Advertisement
ಕಾಸರಗೋಡು ನೆಲದಲ್ಲಿ ನೆಲೆಸಿರುವ ಹವ್ಯಕ ಬ್ರಾಹ್ಮಣರಲ್ಲಿ ಮಧ್ಯಸ್ಥರದ್ದು ಒಂದು ಪ್ರತಿಷ್ಠಿತ ಮನೆತನ. ಹಿಂದೆ ಮಾಯಿಪ್ಪಾಡಿ ರಾಜರಿಗೆ ಬಗೆಹರಿಸಲಾಗದ ವ್ಯಾಜ್ಯವೊಂದನ್ನು ಈ ಮನೆತನದ ಹಿರಿಯರೊಬ್ಬರು ಮಧ್ಯಸ್ಥಿಕೆ ವಹಿಸಿ ಬಗೆಹರಿಸಿದುದರಿಂದ ಅರಸರು ಈ ಮನೆತನದವರಿಗೆ “ಮಧ್ಯಸ್ಥ’ ಎಂಬ ಬಿರುದಿನೊಂದಿಗೆ ಬೇಳ ಗ್ರಾಮದ ಕುಂಜಾರುನಲ್ಲಿ ಸ್ಥಳವನ್ನೂ ಉಂಬಳಿ ಯಾಗಿ ನೀಡಿದರು. ಅಂದಿನಿಂದ ಈ ಮನೆತನದವರು ಮಧ್ಯಸ್ಥರೆಂದೇ ಕರೆಯಲ್ಪಟ್ಟರು ಎಂಬ ಹೇಳಿಕೆಯಿದೆ.
Related Articles
Advertisement
ಕೃಷ್ಣ ಮಧ್ಯಸ್ಥರು ವಾಗ್ಮಿ, ಕವಿ, ಸಾಹಿತಿ, ಸಾಹಿತಿ, ಯಕ್ಷಗಾನದ ಹವ್ಯಾಸಿ ಕಲಾವಿದ, ನಾಟಕಕಾರ, ರಂಗನಟ, ತಾಳಮದ್ದಳೆಯ ಅರ್ಥಧಾರಿ, ಪ್ರಸಂಗಕತೃì, ಸಂಘಟಕರಾಗಿ ಗುರುತಿಸಿಕೊಂಡವರು. ವಿವಿಧ ಕಾರ್ಯಕ್ರಮಗಳ ಸಂಯೋಜಕರಾಗಿ ವಿವಿಧ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರೋತ್ಥಾನಗಳ, ಗಮಕ ಕಲಾಸಂಘ, ತಾಳಮದ್ದಳೆ ಕಲಾಸಂಘಗಳಲ್ಲಿ, ಹವ್ಯಾಸಿ ಯಕ್ಷಗಾನ ಮೇಳಗಳಲ್ಲಿ, ಯಕ್ಷಗಾನ ಕಲಾಸಾಗರ ಪ್ರತಿಷ್ಠಾನದಲ್ಲಿ, ಸಂಸ್ಕೃತ ಸಾಗರ ಪ್ರತಿಷ್ಠಾನ ಇತ್ಯಾದಿಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡವರು. ಪರಂಪರೆಯ ಮಧ್ಯಮ ತರಗತಿಯ ಸುಮಾರು 2,500ಕ್ಕೂ ಮಿಕ್ಕಿದ ತಾಳಮದ್ದಳೆಗಳಲ್ಲಿ ಸಂಭಾವನೆ ರಹಿತವಾಗಿ ಅರ್ಥಗಾರಿಕೆಯಲ್ಲಿ ಭಾಗವಹಿಸಿದವರು. ಸುಮಾರು 250ಕ್ಕೂ ಮಿಗಿಲಾಗಿ ಯಕ್ಷಗಾನ ಬಯಲಾಟದ ಪಾತ್ರಧಾರಿಯಾಗಿ ಮಿಂಚಿದವರು. ಸುಮಾರು 100ಕ್ಕೂ ಮಿಗಿಲಾಗಿ ಗಮಕ ವ್ಯಾಖ್ಯಾನ ನೀಡಿದ ಅನುಭವವುಳ್ಳವರು.ಕೃಷ್ಣ ಮಧ್ಯಸ್ಥರು ಶಿಕ್ಷಕ, ಸಾಹಿತ್ಯ ಕಲಾಸೇವೆಗೆ ನಾಡಿನ ವಿವಿಧ ಸಂಘ ಸಂಸ್ಥೆಗಳು ಸಮ್ಮಾನಿಸಿ ಗೌರವಿಸಿವೆ. ಯಕ್ಷಗಾನ ಕಲಾರಾಧಕ ಪ್ರಶಸ್ತಿಯು ಇವರ ಪಾಲಿಗೆ ಬಂದಿರುತ್ತದೆ.
ಈಗ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನೆಲೆಸಿರುವ ಕೃಷ್ಣ ಮಧ್ಯಸ್ಥರ ಸಹಧರ್ಮಿಣಿ ಗಿರಿಜಾ. ಈ ದಂಪತಿಗೆ ವಿದ್ಯಾ ಮತ್ತು ದಿವ್ಯಾ ಎಂಬ ಎರಡು ಹೆಣ್ಣು ಮಕ್ಕಳು. ಏಕಮಾತ್ರ ಪುತ್ರ ಪ್ರಶಾಂತ ಮಧ್ಯಸ್ಥ ಬಡಗುತಿಟ್ಟು ಯಕ್ಷಗಾನದ ಹವ್ಯಾಸಿ ಭಾಗವತರು ಮತ್ತು ಅರ್ಥಧಾರಿ. ಅಲ್ಲದೆ ವಿಶೇಷವಾಗಿ ಯಕ್ಷಗಾನ ಅಷ್ಠಾವಧಾನಿಯೂ ಆಗಿರುತ್ತಾರೆ.
25ಕ್ಕೂ ಹೆಚ್ಚು ಕೃತಿ ರಚನೆಕೃಷ್ಣ ಮಧ್ಯಸ್ಥರು ಸುಮಾರು 25ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚನೆ ಮಾಡಿರುತ್ತಾರೆ. ಇವುಗಳಲ್ಲಿ ಗಜೇಂದ್ರ ಮೋಕ್ಷ, ವರದಾ ಮಹಾತೆ¾, ಶ್ರೀಕೃಷ್ಣ ಲೀಲೆ (ಮಕ್ಕಳ ಯಕ್ಷಗಾನ ನೃತ್ಯ ರೂಪಕ), ಕ್ಷಮಾದಾನ(ಬೈಬಲ್ ಕಥೆಯ ಆಧಾರಿತ ಯಕ್ಷಗಾನ), ರಾಣಿ ಸಾಧನಾ, ಅಂಡೆಪುಸಲ ಪುಸ್ಕಾ ಸೋಜರ ಕಾಳಗ(ಅಣಕು ಯಕ್ಷಗಾನ)ಇವು ಯಕ್ಷಗಾನ ಪ್ರಸಂಗಗಳು. ಅವುಗಳಲ್ಲಿ 3 ಪ್ರಕಟಿತ ಮತ್ತು 3 ಅಪ್ರಕಟಿತವಾಗಿವೆ. ಸೋಲಿನಲ್ಲೂ ಗೆಲುವು, ಹೆಣ್ಣಿನ ಕೈವಾಡ, ನೊಂದ ಮಾತೆ, ಪ್ರಾಯಶ್ಚಿತ್ತ, ಭಕ್ತ ಪುಂಡಲೀಕ, ಭಕ್ತಿ ಪರೀಕ್ಷೆ, ಸಿನಿಮಾ ಫೂಲ್, ಜ್ಞಾನಶ್ರೀ ಹೀಗೆ ಒಟ್ಟು 8 ನಾಟಕಗಳನ್ನು ರಚಿಸಿದ್ದು ಅವುಗಳಲ್ಲಿ ಒಂದು ಪ್ರಕಟಿತ ಮತ್ತು 7 ಅಪ್ರಕಟಿತ ಕೃತಿಗಳಾಗಿವೆ. ಶಾಕುಂತಲಾ, ಸೃಷ್ಟಿ, ರಕ್ಷೆ, ಕ್ರಿಸ್ತ ಜನನ, ಬೆಳಗಿದ ಜ್ಯೋತಿ, ನ್ಯಾಯ ರಕ್ಷೆ, ನುಡಿದಂತೆ ನಡೆಯುತ್ತಾರೆಯೇ ಎಂಬ 6 ಗೀತನಾಟಕಗಳು ಅಪ್ರಕಟಿತವಾದರೂ ಹಲವಾರು ರಂಗಪ್ರಯೋಗಗಳನ್ನು ಕಂಡಿವೆ. ಗೇಯ ಗೀತೆಗಳು (ಭಾಗ 1 ಮತ್ತು 2) ಗೀತಾ ಸಂಕಲನಗಳು, 3 ಸಂಪಾದನಾ ಗ್ರಂಥಗಳು ಅಲ್ಲದೆ ಹಲವಾರು ಮಕ್ಕಳ ನೃತ್ಯ ಗೀತೆಗಳನ್ನು ರಚಿಸಿದ್ದಾರೆ. ಇವರ ನೂರಾರು ಬರಹಗಳು ಬಿಡಿಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. – ಲೇ: ಕೇಳು ಮಾಸ್ತರ್ ಅಗಲ್ಪಾಡಿ