Advertisement

ಕೇರಳದಿಂದ ಬರುವವರಿಗೆ ನೆಗೆಟಿವ್‌ ವರದಿ ಕಡ್ಡಾಯ

04:00 PM Sep 09, 2021 | Team Udayavani |

ಆನೇಕಲ್‌: ಕೇರಳದಿಂದ ಅತ್ತಿಬೆಲೆ ಮೂಲಕ ಬೆಂಗಳೂರಿಗೆ ಬರುವ ವಾಹನಗಳಲ್ಲಿ ಕಡ್ಡಾಯವಾಗಿ ಕೋವಿಡ್‌ ರಿಪೋರ್ಟ್‌ ಹೊಂದಿರಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು.

Advertisement

ಹೊರ ರಾಜ್ಯದ ವಾಹನಗಳ ಪರಿಶೀಲನೆ: ತಾಲೂಕಿನ ಅತ್ತಿಬೆಲೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಖುದ್ದು ಕೇರಳ ಹಾಗೂ ಮಹಾರಾಷ್ಟ್ರ ವಾಹನಗಳ ಪರಿಶೀಲಿಸಿದರು. ಇದೇ ವೇಳೆ ಮಾತನಾಡಿ, ಕೇರಳ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳ ನೋಂದಣಿಯಾಗಿರುವ ವಾಹನಗಳಲ್ಲಿ ಬರುವಂಥವರಿಗೆ ಆರ್‌.ಟಿ. ಪಿ.ಸಿ.ಆರ್‌ ಟೆಸ್ಟ್‌ ಕಡ್ಡಾಯವಾಗಿ ಇರಬೇಕು. ಅತ್ತಿಬೆಲೆ ಗಡಿಯಲ್ಲಿ ಕೇರಳ ಭಾಗದಿಂದ ಹೆಚ್ಚು ವಾಹನಗಳು
ಆಗಮಿಸುವ ಹಿನ್ನೆಲೆ ಕಟ್ಟುನಿಟ್ಟಿನ ತಪಾಸಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೇರಳದಿಂದ ಬಂದ 85 ಮಂದಿಗೆ ಆರ್‌.ಟಿ.ಪಿ.ಸಿ.ಆರ್‌ ಟೆಸ್ಟ್‌
ಮಾಡಿಸಿದ್ದು ಅಗತ್ಯ ಕ್ರಮಕೈಗೊಂಡಿದ್ದೇವೆ.

ರಾಜ್ಯದ ಗಡಿ ಅತ್ತಿಬೆಲೆಗೆ ಆಗಮಿಸಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರನ್ನು ಇದೇ ಸಂದರ್ಭದಲ್ಲಿ ಆನೇಕಲ್‌ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ತಿಮ್ಮರಾಜು ಹಾಗೂ ಸಂಗಡಿಗರು ಪುಸ್ತಕ ನೀಡುವ ಮೂಲಕ ಅಭಿನಂದಿಸಿದರು.

ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್‌, ಅತ್ತಿಬೆಲೆ ವೃತ್ತನಿರೀಕ್ಷಕ ಕೆ.ವಿಶ್ವನಾಥ್‌, ತಾಲೂಕು ಆರೋಗ್ಯಧಿಕಾರಿ ಡಾ.ವಿನಯ್‌ ಕುಮಾರ್‌, ವೈದ್ಯ ಲೋಕೇಶ್‌, ಬಿಜೆಪಿ ಮುಖಂಡ ಜಯಪ್ರಕಾಶ್‌ ರೆಡ್ಡಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

ಇದನ್ನೂ ಓದಿ:ಟಿ20 ವಿಶ್ವಕಪ್ ಗೆ ಇಂಗ್ಲೆಂಡ್ ತಂಡ ಪ್ರಕಟ: ಮೂರು ವರ್ಷಗಳ ಬಳಿಕ ಮರಳಿದ ಮಾಜಿ ಆರ್ ಸಿಬಿ ವೇಗಿ

Advertisement

ಗಣೇಶ ಹಬ್ಬಕ್ಕೂ ನಿಯಮ
ಸಾರ್ವಜನಿಕವಾಗಿ ವಾರ್ಡ್‌ಗೊಂದರಂತೆ ಗಣಪತಿ ಪ್ರತಿಷ್ಠಾಪಿಸಬಹುದು. ಅದ್ಧೂರಿ ಆಚರಣೆಗೆ ಅವಕಾಶವಿಲ್ಲ. ಪರಿಸರ ಸ್ನೇಹಿ ಗಣೇಶ ಕೂರಿಸಲು ಅವಕಾಶವಿದೆ. ಕೆಮಿಕಲ್‌ ಗಣಪ ಮಾರಾಟ ಮಾಡಿದ್ರೆ ಸಾರ್ವಜನಿಕರು ದೂರು ನೀಡಬಹುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ಮನವಿ ಮಾಡಿದರು.

ಕೋವಿಡ್‌ ಸೋಂಕು ತಡೆಗೆ
ಅಗತ್ಯಕ್ರಮ: ಮಂಜುನಾಥ್‌
ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣ ಹೆಚ್ಚಿದ್ದರೂ ಸಹ ಬೆಂಗಳೂರು ನಗರದಲ್ಲಿ ಕೋವಿಡ್‌ ಸಂಖ್ಯೆಕಡಿಮೆಯಿದೆ.ಕೋವಿಡ್‌ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಕೋವಿಡ್‌ ನಿಯಮ ಪಾಲಿಸಿ ಸಹಕರಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ಮನವಿ ಮಾಡಿದರು.

ಸ್ಥಳದಲ್ಲೇ ಪರೀಕ್ಷೆ
ಕೇರಳದಿಂದ ಬರುವವರಿಗೆಕೋವಿಡ್‌ ರಿಪೋರ್ಟ್‌ ಕಡ್ಡಾಯವಾಗಿ ಇರಬೇಕು. ಒಂದು ವೇಳೆ ಇಲ್ಲದೆ ಹೋದರೆ ಸ್ಥಳದಲ್ಲೇ ಅವರಿಗೆ ಟೆಸ್ಟ್‌
ಮಾಡಿಸುತ್ತೇವೆ. ರಾಜ್ಯಕ್ಕೆ ಬರುವವರು ಸೂಕ್ತ ದಾಖಲೆ ತರಬೇಕು ಎಂದು ಆನೇಕಲ್‌ ತಹಶೀಲ್ದಾರ್‌ ದಿನೇಶ್‌ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next