Advertisement
ಕಾರ್ಕಳ ತಾಲೂಕಿನಲ್ಲಿ ಕಾರ್ಕಳ ಹಾಗೂ ಅಜೆಕಾರಿನ ಹೋಬಳಿ ಕೇಂದ್ರದಲ್ಲಿ ರೈತ ಸಂಪರ್ಕ ಕೇಂದ್ರಗಳಿವೆ. ಹೆಬ್ರಿ ತಾಲೂಕು ಹೊಸದಾಗಿ ರಚನೆಯಾಗಿದ್ದು ಹೋಬಳಿಗಳ ನಿರ್ಮಾಣವಾಗಲೀ, ರೈತ ಸಂಪರ್ಕ ಕೇಂದ್ರವಾಗಲೀ ಆಗಿಲ್ಲ. ಹೀಗಾಗಿ ಹೆಬ್ರಿ ತಾಲೂಕಿನ ಗ್ರಾಮಗಳು ಅಜೆಕಾರು ಮತ್ತು ಕುಂದಾಪುರ ಹೋಬಳಿಗಳಲ್ಲಿ ಹಂಚಿ ಹೋಗಿವೆ.
Related Articles
Advertisement
ಹೆಬ್ರಿಯಲ್ಲೇ ರೈತ ಸಂಪರ್ಕ ಕೇಂದ್ರ ಸ್ಥಾಪನೆಯಾದರೆ ಸರಕಾರ ನೀಡುವ ಬಿತ್ತನೆ ಬೀಜಗಳು, ಗೊಬ್ಬರಗಳು, ಕೃಷಿ ಪರಿಕರಗಳು ಸೇರಿದಂತೆ ಅನೇಕ ಸೇವೆಗಳು ಸ್ಥಳೀಯ ಮಟ್ಟದಲ್ಲೇ ಅಂದರೆ 15 ಕಿ.ಮೀ. ಅಂತರದಲ್ಲಿ ದೊರಕಲಿವೆ.
ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪ
ಹೆಬ್ರಿ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರ ಇಲ್ಲದೆ ಇರುವುದರಿಂದ ರೈತರಿಗೆ ಆಗುವ ತೊಂದರೆಗಳ ಕುರಿತು ಹಲವು ಬಾರಿ ಸರಕಾರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಜನಸಂಪರ್ಕ ಸಭೆಯಲ್ಲೂ ಒತ್ತಾಯ ಕೇಳಿಬಂದಿತ್ತು.
ಸರಕಾರದಿಂದ ಅನುಮೋದನೆ ಅಗತ್ಯ
ತಾಲೂಕು ಹಾಗೂ ಹೋಬಳಿ ಕೇಂದ್ರವಾಗಿರುವ ಹೆಬ್ರಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ, ಕೇಂದ್ರಕ್ಕೆ ಅವಶ್ಯವಿರುವ ಹುದ್ದೆಗಳ ಸೃಜನೆಗೆ ಸರಕಾರದಿಂದ ಅನುಮೋದನೆ ದೊರೆಯಬೇಕಾಗಿದೆ.
ಅನುಮೋದನೆ ಸಿಗಬೇಕಿದೆ
ಹೆಬ್ರಿ ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರವಾದಲ್ಲಿ ರೈತರಿಗೆ ತುಂಬಾ ಅನುಕೂಲ. ರೈತರಿಗೆ ಇದರಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ರೈತರು ಬೇಡಿಕೆ ಸಂಬಂಧ ಮನವಿ ಮಾಡಿದ್ದು ಸರಕಾರದಿಂದ ಅನುಮೋದನೆಗೊಂಡಲ್ಲಿ ಈಡೇರಲಿದೆ. -ಸಿದ್ಧಪ್ಪ , ಕೃಷಿ ಅಧಿಕಾರಿ, ಕೃಷಿ ಇಲಾಖೆ ಕಾರ್ಕಳ
ರೈತರಿಗೆ ಸಂಪರ್ಕವೇ ಸಿಗುತ್ತಿಲ್ಲ!
ಹೆಬ್ರಿ ತಾಲೂಕಿನ ಹೆಬ್ರಿ, ವರಂಗ, ನಾಡ್ಪಾಲು, ಬೆಳಂಜೆ, ಚಾರ, ಶಿವಪುರ ಗ್ರಾಮಗಳು ಅಜೆಕಾರು ರೈತ ಸಂಪರ್ಕ ಕೇಂದ್ರಕ್ಕೆ, ಕುಂದಾಪುರದ ತಾಲೂಕಿನ ಬೆಳ್ವೆ ಅಲ್ಬಾಡಿ, ಮಡಾಮಕ್ಕಿ, ಶೇಡಿ ಮನೆಗಳು ಕುಂದಾಪುರ ಕೇಂದ್ರಕ್ಕೆ ಸಂಪರ್ಕ ಹೊಂದಿವೆ. ಹೆಬ್ರಿ, ನಾಡ್ಪಾಲು, ಬೆಳಂಜೆ, ಚಾರ ಶಿವಪುರ ಗ್ರಾಮಗಳು ಅಜೆಕಾರು ರೈತ ಸಂಪರ್ಕ ಕೇಂದ್ರದಿಂದ ಸುಮಾರು 20-27 ಕಿಮೀ ದೂರದಲ್ಲಿವೆ. ಅದೇ ಬೆಳ್ವೆ ಅಲ್ಬಾಡಿ, ಮಡಾಮಕ್ಕಿ, ಶೇಡಿಮನೆ ಗ್ರಾಮಗಳು ಕುಂದಾಪುರದಿಂದ 35 ಕಿ.ಮೀ. ದೂರದಲ್ಲಿದೆ. ಇದರಿಂದ ಹೆಬ್ರಿಯ ಕೃಷಿಕರಿಗೆ ರೈತ ಸಂಪರ್ಕ ಕೇಂದ್ರಗಳ ಪ್ರಯೋಜನ ಪಡೆಯುವುದು ಕಷ್ಟವಾಗಿದೆ.
-ಬಾಲಕೃಷ್ಣ ಭೀಮಗುಳಿ