Advertisement

ಕಾಮನ್ವೆಲ್ತ್ ಗೇಮ್ಸ್ ಕೂಟದಿಂದ ಹಿಂದೆ ಸರಿದ ನೀರಜ್ ಚೋಪ್ರಾ

02:26 PM Jul 26, 2022 | Team Udayavani |

ಮುಂಬೈ: ಕೆಲ ದಿನಗಳ ಹಿಂದೆ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪಕದ ಗೆದ್ದುಕೊಂಡಿದ್ದ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರು ಮುಂಬರುವ ಕಾಮನ್ವೆಲ್ತ್ ಕೂಟದಿಂದ ಹಿಂದೆ ಸರಿದಿದ್ದಾರೆ. ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದ ವೇಳೆ ನೀರಜ್ ಗಾಯಗೊಂಡಿದ್ದರು.

Advertisement

“ನಮ್ಮ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ತಮ್ಮ ಫಿಟ್ನೆಸ್ ಬಗ್ಗೆ ಕಳವಳದಿಂದಾಗಿ ಬರ್ಮಿಂಗ್ ಹ್ಯಾಂ ಕಾಮನ್ವೆಲ್ತ್ ಕೂಟದಲ್ಲಿ ಆಡುತ್ತಿಲ್ಲ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ನಾವು ಹಾರೈಸುತ್ತೇವೆ ” ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ತಮಿಳುನಾಡು: ತನ್ನ ಒಪ್ಪಿಗೆ ಇಲ್ಲದೆ ಮದುವೆಯಾದ ಮಗಳು ಮತ್ತು ಅಳಿಯನನ್ನು ಕೊಂದ ತಂದೆ

ವಿಶ್ವ ಅಥ್ಲೆಟಿಕ್ಸ್ ಬೆಳ್ಳಿ ಗೆದ್ದ ನಂತರ ನೀರಜ್ ಚೋಪ್ರಾ ಅವರು ತಮ್ಮ ಗಾಯದ ಬಗ್ಗೆ ಹೇಳಿಕೊಂಡಿದ್ದರು. ಫೈನಲ್‌ ಪಂದ್ಯದ ವೇಳೆ ತಾನು ತೊಡೆಸಂದು ಗಾಯಕ್ಕೆ ಒಳಗಾಗಿದ್ದೆ ಎಂದು ನಂತರ ಅವರು ಬಹಿರಂಗಪಡಿಸಿದ್ದರು.

ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿ ಪದಕ ಗೆದ್ದ ಎರಡನೇ ಭಾರತೀಯರಾದರು. ಅಂಜು ಬಾಬಿ ಜಾರ್ಜ್ ನಂತರ 2003 ರಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next