Advertisement
ಮಣಿಪಾಲದ ಸ್ಕೂಲ್ ಆಫ್ ಕಮ್ಯು ನಿಕೇಶನ್ (ಎಸ್‌ಒಸಿ) ಆಯೋಜಿಸಿದ ಸಂವಹನ ಹಬ್ಬ “ಆರ್ಟಿಕಲ್ 19’ನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ತಾನು ಸಫಾಯಿ ಕರ್ಮ ಚಾರಿ ಕುಟುಂಬದಿಂದ ಬಂದವನು. ನನಗೆ ಆ ವೃತ್ತಿಯ ಕಷ್ಟ ಗೊತ್ತಿದೆ. ಪೌರ ಕಾರ್ಮಿಕ ವೃತ್ತಿಯಲ್ಲಿ ಇರುವವರು ಶೇ. 93 ಮಹಿಳೆಯರು ಎಂದರು. ಇಸಂ, ಸಂಸ್ಕೃತಿಯಿಂದಲ್ಲ ಯಾಂತ್ರೀಕೃತವಲ್ಲದ ಮಾನವ ತ್ಯಾಜ್ಯ ನಿರ್ವಹಣೆ (ಮ್ಯಾನುವಲ್ ಸ್ಕಾವೆಂಜರ್) ಇಂದಿಗೂ ನಡೆಯು ತ್ತಿದೆ. ಇದನ್ನು ಪ್ರಶ್ನಿಸಿದರೆ ಆಕ್ಷೇಪಿಸುವ ಮನಸ್ಸೂ ಇದೆ. ಹಣ ಕೊಡು ವುದಿಲ್ಲವೆ ಎಂಬ ಪ್ರಶ್ನೆ ಇದಿರಾಗುತ್ತದೆ. ದೇಶದ ಯಾವುದೇ ನಗರದಲ್ಲಿ ಪರಿಪೂರ್ಣ ಯಾಂತ್ರೀಕೃತ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಇಲ್ಲ. ಯಾವುದೇ ಹಳ್ಳಿಗಳಲ್ಲಿ ಪ್ರಜಾಪ್ರಭುತ್ವ ಇಲ್ಲ. ಇಲ್ಲಿ ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕೆಲಸ ಮಾಡುತ್ತಿಲ್ಲ. ಸಂವಿಧಾನದ ಕಲಂ 19 ಮತ್ತು ಅಸ್ಪೃಶ್ಯತೆ ಎರಡೂ ಏಕಕಾಲದಲ್ಲಿರಲು ಸಾಧ್ಯವೆ? 35 ವರ್ಷಗಳ ಅನಂತರ ನನ್ನ ಪೂರ್ವಜರ ಸಂಪರ್ಕ ಹೊಂದದೆಯೂ ನನ್ನನ್ನು ಭಂಗಿ ಎಂದು ದಿಲ್ಲಿ ಪ್ರಸ್ ಕ್ಲಬ್‌ನಲ್ಲಿ ಹೇಳುತ್ತಾರೆ. ಸಂವಿಧಾನದಿಂದ ನಾವು ಬದುಕುವುದೇ ವಿನಾ ಯಾವುದೇ ಇಸಂ, ಸಂಸ್ಕೃತಿಯಿಂದಲ್ಲ ಎಂದರು.
ಹಿಂದೆ ಪೌರಕಾರ್ಮಿಕ ಜನಾಂಗದವರು ಸತ್ತ ಪ್ರಾಣಿ ಕೊಂಡೊಯ್ದು ತಿನ್ನುತ್ತಿದ್ದರು. ಊಟಕ್ಕೆ ಗತಿ ಇರಲಿಲ್ಲ. ಈಗ ಇಂತದೇ ಆಹಾರ ತಿನ್ನಬೇಕೆಂಬ ವಾದ ಹೇರುತ್ತಿದ್ದಾರೆ. ನಾವು ಯಾವುದೇ ಆಹಾರ ತಿನ್ನಬಹುದು. ಇಂತಹುದೇ ಬಟ್ಟೆ ಧರಿಸಿ ಎಂದು ಹೇಳುವ ಅಧಿಕಾರವಿದೆಯೆ? ಪ್ರೇಮಿಗಳ ದಿನದಂದು ಗಂಡುಹೆಣ್ಣು ಪ್ರೀತಿಸಿದರೆ ಅದಕ್ಕೂ ಆಕ್ಷೇಪಿಸುತ್ತಾರೆ. ಪ್ರೀತಿಸಲು ಯಾರ ಅಪ್ಪಣೆ
ಬೇಕು? ಎಂದರು. ಪ್ರಜಾಪ್ರಭುತ್ವವಿಲ್ಲ
ಭಾರತದಲ್ಲಿ ಪುರುಷ ಪ್ರಧಾನ ಸಮಾಜವಿದೆ. ಹೆಮ್ಮಕ್ಕಳು ಕೆಲಸಕ್ಕೆ ಹೋಗುವ ಪ್ರವೃತ್ತಿ ಬೆಳೆದ ಅನಂತರ ಪುರುಷರ ಅನುಕೂಲಕ್ಕಾಗಿ ಕುಕ್ಕರ್, ಮಿಕ್ಸಿಯಂತಹ ಯಂತ್ರಗಳು ಚಾಲ್ತಿಗೆ ಬಂದವು. ಹೀಗಾಗಿ ಅಡುಗೆ ಮನೆ ಯಲ್ಲಿಯೂ ಪ್ರಜಾಪ್ರಭುತ್ವವಿಲ್ಲ.
ಎಸ್‌ಒಸಿ ನಿರ್ದೇಶಕಿ ಡಾ| ನಂದಿನಿ ಲಕ್ಷ್ಮೀಕಾಂತ್ ಸ್ವಾಗತಿಸಿದರು. ಕಾರ್ಯ ಕ್ರಮದ ಯೋಜಕರಾದ ಕಾರ್ತಿಕ್ ರಾಜಗೋಪಾಲ್ ಪ್ರಸ್ತಾವನೆಗೈದು ಮಾಲವಿಕಾ ಮೆನನ್ ವಂದಿಸಿದರು. ಹಿರಿಯಡಕ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿ ಶೆಟ್ಟಿ, ಬೋಧಕ ಸಂಚಾಲಕಿ ಶ್ರುತಿ ಟ್ಟಿ ಉಪಸ್ಥಿತರಿದ್ದರು.