Advertisement

ಆಯುಷ್‌ಗೂ ನೀಟ್‌ ಕಡ್ಡಾಯ

09:43 AM Feb 03, 2018 | |

ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷದ ಆಯುಷ್‌ ಪದವಿಯ ವಿವಿಧ ಕೋರ್ಸ್‌ನ ಸೀಟು
ಪಡೆಯಲು ಕಡ್ಡಾಯವಾಗಿ ನೀಟ್‌ ಪರೀಕ್ಷೆ ಬರೆಯಬೇಕು. ಏಕೆಂದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯುಷ್‌ ಪದವಿಯ ಸೀಟಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವುದಿಲ್ಲ! ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಮೂಲಕವೇ ಪ್ರತಿವರ್ಷ ಆಯುಷ್‌ ಪದವಿ ಕೋರ್ಸ್‌ಗಳ ಸೀಟು ಹಂಚಿಕೆ ಮಾಡಲಾಗುತ್ತಿತ್ತು. 

Advertisement

2018-19ನೇ ಸಾಲಿನಿಂದ ಆಯುಷ್‌ ಕೋರ್ಸ್‌ ಸೇರುವ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಬರೆಯಬೇಕಾಗಿದೆ. ವೈದ್ಯಕೀಯ, ದಂತವೈದ್ಯಕೀಯದ ಜತೆಗೆ ಆಯುಷ್‌ ಕೋರ್ಸ್‌ ಕೂಡ ಸೇರಿಸಲಾಗಿದೆ. ಹೀಗಾಗಿ 2018-19ನೇ ಸಾಲಿನ ಸರ್ಕಾರಿ ಮತ್ತು ಖಾಸಗಿ ಕೋಟಾದ ಆಯುಷ್‌ ಸೀಟುಗಳನ್ನು ನೀಟ್‌ ರ್‍ಯಾಂಕಿಂಗ್‌ ಆಧಾರದಲ್ಲೇ ನಿರ್ಧರಿಸಲಾಗುತ್ತದೆ. ಪ್ರಾಧಿಕಾರದಿಂದ ಯಾವುದೇ ರೀತಿಯ ಪ್ರವೇಶ ಪರೀಕ್ಷೆ ನಡೆಸುವುದಿಲ್ಲ ಎಂದು ವೆಬ್‌ಸೈಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ನೀಟ್‌ ಮೂಲಕವೇ ಆಯುಷ್‌ ಪದವಿ ಕೋರ್ಸ್‌ಗಳ ಸೀಟು ಪಡೆಯಬೇಕು ಎಂದು ರಾಜ್ಯ ಸರ್ಕಾರ ತೆಗೆದುಕೊಂಡಿರುವ 
ನಿರ್ಧಾರವನ್ನು ಪ್ರಾಧಿಕಾರದ ವೆಬ್‌ಸೈಟ್‌ //kea.kar. nic.inನಲ್ಲಿ ಪ್ರಕಟಿಸಲಾಗಿದೆ ಎಂದು ಕೆಇಎ ಆಡಳಿತಾಧಿಕಾರಿ
“ಉದಯವಾಣಿ’ಗೆ ತಿಳಿಸಿದ್ದಾರೆ.

ಭಾರತೀಯ ವೈದ್ಯ ಪದ್ಧತಿಯ ಆಯುರ್ವೇದ, ಯುನಾನಿ, ಯೋಗ, ನ್ಯಾಚೂರೋಪಥಿ ಮತ್ತು ಹೋಮಿಯೋಪಥಿ ಕೋರ್ಸ್ ಗಳು ಆಯುಷ್‌ ವ್ಯಾಪ್ತಿಯಲ್ಲಿ ಬರುತ್ತದೆ. 2017-18ನೇ ಸಾಲಿನಲ್ಲೇ ಆಯುಷ್‌ ಕೋರ್ಸ್‌ಗೆ ನೀಟ್‌ ಮೂಲಕ ಆಯ್ಕೆ ಮಾಡುವುದಾಗಿ ಕೇಂದ್ರ ಆಯುಷ್‌ ಇಲಾಖೆ ಘೋಷಣೆ ಮಾಡಿತ್ತಾದರೂ, ಹಲವು ರಾಜ್ಯಗಳು ಒಪ್ಪಿಕೊಂಡಿರಲಿಲ್ಲ. ಏ.18, 19ಕ್ಕೆ ಸಿಇಟಿ: ಫೆ.1ರಿಂದ 26ರ ತನಕ ಸಿಇಟಿಗೆ ಆನ್‌ಲೈನ್‌ ಅರ್ಜಿ ಸ್ವೀಕರಿಸಲಾಗುತ್ತದೆ. ಫೆ.28ರೊಳಗೆ ಅರ್ಜಿ ಶುಲ್ಕ ಪಾವತಿಸಬೇಕು. ಏ.10ರೊಳಗೆ ಪರೀಕ್ಷೆಯ ಪ್ರವೇಶ ಪತ್ರ ಡೌನ್‌ ಲೋಡ್‌ ಮಾಡಿಕೊಳ್ಳಬೇಕು. ಏಪ್ರಿಲ್‌ 18 ಮತ್ತು 19ರಂದು ಸಿಇಟಿ ನಡೆಯಲಿದ್ದು, ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.20ರಂದು ಕನ್ನಡ ಪರೀಕ್ಷೆ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next