. ಸಿಎಂ ಶಿವರಾಜ ತಂಗಡಗಿಗೆ 11 ನಿಗಮಗಳ ಹೊಣೆ ಕೊಟ್ಟಿದ್ದಾರೆ. ಸಚಿವರ ಗಮನಕ್ಕೆ ಸಿಎಂ ಗಮನಕ್ಕೆ ಬಾರದೇ ಇವೆಲ್ಲ ನೆಡೆಯಲ್ಲ ಎಂದರು.