Advertisement

Neglect of Kannada: ಕಾಸರಗೋಡಿನಲ್ಲಿ ಕನ್ನಡಕ್ಕೆ ಕುತ್ತು: ಕೇರಳಕ್ಕೆ ರಾಜ್ಯದ ಆಕ್ಷೇಪ ಪತ್ರ

02:44 AM Dec 02, 2024 | Team Udayavani |

ಬೆಂಗಳೂರು: ಕಾಸರಗೋಡು ಜಿಲ್ಲೆಯ ಕೇರಳ ಸರಕಾರಿ ಶಾಲೆಗಳ ಪಠ್ಯೇತರ ಕಾರ್ಯಕ್ರಮಗಳಲ್ಲಿಯೂ ಕನ್ನಡದ ಅವಗಣನೆ ಬಗ್ಗೆ “ಉದಯವಾಣಿ’ ವರದಿಗೆ ಸ್ಪಂದಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಈ ಬಗ್ಗೆ ಕೇರಳ ಸರಕಾರಕ್ಕೆ ಪತ್ರ ಬರೆದು ಆಕ್ಷೇಪ ಸಲ್ಲಿಸುವುದಾಗಿ ಹೇಳಿದೆ.

Advertisement

ಉದಿನೂರಿನಲ್ಲಿ ಈಚೆಗೆ ನಡೆದ ಶಾಲಾ ಕಲೋತ್ಸವದಲ್ಲಿ ಕನ್ನಡವನ್ನು ನಿರ್ಲಕ್ಷಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿ ಸಿರುವ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಎರಡು ಭಾಷೆಗಳ ವಿದ್ಯಾರ್ಥಿಗಳು ಇರುವಲ್ಲಿ ರಾಜ್ಯ ಸರಕಾರಗಳು ಎರಡೂ ಭಾಷೆ ಬಳಸಲೇಬೇಕು. ಬಳಸದೆ ಇರುವುದು ಸಂವಿಧಾನ ವಿರೋಧಿ ಕ್ರಮ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರಕ್ಕೆ ಪತ್ರ ಮೂಲಕ ತೀವ್ರ ಪ್ರತಿಭಟನೆ ವ್ಯಕ್ತಪಡಿಸಲಿದೆ ಎಂದರು.

ಕಾಸರಗೋಡು ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕಲೋತ್ಸವದಲ್ಲಿ ಕನ್ನಡವನ್ನು ನಿರ್ಲಕ್ಷಿಸಲಾಗಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. -ಶಿವರಾಜ್‌ ತಂಗಡಗಿ, ಕ‌ನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next