ಬುಡಾಪೆಸ್ಟ್: ಭಾರತದ ಚಿನ್ನದ ಹುಡುಗ, ಟೋಕಿಯೊ ಒಲಿಂಪಿಕ್ ಜಾವೆಲಿನ್ ಪದಕವೀರ ನೀರಜ್ ಚೋಪ್ರಾ ಅವರು ಮುಂದಿನ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಬುಡಾಪೆಸ್ಟ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ಪ್ರವೇಶಿಸಿರುವ ನೀರಜ್, ಇದರೊಂದಿಗೆ ಒಲಿಂಪಿಕ್ ಅರ್ಹತೆಯನ್ನೂ ಗಿಟ್ಟಿಸಿಕೊಂಡರು.
ನೀರಜ್ ಚೋಪ್ರಾ ಎ ಗುಂಪಿನ ಅರ್ಹತೆಯಲ್ಲಿ ಅಗ್ರಸ್ಥಾನ ಪಡೆದರು. ಫೈನಲ್ ಗೆ ನೇರ ಅರ್ಹತೆ ಪಡೆಯಲು ಅವರು 83 ಮೀಟರ್ ಜಾವೆಲಿನ್ ಎಸೆಯಬೇಕಿತ್ತು. ಆದರೆ ನೀರಜ್ ಚೋಪ್ರಾ ಅವರು ಮೊದಲ ಪ್ರಯತ್ನದಲ್ಲೇ 88.77 ಮೀಟರ್ ಜಾವೆಲಿನ್ ಎಸೆದರು. ಅಲ್ಲದೆ 83 ಮೀಟರ್‌ಗಳ ಅರ್ಹತಾ ಮಾರ್ಕ್ ದಾಟಿದ ಏಕೈಕ ಎಸೆತಗಾರನಾಗಿ ಮೂಡಿ ಬಂದರು.
ಇದನ್ನೂ ಓದಿ:ODI Cricket: ವಿರಾಟ್ ಕೊಹ್ಲಿ, ಶಿಖರ್ ಧವನ್ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಜಂ
ಜರ್ಮನಿಯ ಜೂಲಿಯನ್ ವೆಬರ್ 82.39 ಮೀಟರ್ ಎಸೆದು ಎರಡನೇ ಸ್ಥಾನ ಪಡೆದರು. ಭಾರತದ ಡಿಪಿ ಮನು 81.31 ಮೀ ಅತ್ಯುತ್ತಮ ಎಸೆತದೊಂದಿಗೆ ಮೂರನೇ ಸ್ಥಾನ ಪಡೆದರು. ಮನು ಅವರ ಅರ್ಹತೆಯನ್ನು ಇನ್ನೂ ಖಚಿತಪಡಿಸಲಾಗಿಲ್ಲ. ಯಾಕೆಂದರೆ ಇದು ಕಿಶೋರ್ ಜೆನಾ ಭಾಗವಹಿಸುವ ಬಿ ಗುಂಪಿನ ಫಲಿತಾಂಶಗಳನ್ನು ಅವಲಂಬಿಸಿರುತ್ತದೆ. 37 ಜಾವೆಲಿನ್ ಎಸೆತಗಾರರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 12 ಜನರು ಫೈನಲ್ ನಲ್ಲಿ ಸ್ಪರ್ಧಿಸಲಿದ್ದು, ಫೈನಲ್ ಪಂದ್ಯ ಭಾನುವಾರ ನಿಗದಿಪಡಿಸಲಾಗಿದೆ.