Advertisement

ನೀಲಾವರ-ಕೂರಾಡಿ ಸಂಪರ್ಕ:ಮೇ ತಿಂಗಳಲ್ಲಿ ಸೇತುವೆ ಲೋಕಾರ್ಪಣೆಯ ನಿರೀಕ್ಷೆ

12:41 PM Mar 31, 2017 | |

ಬ್ರಹ್ಮಾವರ: ಕೂರಾಡಿ ಹಾಗೂ ನೀಲಾವರ ಭಾಗದ ಜನರ ಬಹುದಿನಗಳ ಕನಸಾದ ಸಂಪರ್ಕ ಸೇತುವೆ ನನಸಾಗಲು ಕಾಲ ಸನ್ನಿಹಿತವಾಗಿದೆ. ನೀಲಾವರ ಕೂರಾಡಿ ನಡುವೆ ಸೀತಾ ನದಿಗೆ ಅಡ್ಡಲಾಗಿ ಸಂಪರ್ಕ ಸೇತುವೆ ನಿರ್ಮಾಣ ಅಂತಿಮ ಹಂತದಲ್ಲಿದೆ.

Advertisement

ಬಹಳಷ್ಟು ಅನುಕೂಲ
ನದಿಯ ಒಂದು ಭಾಗದ ಕುಂಜಾಲು, ನೀಲಾವರ, ಮಟಪಾಡಿ ಭಾಗದ ಜನರು ಹಾಗೂ ಇನ್ನೊಂದು ಭಾಗದ ಕೂರಾಡಿ, ಬಂಡೀಮಠ, ಹನೆಹಳ್ಳಿ, ಬಾರಕೂರು ಪ್ರದೇಶದ ಜನರು ಪರಸ್ಪರ ಸಂಪರ್ಕಿಸಲು ಬಹಳಷ್ಟು ಅನುಕೂಲವಾಗಲಿದೆ.

ಬಲು ಸುಲಭ
ಪ್ರಮುಖ ಧಾರ್ಮಿಕ ಕೇಂದ್ರಗಳಾದ ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನ ಹಾಗೂ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಗಳ ಸಂಪರ್ಕ ಅತಿ ಸಮೀಪವಾಗಲಿದೆ. ನೀಲಾವರದಿಂದ ಕೂರಾಡಿ, ಗುಡ್ಡೆಯಂಗಡಿ, ತಂತ್ರಾಡಿ ಮೂಲಕ ಕೇವಲ 8 ಕೀ.ಮೀ.ನಲ್ಲಿ ಮಂದಾರ್ತಿ ತಲುಪಲು ಸಾಧ್ಯ. ಜತೆಗೆ ಮುಂದಿನ ದಿನಗಳಲ್ಲಿ ಕೂರಾಡಿ ಭಾಗದ ಜನರಿಗೆ ನೀಲಾವರ ಕ್ಷೇತ್ರ ಹಾಗೂ ಪಂಚಮಿಖಾನ ಸಾನಿಧ್ಯದ ದರ್ಶನ ಬಲು ಸುಲಭವಾಗಲಿದೆ.

ಪರ್ಯಾಯ ವ್ಯವಸ್ಥೆ
ರಾ.ಹೆ.ಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚತುಷ್ಪಥ ರಸ್ತೆಯಾದರೂ ಸಂಚಾರ ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ. ಗ್ರಾಮಾಂತರ ಭಾಗದಲ್ಲಿ ಸಂಪರ್ಕ ಸೇತುವೆಗಳ ನಿರ್ಮಾಣ ಈ ಸಮಸ್ಯೆಗಳಿಗೆ ಪರ್ಯಾಯ ಪರಿಹಾರ.

ಇನ್ನು ಮಣಿಪಾಲ, ಉಡುಪಿ ಅತೀ ಸಮೀಪ
ಈಗಾಗಲೇ ಆರೂರು ಬೆಳಾ¾ರು ನಡುವೆ ಮಡಿಸಾಲು ಹೊಳೆಗೆ ಸಂಪರ್ಕ ಸೇತುವೆ ನಿರ್ಮಾಣಗೊಂಡು ಸಂಚಾರಮುಕ್ತವಾಗಿದೆ. ನೀಲಾವರ ಕೂರಾಡಿ ಸೇತುವೆ ಅಂತಿಮ ಹಂತದಲ್ಲಿದೆ. ಕೊಳಲಗಿರಿ ಮಣಿಪಾಲ ನಡುವೆ ಸ್ವರ್ಣಾ ನದಿಗೆ ಸೇತುವೆ ನಿರ್ಮಾಣ ಭರದಿಂದ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರು ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸದೆಯೇ ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರಗಳನ್ನು ತಲುಪಬಹುದಾಗಿದೆ. ಮುಖ್ಯವಾಗಿ ಮಣಿಪಾಲ, ಉಡುಪಿ ಅತಿ ಸಮೀಪವಾಗಲಿದೆ.

Advertisement

ಅಭಿವೃದ್ದಿಗೆ ಪೂರಕ
ಎರಡು ಊರುಗಳ ನಡುವೆ ಸಂಪರ್ಕ ಕಲ್ಪಿಸಿದಾಗ ಸಹಜವಾಗಿಯೇ ಚಟುವಟಿಕೆಗಳು ಹೆಚ್ಚುತ್ತವೆ. ಮುಖ್ಯವಾಗಿ ಕೃಷಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳಿಗೆ ಪ್ರಯೋಜನಕಾರಿ, ಜತೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೂ ಪೂರಕ.ಸೇತುವೆ ನಿರ್ಮಾಣ ಕಾಮಗಾರಿಯನ್ನು ಕುಂದಾಪುರದ ಸೈಂಟ್‌ ಅಂತೋನಿ  ಕನ್‌ಸ್ಟ್ರಕ್ಷನ್‌(ಫಿಲಿಪ್‌ ಡಿ’ಕೋಸ್ಟಾ ಆ್ಯಂಡ್‌ ಕೊ) ನಿರ್ವಹಿಸುತ್ತಿದೆ.

ತಾಂತ್ರಿಕ ಕಾಮಗಾರಿ
ಸೇತುವೆಯು 135 ಮೀ. ಉದ್ದ, 8.5 ಮೀ. ಅಗಲದಲ್ಲಿ ನಿರ್ಮಾಣಗೊಳ್ಳುತ್ತಿದೆ. 6 ಸ್ಪಾ Âನ್‌ಗಳನ್ನು ಒಳಗೊಂಡಿದೆ. ಸುಮಾರು 20 ವರ್ಷಗಳ ಹಿಂದಿನ ನೀರಿನ ಮಟ್ಟಕ್ಕಿಂತ 1 ಮೀ. ಎತ್ತರದಲ್ಲಿ ಸೇತುವೆ ನಿರ್ಮಾಣಗೊಂಡಿದೆ. ಜೊತೆ ಜೊತೆಗೆ ಎರಡೂ ಕಡೆ ಸಮರ್ಪಕ ಸಂಪರ್ಕ ರಸ್ತೆ ನಿರ್ಮಾಣಗೊಳ್ಳಲಿದೆ.

ಕಾಮಗಾರಿ ಉತ್ತಮ ರೀತಿಯಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ. ನಿಗದಿತ ಅವಧಿಯಲ್ಲಿ ಮುಗಿಸುವ ಸ್ಥಿತಿಯಲ್ಲಿರುವುದು ಸಂತಸದ ವಿಚಾರ. ಸೇತುವೆ ನಿರ್ಮಾಣದಿಂದ ಕೂರಾಡಿ ಭಾಗದ ಅಭಿವೃದ್ಧಿಯ ವೇಗ ಹೆಚ್ಚುವ ನಿರೀಕ್ಷೆ ಇದೆ. ಕೂರಾಡಿಯ ಶಾಲೆ, ಬ್ಯಾಂಕ್‌, ವೈದ್ಯರ ಕ್ಲಿನಿಕ್‌ಗೆ ಆಗಮಿಸುವ ನೀಲಾವರದ ಜನತೆಗೆ ಬಹಳಷ್ಟು ಅನುಕೂಲವಾಗಲಿದೆ.
-ಕೆ. ಶೇಖರ ಹೆಗ್ಡೆ, ನಿವೃತ್ತ ಶಿಕ್ಷಕರು ಕೂರಾಡಿ

ಸಂಪರ್ಕ ಸೇತುವೆಯಿಂದ ಶ್ರೀ ಕ್ಷೇತ್ರ ನೀಲಾವರ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ. ಭಕ್ತಾಧಿಗಳ ಆಗಮನದಿಂದ ಕ್ಷೇತ್ರವು ಬೆಳೆಯಲಿದೆ. ನೀಲರತಿಯ ಸಹೋದರಿ ಕ್ಷೇತ್ರವಾದ ಮಂದರತಿ(ಮಂದಾರ್ತಿ) ಕ್ಷಿಪ್ರವಾಗಿ ಸಂಪರ್ಕಿಸಲು ಸಾಧ್ಯವಾಗಲಿದೆ.
– ರಮೇಶ್‌ ಪೂಜಾರಿ, ಉಪಾಧ್ಯಕ್ಷರು ನೀಲಾವರ ಗ್ರಾ.ಪಂ.

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next