Advertisement
ಇದೆ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಾವೆಂಕಟಪ್ಪ ನಾಯಕ, ಶಾಸಕ ಹಂಪಯ್ಯ ನಾಯಕ ಸ್ವತಃ ಕಾಡಾ ಅಧ್ಯಕ್ಷರಾಗಿದ್ದು, ತಾಲೂಕಿಗೆ ನೀರು ತಲುಪಿಸುವಲ್ಲಿ ವಿಫಲರಾಗಿದ್ದಾರೆ. ತುಂಗಭದ್ರ ಅಣೆಕಟ್ಟಿನಲ್ಲಿ 10.78 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಮಾರ್ಚ್ 15ರ ರವರೆಗೆ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ತಾಲೂಕಿನ ಕೊನೆ ಭಾಗದ ರೈತರ ಸ್ಥಿತಿ ಗಂಭೀರವಾಗಿದ್ದು, ಕುಡಿಯುವ ನೀರುಗೆ ಪರದಾಡುವಂಥವಾಗಿದೆ. ಈಗಾಗಲೇ ರಾಜ್ಯದಲ್ಲಿ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ತಾಲೂಕಿನ ಶಾಸಕರು ಕಾಡಾ ಅಧ್ಯಕ್ಷರಾಗಿದ್ದೂ ನೀರು ತಲುಪದೆ ಇರುವುದು ದೊಡ್ಡ ದುರಂತ ಎಂದರು.
ಗೋಪಾಲ ನಾಯಕ ಹರವಿ, ಬೆಟ್ಟಪ್ಪ ಬಲ್ಲಟಗಿ, ಮೌಲಾನ್, ಉಸ್ಮಾನ್, ಸುರೇಶ ಹಿರೇಕೋಕ್ಲೃಕಲ್, ಮಲ್ಲೇಶ ಬಾಗಲವಾಡ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಉಪ ಕಾಲುವೆಗೆ ನೀರು ಬಿಡಲು ಒತ್ತಾಯಿಸಿ ಧರಣಿ’ ಸಿರವಾರ: ತುಂಗಭದ್ರಾ ಎಡದಂಡೆ ನಾಲೆಯ ಸಿರವಾರ ವಿಭಾಗದ ಉಪ ಕಾಲುವೆಗಳಿಗೆ ಮಾ.5ರ ವರೆಗೆ ನೀರು ಹರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿ ಕಾರಿಗಳು ಗುರುವಾರ ಧರಣಿ ಸತ್ಯಾಗ್ರಹ ಆರಂಭಿಸಿದರು. ಐಸಿಸಿ ಸಭೆಯಲ್ಲಿ ತಿಳಿಸಿದಂತೆ ಫೆ.28ರ ವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಆದರೆ, ಫೆ.8ರಿಂದಲೇ ನೀರನ್ನು ನಾಲೆಗಳಿಗೆ ಹರಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಲಾಶಯದ ನೀರಿನ ಮಟ್ಟ ಕುಡಿಯುವ ನೀರನ ಅಗತ್ಯತೆಗಿಂತ ಹೆಚ್ಚಿದ್ದು, ಆ ನೀರನ್ನು ಮಾ.5ರ ವರೆಗೆ ಹರಿಸಿದರೆ ರೈತರಿಗೆ ಮತ್ತು ಉಪ ಕಾಲುವೆಗಳ ವ್ಯಾಪ್ತಿಯ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳಲು ಅನುಕೂಲವಾಗುತ್ತದೆ. ಇದನ್ನು ಅಧಿಕಾರಿಗಳು ಸಭೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Related Articles
Advertisement
ಬಳಗಾನೂರು ಹೀರೆ ಹಳ್ಳಕ್ಕೆ ನೀರು ಹರಿಸಿ ಬಳಗಾನೂರು: ತುಂಗಭದ್ರ ಜಲಾಶಯದಿಂದ ರಾಯಚೂರ ಜಿಲ್ಲೆಯ ಜನತೆಯ ಕುಡಿಯುವ ನೀರಿಗಾಗಿ, ತುಂಗಭದ್ರ ಎಡದಂಡೆ ನಾಲೆಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಮಸ್ಕಿ ಹತ್ತಿರದ ಎಸ್ಕೇಪ್ ಗೇಟ್ ಮುಖಾಂತರ ಬಳಗಾನೂರು ಹೀರೆ ಹಳ್ಳಕ್ಕೆ ನೀರು ಹರಿಸಬೇಕು. ಇದರಿಂದ ಸಿಂಧನೂರು ಹಾಗೂ ಮಾನ್ವಿ ತಾಲೂಕಿನ ಹಲವಾರು ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಿದಂತಾಗುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪಟ್ಟಣ ಸೇರಿ ಉದಾಳ, ದುರ್ಗಾ ಕ್ಯಾಂಪ್, ಸುಂಕನೂರು, ಕಡಬೂರು, ಕ್ಯಾತನಹಟ್ಟಿ, ಹುಲ್ಲೂರು, ಗೌಡನಭಾವಿ, ಬೆಳ್ಳಿಗನೂರು, ಬುದ್ದಿನ್ನಿ, ಸಾಗರಕ್ಯಾಂಪ್, ಉಟಕನೂರು, ಮಲ್ಕಾಪೂರ ಬಿ.ಉದಾºಳ, ಧೊತರಬಂಡಿ, ತಡಕಲ್, ಜೀನೂರು, ರಾಮತ್ನಾಳ, ಲವಾಡ್ಗಿ, ದಿದ್ಗಿ, ಬನ್ನಿಗನೂರು ಸೇರಿ ಇತರೆ ಹಳ್ಳಿಗಳ ಕುಡಿಯುವ ನೀರಿನ ನೂರಾರು ಬೋರ್‌ವೆಲ್‌ಗಳು ಹೀರೆಹಳ್ಳದ ಸಮೀಪದಲ್ಲಿವೆ. ಹೀರೆ ಹಳ್ಳ
ಬತ್ತಿರುವುದರಿಂದ ಈ ಭಾಗದಲ್ಲಿ ಅಂರ್ತಜಲ ಮಟ್ಟ ಕುಸಿದು ಬೋರ್‌ವೆಲ್‌ಗಳು ಬತ್ತುತ್ತಿವೆ. ಪಟ್ಟಣದ ಎಲ್ಲ ವಾರ್ಡ್‌ನ ನಿವಾಸಿಗಳಿಗೆ ಸಮರ್ಪಕ ನೀರು ಪೂರೈಸಲು ಆಗುತ್ತಿಲ್ಲ. 4-5 ದಿನಗಳಿಗೆ ಒಮ್ಮೆ ನೀರು ಸರಬರಾಜು ಆಗುತ್ತಿದೆ. ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಹಳ್ಳಕ್ಕೆ ನೀರು ಹರಿಸುವುದರಿಂದ ಬೋರ್ ವೆಲ್‌ಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ. ಬಿಕ್ಕುತ್ತಿರುವ ಬೋರ್ ವೆಲ್‌ಗಳಿಗೆ ಜೀವ ಬಂದಂತಾಗುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.