Advertisement

ನೀರಜ್ ಮುಕುಟಕ್ಕೆ ಮತ್ತೊಂದು ಗರಿ: ಡೈಮಂಡ್ ಲೀಗ್ ಗೆದ್ದ ಬಂಗಾರದ ಹುಡುಗ

10:23 AM Sep 09, 2022 | Team Udayavani |

ಜ್ಯೂರಿಕ್: ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರ ಸಾಧನೆಗಳ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಸ್ವಿಜರ್ ಲ್ಯಾಂಡ್ ನ ಜ್ಯೂರಿಕ್ ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ ನಲ್ಲಿ ನೀರಜ್ ಚೋಪ್ರಾ ಪ್ರಥಮ ಸ್ಥಾನ ಪಡೆದಿದ್ದಾರೆ.

Advertisement

ಎರಡನೇ ಪ್ರಯತ್ನದಲ್ಲಿ 88.44 ಮೀಟರ್ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಅವರು ಮೊದಲ ಸ್ಥಾನ ಪಡೆದರು. ಟೋಕಿಯೋ ಒಲಿಂಪಿಕ್ ಗೋಲ್ಡ್ ಮೆಡಲಿಸ್ಟ್ ಆಟದ ಮುಂದೆ ಉಳಿದವರ ಆಟ ನಡೆಯಲಿಲ್ಲ.

ನೀರಜ್ ತನ್ನ ಎರಡನೇ ಪ್ರಯತ್ನದಲ್ಲಿ 88.44 ಮೀ ಎಸೆದರು. ಮೂರನೇ ಪ್ರಯತ್ನದಲ್ಲಿ 88 ಮೀ ಮತ್ತು ನಾಲ್ಕನೇ ಪ್ರಯತ್ನದಲ್ಲಿ 86.11 ಮೀ ಎಸೆದರು. ನೀರಜ್ ಅವರ ಐದನೇ ಪ್ರಯತ್ನ 87 ಮೀ ದೂರ ಸಾಗಿದರೆ, ಕೊನೆಯ ಪ್ರಯತ್ನ 83.6 ಮೀ. ದೂರ ನೀರಜ್ ಜಾವೆಲಿನ್ ಎಸೆದರು.

ಇದನ್ನೂ ಓದಿ:ನಾಲ್ವರಿಗೆ ಸಮಾನ ಅಂಕ ಬಂದಿದ್ದರೂ ರ್‍ಯಾಂಕ್‌ ಮಾತ್ರ ಒಬ್ಬರಿಗೇ! : ಯಾಕೆ ಗೊತ್ತಾ?

ನೀರಜ್ ಚೋಪ್ರಾ ಡೈಮಂಡ್ ಲೀಗ್ ಕೂಟದ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾದರು. ಜುಲೈನಲ್ಲಿ ಯುಎಸ್ ಎ ನಲ್ಲಿ ನಡೆದ ವಿಶ್ವ ಚಾಂಪಿಯನ್‌ ಶಿಪ್‌ ನಲ್ಲಿ ಬೆಳ್ಳಿ ಗೆದ್ದ ಪ್ರದರ್ಶನದ ಸಂದರ್ಭದಲ್ಲಿ ಅವರು ಅನುಭವಿಸಿದ ಸಣ್ಣ ತೊಡೆಸಂದು ಗಾಯದಿಂದಾಗಿ ಅವರು ಬರ್ಮಿಂಗ್‌ ಹ್ಯಾಮ್ ಕಾಮನ್‌ ವೆಲ್ತ್ ಗೇಮ್ಸ್ ನಲ್ಲಿ ಆಡಿರಲಿಲ್ಲ.

Advertisement

ಡೈಮಂಡ್ ಲೀಗ್ ಚಾಂಪಿಯನ್‌ಶಿಪ್-ಶೈಲಿಯ ಮಾದರಿಯನ್ನು ಅನುಸರಿಸಿ 32 ಡೈಮಂಡ್ ವಿಭಾಗಗಳನ್ನು ಒಳಗೊಂಡಿದೆ. ಅಥ್ಲೀಟ್‌ಗಳು ತಮ್ಮ ವಿಭಾಗಗಳ ಫೈನಲ್‌ ಗೆ ಅರ್ಹತೆ ಪಡೆಯಲು 13 ಸರಣಿಗಳ ಕೂಟದಲ್ಲಿ ಅಂಕಗಳನ್ನು ಗಳಿಸುತ್ತಾರೆ. ಫೈನಲ್‌ ನಲ್ಲಿ ಪ್ರತಿ ಡೈಮಂಡ್ ವಿಭಾಗದ ವಿಜೇತರು ‘ಡೈಮಂಡ್ ಲೀಗ್ ಚಾಂಪಿಯನ್’ ಕಿರೀಟವನ್ನು ಅಲಂಕರಿಸುತ್ತಾರೆ.

Koo App

ಸ್ವಿಜರ್ಲ್ಯಾಂಡ್‌ನ ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಟ್ರೋಫಿಯಲ್ಲಿ 88.44 ಮೀಟರ್ ದೂರ ಜಾವಲಿನ್ ಎಸೆದು ಪ್ರತಿಷ್ಠಿತ ಡೈಮಂಡ್ ಲೀಗ್ ಟ್ರೋಫಿ ಗೆಲ್ಲುವ ಮೂಲಕ, ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ #ನೀರಜ್_ಚೋಪ್ರಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ಹೀಗೆ ನಿರಂತರವಾಗಿ ಮುಂದುವರಿಯಲಿ.

Aravind Limbavali (@arvindlbjp) 9 Sep 2022

Advertisement

Udayavani is now on Telegram. Click here to join our channel and stay updated with the latest news.

Next