Advertisement

ನೀಟ್‌-ಪಿಜಿ 2021: ಕಟ್‌ ಆಫ್ ಪರ್ಸಂಟೈಲ್‌ ಕಡಿತ

12:02 AM Mar 13, 2022 | Team Udayavani |

ಹೊಸದಿಲ್ಲಿ: ದೇಶದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಯ 8000 ಸೀಟುಗಳು ಖಾಲಿ ಉಳಿದಿರುವ ಹಿನ್ನೆಲೆಯಲ್ಲಿ, ನೀಟ್‌-ಪಿಜಿ 2021ರ ಕಟ್‌ ಆಫ್ ನ್ನು 15 ಪರ್ಸಂಟೈಲ್‌ ಕಡಿಮೆ ಮಾಡಿದೆ.

Advertisement

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ನಿರ್ದೇಶನ ನೀಡಿದೆ. ಎಲ್ಲ ವರ್ಗದ ವಿದ್ಯಾರ್ಥಿಗಳ ಕಟ್‌ ಆಫ್ ನ್ನು 15 ಪರ್ಸಂಟೈಲ್‌ ಕಡಿಮೆ ಮಾಡಲು ತಿಳಿಸಲಾಗಿದೆ.

ಇದನ್ನೂ ಓದಿ:ಯುಪಿಯಲ್ಲಿ ಹೀನಾಯ ಸೋಲು: ಮಾಧ್ಯಮಗಳ ಮುಂದೆ ಬರಲ್ಲ ಎಂದ ಮಾಯಾವತಿ

ಇದರಿಂದಾಗಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಕಟ್‌ ಆಫ್ 35ನೇ ಪರ್ಸಂಟೈಲ್‌, ಸಾಮಾನ್ಯ ವರ್ಗದ ಅಂಗವಿಕಲ ವಿದ್ಯಾರ್ಥಿಗಳ ಕಟ್‌ ಆಫ್ 30ನೇ ಪರ್ಸಂಟೈಲ್‌ ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಒಬಿಸಿ ವಿದ್ಯಾರ್ಥಿಗಳ ಕಟ್‌ ಆಫ್ 25ನೇ ಪರ್ಸಂಟೈಲ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next