Advertisement

ಮೇ ಅಂತ್ಯಕ್ಕೆ ನೀಲಾವರ-ಕೂರಾಡಿ ಸೇತುವೆ ಪೂರ್ಣ: ಸಚಿವ ಪ್ರಮೋದ್‌

08:59 AM Feb 19, 2017 | Team Udayavani |

ಬ್ರಹ್ಮಾವರ: ಬಹುದಿನಗಳ ಕನಸಾದ ನೀಲಾವರ-ಕೂರಾಡಿ ಸಂಪರ್ಕ ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮೇ ಅಂತ್ಯದೊಳಗೆ ಪೂರ್ಣ ಗೊಳ್ಳುವ ನಿರೀಕ್ಷೆ ಇದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. 

Advertisement

ಅವರು ಶನಿವಾರ ಕುಂಜಾಲಿನಲ್ಲಿ ನೀಲಾವರ ಗ್ರಾಮ ಮಟ್ಟದ ಜನ ಸಂಪರ್ಕ ಸಭೆ ಉದ್ಘಾಟಿಸಿದರು. ಸಚಿವನಾಗಿ ಆಯ್ಕೆಯಾದ ಮೇಲೆ ರಾಜ್ಯದೆಲ್ಲೆಡೆ ಸಂಚರಿಸಬೇಕಾದ ಕಾರ್ಯ ಒತ್ತಡವಿದ್ದರೂ ಕ್ಷೇತ್ರದ ಜನರ ಅಹ ವಾಲುಗಳಿಗೆ ಸ್ಪಂದಿಸಬೇಕೆಂಬ ಉದ್ದೇಶ
ದಿಂದ ರಾಜ್ಯದಲ್ಲೇ ಮೊತ್ತಮೊದಲ ಬಾರಿಗೆ ಗ್ರಾಮ ಮಟ್ಟದಲ್ಲಿ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಎಲ್ಲ ಇಲಾಖಾ ಅಧಿಕಾರಿ ಗಳನ್ನು ಒಳಗೊಂಡ ಇಡೀ ಸರಕಾರವೇ ಗ್ರಾಮಕ್ಕೆ ಆಗಮಿಸು ವುದರಿಂದ ಜನರು ಇದರ ಸದುಪಗಪಡಿಸಿಕೊಳ್ಳಬೇಕು ಎಂದರು. 

ಗ್ರಾಮಗಳಿಗೆ ಮಹತ್ವ
ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರ  ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿ ಕೋಟ್ಯಂತರ ರೂ. ಅನುದಾನದಿಂದ ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಬಿಪಿಎಲ್‌ ಕಾರ್ಡ್‌ ಪಡೆಯಲು ಸೂಕ್ತ ಅನುಕೂಲ ಕಲ್ಪಿಸಿದೆ. ಬಸವ ವಸತಿ ಅನುದಾನ ಹೆಚ್ಚಿಸಿದೆ, ವಿವಿಧ ಭಾಗ್ಯಗಳನ್ನು ಕರುಣಿಸಿದೆ ಎಂದು ಪ್ರಮೋದ್‌  ಅವರು ಹೇಳಿದರು. 

ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಅಕ್ರಮ ಸಕ್ರಮ- ಸಮಿತಿ ಅಧ್ಯಕ್ಷ ಮೈರ್ಮಾಡಿ ಅಶೋಕ್‌ ಕುಮಾರ್‌ ಶೆಟ್ಟಿ, ತಾಲೂಕು ಪಂಚಾಯತ್‌ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಸದಸ್ಯರಾದ ಗೋಪಿ ಕೆ. ನಾಯ್ಕ, ಸುಧೀರ್‌ ಕುಮಾರ್‌ ಶೆಟ್ಟಿ, ಪಂಚಾಯತ್‌ ಅಧ್ಯಕ್ಷೆ ಆಶಾ ಕೋಟ್ಯಾನ್‌, ಉಪಾಧ್ಯಕ್ಷ ರಮೇಶ್‌ ಪೂಜಾರಿ, ಸದಸ್ಯರು, ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ, ಕಂದಾಯ ಅಧಿಕಾರಿ ಲಕ್ಷ್ಮೀನಾರಾಯಣ ಭಟ್‌, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಕೆಡಿಪಿ ಸದಸ್ಯ ಉಮೇಶ್‌ ಎ. ನಾಯ್ಕ ಸ್ವಾಗತಿಸಿ, ನಾಗಯ್ಯ ಮಠಪತಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next