Advertisement

ಕೇಂದ್ರ, ರಾಜ್ಯ ಸರ್ಕಾರಗಳಿಂದ ಅಂಗನವಾಡಿ ಕಾರ್ಯಕರ್ತೆಯರ ನಿರ್ಲಕ್ಷ್ಯ 

02:00 PM Jul 09, 2018 | Team Udayavani |

ಶಿರಾ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಗನವಾಡಿ ಕಾರ್ಯಕರ್ತೆಯರನ್ನು ನಿರ್ಲಕ್ಷಿಸುತ್ತಿದ್ದು 75 ರೂ. ನಿಂದ ಪ್ರಾರಂಭವಾದ ಗೌರವಧನ ಎನ್ನುವ ಅನಿಷ್ಠ ಪದ್ಧತಿ ಇನ್ನೂ ಮುಂದುವರಿದಿದೆ ಎಂದು ಎ.ಐ.ಟಿ.ಯು.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್‌ ಆಪಾದಿಸಿದರು.

Advertisement

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್‌ ಎ.ಐ.ಟಿ.ಯು.ಸಿ. ಶಿರಾ ತಾಲೂಕು ತುಮಕೂರು ಜಿಲ್ಲೆ ಕಾರ್ಯಕರ್ತರು ತಮ್ಮ ಅನೇಕ ಬೇಡಿಕೆಗಳ ಮನವಿ ಪತ್ರವನ್ನು ಶಿರಾ ಗ್ರೇಡ್‌ 2 ತಹಶೀಲ್ದಾರ್‌ ಮುರುಳೀಧರ್‌ ರವರಿಗೆ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

ಚುನಾಯಿಸಿ ಬಂದಂತ ಎಲ್ಲಾ ಸರ್ಕಾರಗಳಲ್ಲೂ ಕನಿಷ್ಠ ವೇತನ ನಿಗಧಿಯಾಗಬೇಕು, ಸೇವೆ ಕಾಯಂ ಮಾಡಬೇಕು, ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣನೆ ಮಾಡಬೇಕು ಎಂದು ಒತ್ತಾಯಮಾಡಿ ಅನೇಕ ಚಳುವಳಿಗಳನ್ನು ಮಾಡಿದ್ದೇವೆ. ಕಾರ್ಯಕರ್ತೆಯರ ಸಂಬಳವನ್ನು ಐನೂರು, ಸಾವಿರ ರೂ. ಗಳವರೆಗೆ ಹೆಚ್ಚಿಸಲು ಪ್ರತಿಭಟನೆಗಳನ್ನು ಮಾಡಬೇಕಾದಂತ ಪರಿಸ್ಥಿತಿ ಬಂದಿದೆ ಎಂದರು.

ಕಾರ್ಮಿಕ ವಿರೋಧಿ ನೀತಿ: ಕಾರ್ಮಿಕ ವಿರೋಧಿ ಹಾಗೂ ಮಹಿಳಾ ವಿರೋಧಿ ಕಾರ್ಯವನ್ನು ಕೇಂದ್ರ ಸರ್ಕಾರಕೈ ಬಿಡಬೇಕು. ರಾಜ್ಯದಲ್ಲಿ ಇತ್ತೀಚೆಗೆ ಮಂಡನೆಯಾದ ಬಜೆಟ್‌ನಿಂದ ರೈತರಿಗೆ ಸ್ವಲ್ಪ ಮಟ್ಟಿಗೆ ಸಹಾಯವಾಗಿದೆ ಆದರೆ ಪೆಟ್ರೋಲ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಶ್ರೀಸಾಮಾನ್ಯರಿಗೆ ತುಂಬಲಾರದ ನಷ್ಟವಾಗಿದೆ. ಇದಕ್ಕೆ ನಮ್ಮ ಧಿಕ್ಕಾರವಿದೆಎಂದು ಹೇಳಿದರು.

ಮಿನಿ ಅಂಗನವಾಡಿ ಮೇಲ್ದರ್ಜೆಗೇರಿಸಿ: ಇದೇ ಸಂದರ್ಭದಲ್ಲಿ ಮಾತನಾಡಿದ ಎ.ಎಸ್‌.ಡಿ.ಸಿ.ಹೋರಾಟಗಾರ ಗಿರಿಜಣ್ಣ ಮಾತನಾಡಿ ಮಿನಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಬೇಕು ಹಾಗೂ ಅವರಿಗೆ ಸಹಾಯಕರನ್ನು ನೀಡಬೇಕುಎಂದು ಒತ್ತಾಯಿಸಿದರು.

Advertisement

ಸರ್ಕಾರಿ ನೌಕರರೆಂದು ಪರಿಗಣಿಸಿ: ಎ.ಐ.ಟಿ.ಯು.ಸಿ. ಕಾರ್ಯದರ್ಶಿ ಕಾಂತರಾಜು ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರನ್ನು ರೆವಿನ್ಯೂ ಇಲಾಖೆ, ಐ.ಸಿ.ಡಿ.ಎಸ್‌. ಇಲಾಖೆ, ಚುನಾವಣಾ ಕಾರ್ಯಗಳಲ್ಲೂ ಬಳಸಿಕೊಳ್ಳುತ್ತಿದ್ದು ಇವರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡದಿರುವುದು ಖಂಡನೀಯ.

ಪ್ರತಿಭಟನೆಯಲ್ಲಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ಹೆಚ್‌.ರಾಜಮ್ಮ, ಪ್ರಧಾನ ಕಾರ್ಯದರ್ಶಿ ಹೆಚ್‌.ಎನ್‌.ಕಲಾವತಿ, ಖಜಾಂಚಿ ಮೀನಾಕ್ಷಿ, ಕಾರ್ಯದರ್ಶಿ ವಜನಾಕ್ಷಿ, ಸಹಕಾರ್ಯದರ್ಶಿ ಲೀಲಾವತಿ ಹಾಗೂ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿರಯ ಭಾಗವಹಿಸಿದ್ದರು.

ನಗರದ ಐ.ಬಿ.ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾ ನಿರತ ಕಾರ್ಯಕರ್ತೆಯರು ಎರಡೂ ಸರ್ಕಾರಗಳ ವಿರುದ್ಧ ಘೋಷಣೆಕೂಗುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಿರಾ ತಹಶೀಲ್ದಾರ್‌ ಕಚೇರಿಗೆ ತೆರಳಿ ಗ್ರೇಡ್‌ 2 ತಹಶೀಲ್ದಾರ್‌ ಮುರುಳೀಧರ್‌ರವರಿಗೆ ಮನವಿ ಪತ್ರ ಸಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next