ಆದ್ಯತೆ ನೀಡಬೇಕು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕಾರಿಪುರ ತಾಲೂಕಿನ ನೀರಾವರಿ ಯೋಜನೆ ಅನುಷ್ಠಾನದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಶಾಸಕ ಬಿ.ವೈ. ರಾಘವೇಂದ್ರ ಆರೋಪಿಸಿದರು.
Advertisement
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತಾಲೂಕು ಮುಖಂಡರೊಂದಿಗೆ ಚುನಾವಣೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲ ತಾಂಡವವಾಡುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಈ ಪರಿಸ್ಥಿತಿಯನ್ನು ಗಮನಿಸಿ ಯಡಿಯೂರಪ್ಪನವರು ಕೇಂದ್ರದ ಜಲಸಂಪನ್ಮೂಲ ಸಚಿವರ ಜೊತೆ ಸಮಾಲೋಚಿಸಿ ತಾಲೂಕಿನ ನಾಲ್ಕು ಶಾಶ್ವತ ನೀರಾವರಿ ಯೋಜನೆ ಅನುಷ್ಠಾನದ ಬಗ್ಗೆ ಒತ್ತಡ ತಂದ ಪರಿಣಾಮವಾಗಿ ಕೇಂದ್ರದ ದಕ್ಷಿಣ ರಾಜ್ಯದ ಮಾನಿಟರಿಂಗ್ ಕಮಿಟಿ, ಬಂದು ಸಮೀಕ್ಷೆ ನಡೆಸಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪೂರಕವಾಗಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಡಿ.ಪಿ.ಆರ್. ತಯಾರಿಸಲು 3 ಬಾರಿ ಪತ್ರ ಬರೆದಿದ್ದರೂ ರಾಜ್ಯ ಸರ್ಕಾರ ಉಪೇಕ್ಷೆ ಮಾಡಿ ಇದುವರೆಗೆ ಡಿ.ಪಿ.ಆರ್. ತಯಾರಿಸಿ ಕಳುಹಿಸಲಿಲ್ಲ. ಮುಖ್ಯಮಂತ್ರಿಗಳು ಬಜೆಟ್‌ಲ್ಲೂ ಈ ನೀರಾವರಿ ಯೋಜನೆಗಳಿಗೆ ಅನುದಾನ ಮಿಸಲಿಟ್ಟಿಲ್ಲ ಎಂದುವಾಗ್ಧಾಳಿ ನಡೆಸಿದರು ಶಿಕಾರಿಪುರ ತಾಲೂಕಿನಲ್ಲೂ ರೈತರು, ಬಡವರು ಇದ್ದಾರೆ. ಅವರ ಕಷ್ಟಕ್ಕೆ ನೀರಾವರಿ ಯೋಜನೆಗಳ
ಮೂಲಕ ಸ್ಪಂದಿಸದ ನೀವು ಯಾವ ನೈತಿಕತೆ ಆಧಾರದ ಮೇಲೆ ಶಿಕಾರಿಪುರಕ್ಕೆ ಮತಯಾಚನೆ ಮಾಡಲು ಆಗಮಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ತಾಲೂಕಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.