Advertisement
ಹೊಸದಿಲ್ಲಿ ಮೂಲದ ಗಂಗಾಧರ ಎಂಬಾತ ಸೋರಿಕೆಯಾಗಿರುವ ಪ್ರಶ್ನೆ ಪತ್ರಿಕೆಯನ್ನು ಹೆಚ್ಚು ಮೊತ್ತ ನೀಡುವ ಅಭ್ಯರ್ಥಿಗಳ ಸಂಪರ್ಕವನ್ನು ಈ ಇಬ್ಬರು ಶಿಕ್ಷಕರಿಗೆ ಮಾಡಿಸಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ. ಹಲವು ವಿದ್ಯಾರ್ಥಿಗಳ ಅಡ್ಮಿಟ್ ಕಾರ್ಡ್, ವಾಟ್ಸಾಪ್ ಚಾಟ್ಸ್ ಮತ್ತು ಫೋನ್ ನಂಬರ್‌ಗಳು ದೊರೆತಿವೆ ಎಂದು ಪೊಲೀಸರು ಹೇಳಿದ್ದಾರೆ.
Related Articles
ರಾಷ್ಟ್ರೀಯ ಮಟ್ಟದ ನೀಟ್ ಪರೀಕ್ಷೆ ರದ್ದು ಗೊಳಿಸಿ ರಾಜ್ಯಗಳೇ ಪರೀಕ್ಷೆ ನಡೆಸುವಂತಹ ವ್ಯವಸ್ಥೆ ಜಾರಿಗೊಳಿಸಿ ಎಂದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿಗೆ ಆಗ್ರಹಿಸಿದ್ದಾರೆ. ಈ ಕುರಿತ ಬರೆದ ಪತ್ರದಲ್ಲಿ ಇದನ್ನು ಪ್ರಸ್ತಾವಿಸಿರುವ ಮಮತಾ, ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು. ಈ ಹಿಂದೆ ರಾಜ್ಯಗಳೇ ಪ್ರವೇಶ ಪರೀಕ್ಷೆ ಯನ್ನು ನಡೆಸುತ್ತಿದ್ದ ವ್ಯವಸ್ಥೆಯನ್ನು ಮರಳಿ ತರಬೇಕು ಹಾಗೂ ಈಗ ಇರುವ ನೀಟ್ ಅನ್ನು ರದ್ದುಪಡಿಸಬೇಕು ಎಂದು ಹೇಳಿದ್ದಾರೆ.
Advertisement
ಶೀಘ್ರವೇ ನೀಟ್-ಪಿಜಿ ಪರೀಕ್ಷೆ ದಿನಾಂಕ ಘೋಷಣೆ?ಮುಂದೂಡಿಕೆ ಆಗಿರುವ ನೀಟ್- ಪಿಜಿ ಪರೀಕ್ಷೆ ವ್ಯವಸ್ಥೆ ಪರಿಶೀಲನೆಯನ್ನು ಕೇಂದ್ರ ಸರಕಾರ ಸೋಮವಾರ ನಡೆಸಿದೆ. ಆರೋಗ್ಯ ಸಚಿವಾಲಯ ಮತ್ತು ವೈದ್ಯಕೀಯ ಪರೀಕ್ಷೆ ವಿಭಾಗದ ಅಧಿಕಾರಿಗಳು ಅದರಲ್ಲಿ ಭಾಗವಹಿ ಸಿದ್ದರು. ತಾಂತ್ರಿಕ ಸಲಹೆ ನೀಡುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್)ನ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು. ಸಭೆಯಲ್ಲಿ ಹೊಸ ದಿನಾಂಕ ನಿರ್ಧಾರ ಸೇರಿ ದಂತೆ ಪ್ರಮುಖ ಅಂಶಗಳ ಬಗ್ಗೆ, ಲೋಪ ವಾಗ ದಂತೆ ಪರೀಕ್ಷೆ ನಡೆಸುವ ಬಗ್ಗೆ ಚರ್ಚೆಗಳನ್ನು ನಡೆಸಲಾಗಿದೆ ಎನ್ನಲಾಗಿದೆ. 3 ರಾಜ್ಯಗಳ 5 ಪ್ರಕರಣಗಳನ್ನು ಕೈಗೆತ್ತಿಕೊಂಡ ಸಿಬಿಐ
ಬಿಹಾರ, ಗುಜರಾತ್, ರಾಜಸ್ಥಾನಗಳಲ್ಲಿ ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮಗಳ ತನಿಖೆಯ ಹೊಣೆಯನ್ನು ಸಿಬಿಐ ಸೋಮವಾರ ವಹಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ. ಬಿಹಾರ ಮತ್ತು ಗುಜರಾತ್‌ಗಳಲ್ಲಿ ತಲಾ 1, ಬಿಹಾರದಲ್ಲಿ 3 ಪ್ರಕರಣಗಳು ದಾಖಲಾಗಿವೆ.