ಕಲಬುರಗಿ: ಸೃಜನಾತ್ಮಕ ಸಾಹಿತ್ಯದ ಪ್ರಸಾರದ ಅಗತ್ಯ ಹಿಂದಿಗಿಂತಲೂ ಹೆಚ್ಚಾಗಿದೆ ಎಂದು ವಿಮರ್ಶಕ ಡಾ| ಬಸವರಾಜ ಕಲ್ಗುಡಿ ಹೇಳಿದರು.
ಗುಲಬರ್ಗಾ ವಿವಿ ಕಾರ್ಯಸೌಧದಲ್ಲಿರುವ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಗುಲಬರ್ಗಾ ವಿವಿಯ ಪ್ರಸಾರಾಂಗ ಕನ್ನಡ ಅಧ್ಯಯನ ಸಂಸ್ಥೆಯ ಸುವರ್ಣ ಸಂಭ್ರಮ, ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆ ಆಶ್ರಯದಲ್ಲಿ ನಡೆದ ಶರಣ ಸಾಹಿತ್ಯ ವಿರ್ಮಶಾ ಸಂಪುಟ, ಕನ್ನಡ ದಲಿತ ಸಾಹಿತ್ಯ ಸಂಪುಟ, ಪಠ್ಯಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಶರಣ ಸಾಹಿತ್ಯ ವಿಮರ್ಶಾ ಸಂಪುಟ, ದಲಿತ ಸಾಹಿತ್ಯ ಸಂಪುಟಗಳನ್ನು ಪ್ರಸಾರಾಂಗದ ಮೂಲಕ ಪ್ರಕಟಿಸುವ ಮೂಲಕ ಗುಲಬರ್ಗಾ ವಿವಿಯು ಜ್ಞಾನಲೋಕಕ್ಕೆ ಸಂಬಂಧಿಸಿದಂತೆ ಹೊಸ ಹೆಜ್ಜೆಯಿಟ್ಟಿದೆ ಎಂದರು.
ನವ್ಯದ ಕಥಾನಕಗಳಿಗೆ ದಲಿತ ಸಾಹಿತ್ಯ ಮುಖಾಮುಖೀಯಾಗದು, ಇಂತಹ ಸೃಜನಾತ್ಮಕ ಸಾಹಿತ್ಯವನ್ನು ಒಂದೆಡೆ ಸೇರಿಸುವ ಮೂಲಕ ಪ್ರಸಾರಾಂಗ ಉತ್ತಮ ಕೆಲಸ ಮಾಡಿದೆ ಎಂದರು. ಕುಲಪತಿ ಪ್ರೊ| ಎಸ್.ಆರ್. ನಿರಂಜನ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುವರ್ಣ ಸಂಭ್ರಮದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪ್ರಸಾರಾಂಗವು ಹಲವು ಉತ್ತಮ ಯೋಜನೆಗಳನ್ನು ಹಾಕಿಕೊಳ್ಳುವ
ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ ಎಂದರು.
ವಿಶ್ರಾಂತ ಕುಲಪತಿ ಹಾಗೂ ಸಿಂಡಿಕೇಟ್ ಸದಸ್ಯ ಚಂದ್ರಶೇಖರ ನಿಟ್ಟೂರೆ, ಮಲ್ಲೇಪುರಂ ಜಿ. ವೆಂಕಟೇಶ, ಕುಲಸಚಿವ ಪ್ರೊ| ಸಿ. ಸೋಮಶೇಖರ, ಮೌಲ್ಯಮಾಪನ ಕುಲಸಚಿವ ಪ್ರೊ| ಡಿ.ಎಂ. ಮದರಿ, ಪ್ರಕಾಶಕ ಬಸವರಾಜ ಕೊನೆಕ್, ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ| ಪಿ.ಎಸ್. ಕೊಕಟನೂರರು ಹಾಜರಿದ್ದರು. ಪ್ರಸಾರಾಂಗದ ನಿರ್ದೇಶಕ ಡಾ| ಎಚ್.ಟಿ. ಪೋತೆ ಸ್ವಾಗತಿಸಿದರು.