Advertisement

ಅಧಿಕಾರಿಗಳ ನಿರ್ಲಕ್ಷ್ಯ: ಸರ್ಕಾರಿ ಶಾಲೆ ಜಾಗ ಅತಿಕ್ರಮಣ

12:28 PM Apr 17, 2022 | Team Udayavani |

ರಬಕವಿ-ಬನಹಟ್ಟಿ: ಹನಗಂಡಿ ಗ್ರಾಮದ ಸರ್ಕಾರಿ ತೋಟದ ಶಾಲೆ ನಂ. 1ಕ್ಕೆ ಮಂಜೂರಾದ ಸ್ಥಳವನ್ನು ಶಾಲೆಯ ಸುತ್ತಮುತ್ತಲಿನ ಜನರು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಿವಾನಂದ ಕುಂಟಶೆಟ್ಟಿ ಆರೋಪಿಸಿದರು.

Advertisement

ಹನಗಂಡಿ ಶಾಲಾ ಆವರಣದಲ್ಲಿ ಪತ್ರಿಕೆಯ ಜತೆ ಮಾತನಾಡಿ, ಅತಿಕ್ರಮಣದ ಕುರಿತು ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ಜಮಖಂಡಿ ಉಪವಿಭಾಗಾಧಿಕಾರಿಗಳಿಗೆ, ತಹಶೀಲ್ದಾರ್‌, ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಸರ್ವೇ ಅಧಿಕಾರಿಗಳಿಗೆ 2019ರಿಂದ 8-4-2022ರವರೆಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಈ ಕುರಿತು ಸರ್ವೇ ಅಧಿಕಾರಿಯನ್ನು ಶಾಲೆಯ ಜಾಗದ ಸರ್ವೇ ಮಾಡಿ ಎಂದು ಕೇಳಿದರೆ ಅವರು ನಾನು ಸರ್ವೇ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದರು.

ಶಾಲೆಗೆ ಒಟ್ಟು 6 ಎಕರೆ 18 ಗುಂಟೆ ಜಾಗ ಕಟ್ಟಡ ಮತ್ತು ಆಟದ ಮೈದಾನಕ್ಕೆ ನೀಡಲಾಗಿದೆ. ಆದರೆ ಸುತ್ತಮುತ್ತಲಿನ ಒತ್ತುವರಿಯಿಂದಾಗಿ ಈಗ ಕೇವಲ 3 ಎಕರೆಯಷ್ಟು ಜಾಗ ಮಾತ್ರ ಉಳಿದುಕೊಂಡಿದೆ. ಈ ಶಾಲೆಯಲ್ಲಿ ಹನಗಂಡಿ ಹಾಗೂ ಸುತ್ತಮುತ್ತಲಿನ ತೋಟದ ಪ್ರದೇಶದ 1ನೇ ತರಗತಿಯಿಂದ 8ನೇ ವರ್ಗದವರೆಗೆ 304 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎನ್‌ಎನ್‌ಎಂಎಸ್‌ ಪರೀಕ್ಷೆ ತೇರ್ಗಡೆ ಮಾಡಿದ್ದಾರೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಬೇಗನೆ ಸರ್ವೇ ಕಾರ್ಯ ನಡೆಸಿ ಅತಿಕ್ರಮಣ ಜಾಗೆಯನ್ನು ಶಾಲೆಗೆ ಮರಳಿಸದೆ ಇದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಜತೆಗೂಡಿ ತಹಶೀಲ್ದಾರ್‌ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಸ್‌ಡಿಎಂಸಿ ಸದಸ್ಯ ಸುಭಾಸ ಮುರಗುಂಡಿ ತಿಳಿಸಿದರು.

ಶಾಲೆ ಜಾಗ ಅತಿಕ್ರಮಣವಾಗಿದೆ. ಆದಷ್ಟು ಬೇಗನೆ ಸರ್ವೇ ಕಾರ್ಯ ಕೈಗೊಳ್ಳಲಾಗುವುದು. ಈ ಕುರಿತು ಅಧಿಕಾರಿಗಳಿಗೆ ತಿಳಿಸುತ್ತೇನೆ. -ಸಿದ್ದು ಸವದಿ, ಶಾಸಕರು ತೇರದಾಳ

ಅತಿಕ್ರಮಣ ಕುರಿತು ತಹಶೀಲ್ದಾರ್‌ ಕಾರ್ಯಾಲಯಕ್ಕೆ ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಸರ್ವೇ ಕಾರ್ಯಕ್ಕೆ ಆಗ್ರಹಿಸಿ ಮನವಿ ನೀಡಿದ್ದಾರೆ. ಈ ಕುರಿತು ತಹಶೀಲ್ದಾರ್‌ ಅವರ ಗಮನಕ್ಕೂ ತರಲಾಗಿದೆ. ಬೇಗನೆ ಸರ್ವೇ ಕಾರ್ಯ ನಡೆಸಬೇಕು ಮತ್ತು ಶಾಲೆ ಪ್ರದೇಶಕ್ಕೆ ಬೌಂಡರಿ ಹಾಕಿಕೊಡಬೇಕು ಎಂದು ತಹಶೀಲ್ದಾರ್‌ ಅವರಿಗೆ ಒತ್ತಾಯಿಸುತ್ತೇನೆ. -ಸಿ.ಎಂ.ನ್ಯಾಮಗೌಡ, ಬಿಇಒ ಜಮಖಂಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next