ಚೆನ್ನೈ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಆಕಾಂಕ್ಷಿಗಳು ಒಳ ಉಡುಪು ಧರಿಸುವುದನ್ನು ಭಾನುವಾರ ನಿಷೇಧಿಸಿದ ಚೆನ್ನೈ ಪರೀಕ್ಷಾ ಕೇಂದ್ರದ ಘಟನೆಯು ಮುನ್ನೆಲೆಗೆ ಬಂದ ನಂತರ ವಿವಾದವೊಂದು ಸ್ಫೋಟಗೊಂಡಿದೆ.
ಸ್ಥಳೀಯ ಮಹಿಳಾ ಪತ್ರಕರ್ತರೊಬ್ಬರು ಪರೀಕ್ಷಾ ಕೇಂದ್ರಕ್ಕೆ ತೆರಳಿದಾಗ ಈ ವಿಚಾರ ಬಯಲಾಗಿದ್ದು, ಅವರು ಟ್ವೀಟ್ ಮಾಡಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ಒಂದು ಮೂಲೆಯಲ್ಲಿ ಕುಳಿತಿರುವ ಹುಡುಗಿಯೊಬ್ಬಳು ನಾಚಿಕೆಯಿಂದ ಪುಸ್ತಕಕ್ಕೆ ಅಂಟಿಕೊಂಡಿರುವುದನ್ನು ಗಮನಿಸಿದೆ ಎಂದು ಹೇಳಿಕೊಂಡಿದ್ದಾರೆ. ಪರೀಕ್ಷೆ ಬರೆಯುವಾಗ ಬ್ರಾ ಧರಿಸದಂತೆ ಕೇಳಿಕೊಂಡಿದ್ದರಿಂದ ನಾಚಿಕೆಯಾಗುತ್ತಿದೆ ಎಂದು ವಿದ್ಯಾರ್ಥಿನಿ ಪತ್ರಕರ್ತರಿಗೆ ತಿಳಿಸಿದ್ದಾಳೆ. ಪತ್ರಕರ್ತೆ ಆಕೆಗೆ ತನ್ನ ಶಾಲನ್ನು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ತನ್ನ ಸಹೋದರ ತನ್ನನ್ನು ಮನೆಗೆ ಕರೆದೊಯ್ಯಲು ಬರುತ್ತಿದ್ದಾನೆ ಎಂದು ಹುಡುಗಿ ನಯವಾಗಿ ನಿರಾಕರಿಸಿದಳು.
ಇದನ್ನೂ ಓದಿ:ಉಡುಪಿಯಲ್ಲಿ ಯಶ್ ಪಾಲ್ ಪರ ಮಹಾರಾಷ್ಟ್ರ ಸಿಎಂ ಶಿಂಧೆ ಪ್ರಚಾರ
ಪತ್ರಕರ್ತೆಯ ಟ್ವೀಟ್ ಗೆ ವಿರೋಧವಾಗಿ ಟ್ರೋಲ್ ಮಾಡಲಾಗಿದೆ. ಅಲ್ಲದೆ ಟ್ವೀಟ್ ಡಿಲೀಟ್ ಮಾಡುವಂತೆ ಒತ್ತಾಯಿಸಿದರು. ನಂತರ ಪತ್ರಕರ್ತೆಯು ತಾನು ಗಮನಿಸಿದ ಪ್ರಕಾರ, ಪರೀಕ್ಷೆಗೆ ಬಂದ ಅರ್ಧದಷ್ಟು ವಿದ್ಯಾರ್ಥಿನಿಯರು ಬ್ರಾ ಧರಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದರು. “ನನ್ನನ್ನು ಅಶ್ಲೀಲ ಪ್ರಶ್ನೆಗಳನ್ನು ಕೇಳುವವರು ಬ್ರಾ ಧರಿಸಲು ಅನುಮತಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಾ ಮಂಡಳಿಯನ್ನು ಕೇಳಬೇಕು” ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಮಿಳುನಾಡಿನಾದ್ಯಂತ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಭಾನುವಾರ ನೀಟ್ ಪರೀಕ್ಷೆಗೆ ಹಾಜರಾಗಿದ್ದರು.
ಕಳೆದ ಮೂರು ವರ್ಷಗಳಿಂದ ನಡೆಸಲಾಗುತ್ತಿರುವ ನೀಟ್ ನಲ್ಲಿ ಪ್ರತಿ ವಿದ್ಯಾರ್ಥಿಯ ಹೇರ್ ಪಿನ್ ಮತ್ತು ಡ್ರೆಸ್ ಗಳನ್ನು ತೆಗೆದು ಇನ್ವಿಜಿಲೇಟರ್‌ಗಳು ತಪಾಸಣೆ ನಡೆಸಿದ ರೀತಿಗೆ ತಮಿಳುನಾಡು ಶಿಕ್ಷಣ ಸಚಿವ ಅಂಬಿಲ್ ಮಹೇಶ್ ಖಂಡನೆ ವ್ಯಕ್ತಪಡಿಸಿದರು.