Advertisement

ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಚೋಪ್ರಾ ಸ್ಪರ್ಧೆ

11:53 PM Aug 23, 2022 | Team Udayavani |

ಹೊಸದಿಲ್ಲಿ: ಒಲಿಂಪಿಕ್‌ ಚಾಂಪಿಯನ್‌ ಖ್ಯಾತಿಯ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಕಡೆಯಿಂದ ಸಿಹಿ ಸುದ್ದಿಯೊಂದು ಬಿತ್ತರಗೊಂಡಿದೆ. ಆ. 26ರಿಂದ ಸ್ವಿಜರ್‌ಲ್ಯಾಂಡ್‌ನ‌ ಲುಸಾನ್ನೆಯಲ್ಲಿ ನಡೆಯಲಿರುವ “ಡೈಮಂಡ್‌ ಲೀಗ್‌’ನಲ್ಲಿ ಅವರು ಸ್ಪರ್ಧಿಸಲಿದ್ದಾರೆ.

Advertisement

ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಡೈಮಂಡ್‌ ಲೀಗ್‌ ಫೈನಲ್‌ ಅರ್ಹತೆ ಲಭಿಸಲಿದೆ. ಇದು ಸೆ. 7 ಮತ್ತು 8ರಂದು ಜ್ಯೂರಿಚ್‌ನಲ್ಲಿ ನಡೆಯಲಿದೆ. ಸದ್ಯ ನೀರಜ್‌ ಚೋಪ್ರಾ 4ನೇ ಸ್ಥಾನದಲ್ಲಿದ್ದು, ಅಗ್ರ 6 ಮಂದಿಗೆ ಫೈನಲ್‌ ಅರ್ಹತೆ ಲಭಿಸಲಿದೆ.

ಯೂಜೀನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ
ಪದಕ ಜಿಸಿದ್ದ ನೀರಜ್‌ ಚೋಪ್ರಾ, ಈ ವೇಳೆ ತೊಡೆಯ ನೋವಿಗೆ ಸಿಲುಕಿದ್ದರು. ಹೀಗಾಗಿ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಈಗ ಸಂಪೂರ್ಣ ಚೇತರಿಕೆ ಕಂಡಿದ್ದಾರೆ.

“ಫೀಲಿಂಗ್‌ ಸ್ಟ್ರಾಂಗ್‌. ರೆಡಿ ಫಾರ್‌ ಫ್ರೈಡೆ. ನಿಮ್ಮೆಲ್ಲರ ಬೆಂಬಲಕ್ಕೆ ಕೃತಜ್ಞತೆಗಳು. ಸೀ ಯು ಇನ್‌ ಲುಸಾನ್ನೆ…’ ಎಂದು ನೀರಜ್‌ ಚೋಪ್ರಾ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next