Advertisement

ಬೇಕಿದೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ

06:45 AM Apr 05, 2018 | Team Udayavani |

ಕೋಟ: ಸಾೖಬ್ರಕಟ್ಟೆ ಸಮೀಪದ ಯಡ್ತಾಡಿ ಕಪ್ಪುಕಲ್ಲಿನ ಗಣಿಗಾರಿಕೆಗೆ ಹೆಸರುವಾಸಿಯಾದ ಊರು. ಆದರೆ ಇದೇ ಕಪ್ಪುಕಲ್ಲು ಇಲ್ಲಿನ ನಿವಾಸಿಗಳಿಗೆ ಶಾಪವಾಗಿ ಪರಿಣಮಿಸಿದೆ. ಕಾರಣ ಇಲ್ಲಿ ಬಾವಿ, ಬೋರ್‌ವೆಲ್‌  ತೋಡಿದರೆ  ನೀರು ಸಿಗುತ್ತಿಲ್ಲ.  ವರ್ಷವೂ ಸ್ಥಳೀಯ ಗ್ರಾ.ಪಂ. ನೀರು ಸರಬರಾಜು ಮಾಡಲು ಸಾಕಷ್ಟು ಪ್ರಯತ್ನ ಪಡುತ್ತದೆ. ಪಕ್ಕದ ಶಿರಿಯಾರ ಗ್ರಾ.ಪಂ.ನಲ್ಲೂ ಇದೇ ಸಮಸ್ಯೆ ಇದೆ. 

Advertisement

ಎಲ್ಲೆಲ್ಲಿ ಸಮಸ್ಯೆ? 
ಯಡ್ತಾಡಿ ಹಾಗೂ ಹೇರಾಡಿ  ಗ್ರಾಮಗಳನ್ನು ಒಳಗೊಂಡ ಯಡ್ತಾಡಿ ಗ್ರಾ.ಪಂ. ನಲ್ಲಿ ಒಟ್ಟು 5 ವಾರ್ಡ್‌ಗಳಿದ್ದು, 4230 ಜನಸಂಖ್ಯೆ ಹೊಂದಿದೆ. ನೀರು ಸರಬರಾಜಿಗೆ 6 ಸರಕಾರಿ ಬಾವಿ, 3 ಓವರ್‌ಹೆಡ್‌ ಟ್ಯಾಂಕ್‌ಗಳಿದೆ. ಸಾೖಬ್ರಕಟ್ಟೆ, ಜನತಾ ಕಾಲನಿ, ರಂಗನಕೆರೆ, ಕಾಜ್ರಲ್ಲಿ, ಅಲ್ತಾರು ಕೇದಿಕೆರೆ, ಬಳೆಗಾರ್‌ಬೆಟ್ಟು, ಗರಿಕೆಮಠ ಮುಂತಾದ ಕಡೆಗಳಲ್ಲಿ  ಪ್ರತಿ ವರ್ಷ ನೀರಿನ ಸಮಸ್ಯೆ ಎದುರಾಗುತ್ತದೆ. ಹಿಂದೆ ಟ್ಯಾಂಕರ್‌ ನೀರು ಸರಬರಾಜಿಗೇ 3 ಲಕ್ಷ ವ್ಯಯಿಸಿದ ಉದಾಹರಣೆ ಇದೆ.  ಶಿರಿಯಾರ ಗ್ರಾ.ಪಂ. ಒಟ್ಟು 4839 ಜನಸಂಖ್ಯೆ ಹೊಂದಿದೆ. 3 ಸರಕಾರಿ ಬಾವಿ, 2 ಓವರ್‌ ಹೆಡ್‌ ಟ್ಯಾಂಕ್‌ ಇದೆ. ಕಾಜ್ರಲ್ಲಿ, ಕೆದ್ಲಹಕ್ಲು, ಗರಿಕೆಮಠ ಮುಂತಾದ ಭಾಗಗಳಲ್ಲಿ  ನೀರಿನ ಸಮಸ್ಯೆ ಇದೆ.

ಅಂತರ್ಜಲ ಮಟ್ಟ ಕುಸಿತ 
ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್‌ಜಲದ ಮಟ್ಟ ಕುಸಿಯುತ್ತಿದೆ. ಹೀಗಾಗಿ ಸರಕಾರಿ ಬಾವಿ, ಬೋರ್‌ವೆಲ್‌ಗ‌ಳು ಬೇಸಗೆಯಲ್ಲಿ  ಬೇಗನೆ ಬರಿದಾಗುತ್ತಿವೆ. ಹೊಸ ಬೋರ್‌ಗಳನ್ನು ಕೊರೆಸಿದರೂ ವಿಫಲವಾಗುತ್ತಿದೆ. ಕೆಲವು ಕಡೆಗಳಲ್ಲಿ  ಗ್ರಾ.ಪಂ. ನೀರು ಹೊರತುಪಡಿಸಿದರೆ ಬೇರೆ ನೀರಿನ ಮೂಲವೇ ಇಲ್ಲವಾಗಿದೆ. ವರ್ಷದಿಂದ ವರ್ಷಕ್ಕೆ ಸಮಸ್ಯೆ ಹೆಚ್ಚುತ್ತಿದೆ.
 
ಶಾಶ್ವತ ಯೋಜನೆ ಬೇಕು
ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ದೊಡ್ಡಮಟ್ಟದ  ಕುಡಿಯುವ ನೀರಿನ ಸಮಸ್ಯೆ ಇದೆ. ವಾರಾಹಿ ಏತ ನೀರಾವರಿ ಕಾಲುವೆ ವಿಸ್ತರಣೆಯಾಗಿ ಇಲ್ಲಿನ ಕೆರೆ, ಮದಗಗಳಿಗೆ ಸಂಪರ್ಕವಾದರೆ ಉತ್ತಮ. ಇಲ್ಲವಾದರೆ ಬಂಡೀಮಠ ಉಪ್ಪುನೀರು ತಡೆ ಅಣೆಕಟ್ಟು ಅಥವಾ ಸ್ಥಳೀಯ ಹೊಳೆಯ ನೀರನ್ನು  ಶುದ್ಧೀಕರಿಸಿ ನೀಡುವ  ಶಾಶ್ವತ ಯೋಜನೆ ಕಾರ್ಯಗತವಾಗಬೇಕಿದೆ. 

ಅಂತರ್ಜಲ ಮಟ್ಟ ಕುಸಿತ 
ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್‌ಜಲದ ಮಟ್ಟ ಕುಸಿಯುತ್ತಿದೆ. ಹೀಗಾಗಿ ಸರಕಾರಿ ಬಾವಿ, 
ಬೋರ್‌ವೆಲ್‌ಗ‌ಳು ಬೇಸಗೆಯಲ್ಲಿ  ಬೇಗನೆ ಬರಿದಾಗುತ್ತಿವೆ. ಹೊಸ ಬೋರ್‌ಗಳನ್ನು ಕೊರೆಸಿದರೂ ವಿಫಲವಾಗುತ್ತಿದೆ. ಕೆಲವು ಕಡೆಗಳಲ್ಲಿ  ಗ್ರಾ.ಪಂ. ನೀರು ಹೊರತುಪಡಿಸಿದರೆ ಬೇರೆ ನೀರಿನ ಮೂಲವೇ ಇಲ್ಲವಾಗಿದೆ. ವರ್ಷದಿಂದ ವರ್ಷಕ್ಕೆ ಸಮಸ್ಯೆ ಹೆಚ್ಚುತ್ತಿದೆ. 

ಪಂಚಾಯತ್‌ ಅನುದಾನ ದಿಂದಲೇ ನೀರು ಪೂರೈಕೆ 
ಹಲವೆಡೆ ನೀರಿನ ಸಮಸ್ಯೆ ಇದೆ. ಈಗಾಗಲೇ ಟ್ಯಾಂಕರ್‌ ನೀರಿಗಾಗಿ ಗ್ರಾಮಸ್ಥರಿಂದ ಬೇಡಿಕೆ ಬಂದಿದೆ. ತುರ್ತಾಗಿ ಪಂಚಾಯತ್‌ ಅನುದಾನದಿಂದಲೇ ನೀರು ಪೂರೈಕೆ ಆರಂಭಿಸುತ್ತಿದ್ದೇವೆ.
– ವಿನೋದ ಕಾಮತ್‌,  
ಪಿಡಿಒ ಯಡ್ತಾಡಿ ಗ್ರಾ.ಪಂ.

Advertisement

ವಾರಾಹಿ ನೀರು ದೊರೆತರೆ ಸಮಸ್ಯೆ ಪರಿಹಾರ
ಶಿರಿಯಾರ ಗ್ರಾ.ಪಂ.ದಲ್ಲೂ ಸಮಸ್ಯೆ ಇದೆ. ವಾರಾಹಿ ಕಾಲುವೆಯ ನೀರನ್ನು ಶಿರಿಯಾರ ಮದಗಕ್ಕೆ  ಜೋಡಿಸುವ ಪ್ರಸ್ತಾವನೆ ಈ ಹಿಂದೆ ಕೇಳಿಬಂದಿದ್ದು ಇದು ಕಾರ್ಯಗತವಾದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.   
– ಆನಂದ್‌ ನಾಯ್ಕ,  
ಕಾರ್ಯದರ್ಶಿ ಶಿರಿಯಾರ, ಗ್ರಾ.ಪಂ.

ಸಮಸ್ಯೆ ಪರಿಹರಿಸಿ
ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇಸಗೆಯಲ್ಲಿ ದೊಡ್ಡಮಟ್ಟದ  ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿನ ಶೇ.90ರಷ್ಟು ಭೂ ಭಾಗ  ಕಲ್ಲಿನಿಂದ ಆವೃತವಾದ್ದರಿಂದ ಬೋರ್‌ವೆಲ್‌ಗ‌ಳು ವಿಫಲವಾಗುತ್ತದೆ. ಟ್ಯಾಂಕರ್‌ ನೀರು ತಾತ್ಕಾಲಿಕ ಪರಿಹಾರವಷ್ಟೇ. ವಾರಾಹಿ, ಏತ ನೀರಾವರಿ ಕಾಲುವೆ ವಿಸ್ತರಣೆಯಾಗಬೇಕು. ಬಂಡೀಮಠ ಉಪ್ಪುನೀರು ತಡೆ ಅಣೆಕಟ್ಟು ಅಥವಾ ಸ್ಥಳೀಯ ಹೊಳೆಯ ನೀರನ್ನು  ಶುದ್ಧೀಕರಿಸಿ ನೀಡುವ ಯೋಜನೆಯಾಗಬೇಕು.  
– ಅಲ್ತಾರು ಗೌತಮ್‌ ಹೆಗ್ಡೆ,  ಸ್ಥಳೀಯರು

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next