Advertisement

Neeraj Chopra ಬೆಳ್ಳಿಗೆ ತೃಪ್ತಿ; ಹೊಸ ದಾಖಲೆ ಬರೆದು ಚಿನ್ನ ಗೆದ್ದ ಪಾಕಿಸ್ಥಾನದ ನದೀಮ್

01:27 AM Aug 09, 2024 | Team Udayavani |

ಪ್ಯಾರಿಸ್ : ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದ್ದ ಪ್ಯಾರಿಸ್ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆಲ್ಲಲು ವಿಫಲವಾಗಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ಪಾಕಿಸ್ಥಾನದ ಅರ್ಷದ್ ನದೀಮ್ ಹೊಸ ಒಲಿಂಪಿಕ್ಸ್ ದಾಖಲೆಯನ್ನು ನಿರ್ಮಿಸಿ ಚಿನ್ನದ ಪದಕ ಗೆದ್ದರು. ಗ್ರೆನಡಾದ ಆಂಡರ್ಸನ್ ಪೀಟರ್ಸ್ ಕಂಚಿನ ಪದಕ ಗೆದ್ದರು.

Advertisement

ಸೀಸನ್ ಬೆಸ್ಟ್ ಥ್ರೋ 89.45 ಮೀಟರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದ ನೀರಜ್ ಚೋಪ್ರಾ ಅವರು ಹೊಸ ಒಲಿಂಪಿಕ್ಸ್ ದಾಖಲೆಯನ್ನು ನಿರ್ಮಿಸಿದ ಅರ್ಷದ್ ನದೀಮ್ 92.97 ಮೀಟರ್‌ಗಳ ದೂರವನ್ನು ಕ್ರಮಿಸುವುದು ಸಾಧ್ಯವಾಗಲೇ ಇಲ್ಲ. ಈಗ ಪದಕ ಪಟ್ಟಿಯಲ್ಲಿ ಏಕೈಕ ಚಿನ್ನದ ಪದಕ ಗೆದ್ದ ಪಾಕಿಸ್ಥಾನವು ಭಾರತಕ್ಕಿಂತ ಮೇಲಕ್ಕೇರಿದೆ. ಇದು ಒಲಿಂಪಿಕ್ಸ್‌ನಲ್ಲಿ ಪಾಕಿಸ್ಥಾನಕ್ಕೆ ಸಿಕ್ಕ ಮೊದಲ ವೈಯಕ್ತಿಕ ಚಿನ್ನದ ಪದಕವಾಗಿದೆ.

ಮೂರು ವರ್ಷಗಳ ಹಿಂದೆ ಟೋಕಿಯೊನಲ್ಲಿ ಚಿನ್ನ ಗೆದ್ದಿದ್ದ ನೀರಜ್, ಮಂಗಳವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನ ಬಿ ಗುಂಪಿನಲ್ಲಿ 89.34 ಮೀಟರ್‌ಗಳ ಬೃಹತ್ ಎಸೆತವನ್ನು ದಾಖಲಿಸಿ ಫೈನಲ್‌ಗೆ ಪ್ರವೇಶಿಸಿದ್ದರು. 2022 ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 90 ಮೀ ಮಾರ್ಕ್ ದಾಟಿದ್ದ ಪಾಕಿಸ್ಥಾನದ ಅರ್ಷದ್ ನದೀಮ್ ಅವರು ಅತ್ಯುತ್ತಮ ಥ್ರೋ 86.59 ಮೀ ನೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದರು.

2022 ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನ 90 ಮೀ ಮಾರ್ಕ್ ಅನ್ನು ಮೀರಿದ ಅರ್ಷದ್ ನದೀಮ್ ಅವರು ಈ ಋತುವಿನ ಅತ್ಯುತ್ತಮ ಥ್ರೋ 86.59 ಮೀ ಜತೆಗೆ ಜಾವೆಲಿನ್ ಥ್ರೋ ಫೈನಲ್‌ಗೆ ಅರ್ಹತೆ ಪಡೆದಿದ್ದರು.

ಭಾರೀ ಒತ್ತಡಕ್ಕೆ ಸಿಲುಕಿದ ನೀರಜ್

Advertisement

ನೀರಜ್ ಚೋಪ್ರಾ ಮೇಲೆ ಭಾರೀ ಒತ್ತಡ ಇದ್ದುದು ಎದ್ದು ಕಾಣುತ್ತಿತ್ತು, ಹೆಚ್ಚಿನ ದೂರವನ್ನು ಪಡೆಯುವ ಸಲುವಾಗಿ, ಅವರು ಫಾಲೋ-ಅಪ್ ಸಮಯದಲ್ಲಿ ಜಾರಿಬಿದ್ದರು ಮತ್ತು ಒಂದು ಬಾರಿ ಹೊರತು ಪಡಿಸಿ ಉಳಿದ ನಾಲ್ಕು ಬಾರಿ ಫೌಲ್ ಆದರು.

ನಿರೀಕ್ಷೆ ಮೀರಿ ದಾಖಲೆ ಬರೆದ ನದೀಮ್
ಮೊದಲ ಎಸೆತದ ವೇಳೆ ಫೌಲ್ ಆಗಿದ್ದ ಅರ್ಷದ್ ನದೀಮ್ ಎರಡನೇ ಎಸೆತದಲ್ಲಿ 92.97 ಮೀಟರ್‌ಗಳ ದೂರಕ್ಕೆ ಭರ್ಜಿ ಎಸೆದು ಹೊಸ ದಾಖಲೆ ಬರೆದರು. ಚಿನ್ನದ ಪದಕ ಎದುರು ಭಾರತೀಯ ಕೋಟ್ಯಂತರ ಅಭಿಮಾನಿಗಳಿಗೆ ಶಾಕ್ ಏಕೈಕ ಚಿನ್ನದ ಭರವಸೆ ಮರೀಚಿಕೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next