Advertisement
23 ವರ್ಷದ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್‌ನಲ್ಲಿ 87.58 ಮೀ. ದೂರದ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಎಪ್ರಿಲ್‌ನಲ್ಲಿ ಪ್ರಶಸ್ತಿ ವಿಜೇತರ ಹೆಸರು ಘೋಷಣೆಯಾಗಲಿದೆ.
Related Articles
ಲಾರಿಯಸ್ ವರ್ಲ್ಡ್ ಸ್ಪೋರ್ಟ್ಸ್ ಮನ್ ಆಫ್ ಇಯರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡವರೆಂದರೆ, ನೊವಾಕ್ ಜೊಕೋವಿಕ್ (ಟೆನಿಸ್, ಸರ್ಬಿಯಾ), ಟಾಮ್ ಬ್ರಾಡಿ (ಫುಟ್ ಬಾಲ್, ಅಮೆರಿಕ), ಕೇಲೆಬ್ ಡ್ರೆಸ್ಸೆಲ್ (ಈಜು, ಅಮೆರಿಕ), ಈಲ್ಯೂಡ್ (ಮ್ಯಾರಥಾನ್, ಕೀನ್ಯ), ರಾಬರ್ಟ್ ಲೆವಾಂಡೋವ್‌ಸ್ಕಿ (ಫುಟ್ ಬಾಲ್, ಪೋಲೆಂಡ್) ಮತ್ತು ಮ್ಯಾಕ್ಸ್ ವೆಸ್ಟಾಪೆನ್ (ಕಾರ್ ರೇಸ್, ನೆದರ್ಲೆಂಡ್ಸ್).
Advertisement
ವನಿತಾ ವಿಭಾಗದಿಂದ ಆ್ಯಶ್ಲಿ ಬಾರ್ಟಿ (ಟೆನಿಸ್, ಆಸ್ಟ್ರೇಲಿಯ), ಅಲಿಸನ್ ಫೆಲಿಕ್ಸ್ (ಆ್ಯತ್ಲೀಟ್, ಅಮೆರಿಕ), ಕ್ಯಾಟಿ ಲೆಡೆಕಿ (ಈಜು, ಅಮೆರಿಕ), ಎಮ್ಮಾ ಮೆಕ್‌ಕಿಯಾನ್ (ಈಜು, ಆಸ್ಟ್ರೇಲಿಯ), ಅಲೆಕ್ಸಿಯಾ ಪುಟೆಲ್ಲಾಸ್ (ಫುಟ್‌ಬಾಲ್, ಸ್ಪೇನ್), ಎಲೈನ್ ಥಾಮ್ಸನ್ ಹೆರಾಹ್ (ಆ್ಯತ್ಲೀಟ್, ಜಮೈಕಾ) ನಾಮ ನಿರ್ದೇಶನಗೊಂಡಿದ್ದಾರೆ.