Advertisement

ಬೀದಿಯಲ್ಲಿ ನಿಂತು ಮುತ್ತಿಕ್ಕುವ ಅಗತ್ಯವೇನಿದೆ?

06:00 AM Jun 12, 2018 | |

“ಮುತ್ತು ಕೊಟ್ರೆ ಏನಾಯ್ತಿಗ ಕೊಡ್ಲಿ ಬಿಡ್ರೀ…’ ಎಂಬ ಮಾತುಗಳು ಬಂದಿವೆ. “ಮುತ್ತುಕೊಟ್ಟರೆ ತೂಕ ಕಡಿಮೆ ಆಗುತ್ತಂತೆ, ಆರೋಗ್ಯಕ್ಕೂ ಒಳ್ಳೇದಂತೆ. ಅವರು ಮುತ್ತಿಕ್ಕಿದರೆ, ನೀವ್ಯಾಕ್ರೀ ವಿರೋಧ ಮಾಡ್ತೀರಾ?’ ಎಂದು ಕೇಳುತ್ತಾರೆ. ಆದರೆ ಈ ಮಾತು ಆ ವ್ಯಕ್ತಿಗೆ ಸಾಮಾಜಿಕ ಜವಾಬ್ದಾರಿ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ. 

Advertisement

ಅಂತರಾಳದಲ್ಲಿರುವ ಪ್ರೀತಿಯನ್ನ ಹೊರತಂದು ವ್ಯಕ್ತಪಡಿಸುವ ಕ್ರಿಯೆಗಳಲ್ಲಿ ಮುತ್ತು ಕೊಡುವುದೂ ಒಂದು. ಯಾವುದೇ ವಯಸ್ಸಿನವರಾಗಿರಲಿ ಮುತ್ತು ಕೊಡುವುದನ್ನು ವೈಯಕ್ತಿಕವಾಗಿರಿಸಿಕೊಳ್ಳುತ್ತಾರೆಯೇ ಹೊರತು, ಕಂಡವರ ಸನಿಹಕ್ಕೆ ಹೋಗಿ ಮುತ್ತಿಕ್ಕುವುದನ್ನು ಯಾರೂ ಗೌರವಿಸುವುದೂ ಇಲ್ಲ. ಬೇರೆಯವರು ಗೌರವಿಸದಿದ್ದರೆ ಬೇಡ, ಅದು ನಮ್ಮಿಷ್ಟ. ನಾವು ಸಾರ್ವಜನಿಕವಾಗಿ ಮುತ್ತು ಕೊಡುವ ಮೂಲಕ ಸಮಾಜದ ಪರಿಸ್ಥಿತಿಯನ್ನು ಅದರಲ್ಲಿನ ತುಮುಲಗಳನ್ನು ಸರಿಪಡಿಸ್ತೀವಿ ಅಂದುಕೊಂಡರೆ ಅದು ತಪ್ಪು. ಯಾಕೆಂದರೆ, ಮುತ್ತು ಕೊಡುವುದನ್ನು ಮನುಷ್ಯ ಆವಿಷ್ಕರಿಸಿದ್ದಲ್ಲ. ಬದಲಿಗೆ ಸೃಷ್ಟಿ ಪ್ರಕ್ರಿಯೆಯಲ್ಲಿ ಮನುಷ್ಯನ ಸೃಷ್ಟಿಯಾಗಿ, ಯಾವ್ಯಾವ ವಯಸ್ಸಿನಲ್ಲಿ ಏನು ಕ್ರಿಯೆಗಳು ನಡೆಯಬೇಕು, ಯಾವ ಅಂಗಗಳು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬ ಪ್ರಶ್ನೆಗೆ ಉತ್ತರವಾಗಿ ಚುಂಬನ ಇದೆ. ಇಲ್ಲಿ (ಆ್ಯಕ್ಷನ್‌ – ರಿಯಾಕ್ಷನ್‌) ಕ್ರಿಯೆಯಿಂದಾಗುವ ನಡವಳಿಕೆ, ದೇಹದ ಬದಲಾವಣೆ, ಮಾನಸಿಕ ಪರಿವರ್ತನೆ, ಎಲ್ಲ ವಯಸ್ಸಿನಲ್ಲೂ ಮನುಷ್ಯ ದೇಹದಲ್ಲಾಗುವ ರಾಸಾಯನಿಕ ವರ್ತನೆಗಳು ಮುಖ್ಯ ವಾಗುತ್ತದೆ. ಇದೆಲ್ಲ ತನ್ನಿಂದ ತಾನಾಗಿಯೇ ಬಂದ ಅಂಶಗಳು. ಬೇಕು ಅಂದಾಕ್ಷಣ ಕೊಳ್ಳೋದಕ್ಕೂ, ಬಲವಂತವಾಗಿ ಕಿತ್ತುಕೊಳ್ಳಲು ಸಾಧ್ಯವಿಲ್ಲ.

ನಮ್ಮ ದೇಹವನ್ನು ನಾವು ಗೌರವಿಸಿದಾಗ ಕಂಡ ಕಂಡವರಿಗೆ ಚುಂಬಿಸುವ ಕೆಲಸವನ್ನು ಮಾಡುವುದಿಲ್ಲ. ಚುಂಬಿಸುವುದಿರಲಿ, ಮತ್ತೂಬ್ಬರ ದೇಹಕ್ಕೆ ತಾಗುವಂತೆ ನಿಲ್ಲುವುದು, ಒರಗಿಕೊಳ್ಳುವುದೂ ಸಾಧ್ಯವಿಲ್ಲ. ಪುಟ್ಟ ಮಕ್ಕಳಾಗಿದ್ದ ವೇಳೆ ನಮ್ಮ ಅಪ್ಪ-ಅಮ್ಮ, ಅಜ್ಜಿ-ತಾತ, ಮನೆಯವರೆಲ್ಲ ಎತ್ತಿ ಬಾಚಿ ತಬ್ಬಿಕೊಂಡು ಮುತ್ತಿನ ಮಳೆಯನ್ನು ಹರಿಸಿದವರೇ. ಅದು ಒಡಲಾಳದ ಬಾಂಧವ್ಯದ ಲಕ್ಷಣ. ಹಾಗೇ ನಾವು ಬೆಳೆಯುತ್ತಾ ಬೆಳೆಯುತ್ತಾ, ಶಾಲೆಗೆ ಕಾಲಿಟ್ಟr ಸಂದರ್ಭದಲ್ಲಿ ಚುಂಬನದ ಬಗೆಗೆ ಒಂದು ಬಗೆಯ ಕುತೂಹಲ ಇರುತ್ತದೆ. ಅದೊಂದು ಅಮೂಲ್ಯ ಅನುಭೂತಿಯ ಕ್ರಿಯೆ ಎಂಬ ಕಾರಣಕ್ಕೆ ಅನುಭವ ಪಡೆಯಲು ಮುಂದಾಗುವುದಿಲ್ಲ. ಬೆಳೆದು ದೊಡ್ಡವರಾದ ಮೇಲೆಯೂ ಪ್ರಾಣ ಸ್ನೇಹಿತರು, ಸಂಬಂಧಿಕರು ನಮ್ಮ ಮೇಲಿನ ಪ್ರೀತಿಗೆ ಅಪ್ಪಿಮುದ್ದಾ ಡುತ್ತಾರೆ. ಈ ಸಂದರ್ಭ ಕೆಲವರು ಮುಜುಗರ ಪಟ್ಟಕೊಂಡರೆ, ಮತ್ತೆ ಕೆಲವರು ಅದರಲ್ಲಿನ ಬಾಂಧವ್ಯ ಅನುಭವಿಸುತ್ತಾರೆ. ಇದೇ ವೇಳೆ ನಮ್ಮ ಹೆತ್ತವರು ನಮ್ಮನ್ನು ಆಲಿಂಗಿಸಿ ಮುದ್ದಾಡಿದರೂ, ನಮಗೆ ಅದು ನೆಮ್ಮದಿ ಕೊಡುವ ವಿಷಯವಾಗಿರುತ್ತದೆ.

ಪ್ರೇಮದ ವಿಚಾರಕ್ಕೆ ಬಂದರೆ, ಹುಡುಗ ಹುಡುಗಿಯಿಂದ ಒಂದು ಪ್ರೀತಿಯ ಚುಂಬನ ಪಡೆಯಲು ಅದೆಷ್ಟೋ ಕಷ್ಟ ಪಡುತ್ತಾನೆ. ಪರಸ್ಪರ ಪರಿಚಯವಾಗಿ ಇಬ್ಬರಲ್ಲೂ ಸ್ನೇಹ ಬೆಳೆದು, ಪ್ರೀತಿಯ ಸಸಿ ಹುಟ್ಟಿ ಹೆಮ್ಮರವಾದ ಬಳಿಕವೂ ಚುಂಬನದ ವಿಚಾರದಲ್ಲಿ ಅಷ್ಟೊಂದಾಗಿ ಮುಂದುವರಿಯಲ್ಲ. ಅದಕ್ಕೆಂದೇ ಹುಡುಗ ಪೀಠಿಕೆ ಹಾಕಿ, ಅವಳ ಮನಸ್ಸು ಹೇಗಿದೆ ಎಂದು ತೂಗಿ, ಬೈದ್ರೆ ಏನ್ಮಾಡೋದಪ್ಪ ಎಂಬ ವ್ಯಾಕುಲತೆಯಲ್ಲೇ ಚುಂಬನ ಬಯಸುತ್ತಾನೆ. ಕಾರಣ ಮುತ್ತು ಹೇಳಿಕೇಳಿ ಬರುವುದಲ್ಲ. ಅದು ಅಮೂಲ್ಯ.

ಇತ್ತೀಚಿನ ದಿನಗಳಲ್ಲಿ ಕಿಸ್ಸಿಂಗ್‌ ಡೇಯನ್ನು ಹಲವು ಜನ ಬೆಂಬಲಿಸಿದ್ದಾರೆ. “ಮುತ್ತು ಕೊಟ್ರೆ ಏನಾಯ್ತಿàಗ ಕೊಡ್ಲಿ ಬಿಡ್ರೀ…’ ಎಂಬ ಮಾತುಗಳು ಬಂದಿವೆ. “ಮುತ್ತುಕೊಟ್ಟರೆ ತೂಕ ಕಡಿಮೆ ಆಗುತ್ತಂತೆ, ಆರೋಗ್ಯಕ್ಕೂ ಒಳ್ಳೇದಂತೆ. ಅವರು ಮುತ್ತಿಕ್ಕಿದರೆ, ನೀವ್ಯಾಕ್ರೀ ವಿರೋಧ ಮಾಡ್ತೀರಾ?’ ಎಂದು ಕೇಳುತ್ತಾರೆ. ಆದರೆ ಈ ಮಾತು ಆ ವ್ಯಕ್ತಿಗೆ ಸಾಮಾಜಿಕ ಜವಾಬ್ದಾರಿ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ. ಅವರು ಸಮಾಜಕ್ಕೆ ಏನನ್ನು ತೋರಿಸಲು ಹೊರಡುತ್ತಿದ್ದಾರೆ ಎಂಬ ಪ್ರಶ್ನೆ ಏಳುತ್ತದೆ. ಯಾರು ಯಾರಿಗೆ ಮುತ್ತು ಕೊಟ್ಟರೆ ಏನಂತೆ ಎಂಬ ಪ್ರಶ್ನೆಯೊಂದೇ ಇಲ್ಲಿ ಪ್ರಮುಖ ವಿಚಾರವಲ್ಲ. ಆದರೆ ವೈಯಕ್ತಿಕವಾಗಿ, ಬೇಕಾದ ಜಾಗದಲ್ಲಿ ಮನಸ್ಸಿಗೆ ಬಂದಂತೆ ಪ್ರಬುದ್ಧರಿಬ್ಬರು ವರ್ತಿಸುವುದು ಅವರಿಗೇ ಬಿಟ್ಟಿದ್ದು. ಆದರೆ ಸಾರ್ವಜನಿಕವಾಗಿ ಚುಂಬನಕ್ಕೊಂದು ಕಾರ್ಯಕ್ರಮ ಮಾಡಿ ಅದರಲ್ಲಿ ಅಶ್ಲೀಲವಾಗಿ ನಡೆದುಕೊಳ್ಳುವುದು ಗೌರವಕ್ಕೆ ಕುಂದು. ಯುವ ಜನತೆ ಹೀಗೆ ಮಾಡುವುದರಿಂದ ಸಮಾಜದ ಓರೆಕೋರೆಗಳು ನೆಟ್ಟಗಾಗುತ್ತವೆ ಅಂದುಕೊಂಡರೆ, ಅದೊಂದು ತಪ್ಪು ಲೆಕ್ಕಾಚಾರವಷ್ಟೇ.

Advertisement

ನಮ್ಮ ಸಂಸ್ಕಾರ, ಸಂಪ್ರದಾಯ, ಸಂಬಂಧಗಳಿಗೆಗೆ ನಾವು ಕೊಡುವ ಗೌರವಗಳಿಗೆ ವಿರೋಧವಾಗಿ ನಡೆದುಕೊಳ್ಳುವುದು ಚುಂಬನ ಕಾರ್ಯಕ್ರಮದ ಧ್ಯೇಯವೇ ಎಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಇದರಿಂದ ಆದರ್ಶ ವ್ಯಕ್ತಿಗಳಾಗುವುದು ಸಾಧ್ಯವೇ ಇಲ್ಲ. ಇದೊಂದು ವ್ಯರ್ಥ ಪ್ರಯತ್ನವಷ್ಟೆ. ಎಲ್ಲವನ್ನೂ ಬೀದಿಯಲ್ಲಿ ಪ್ರದರ್ಶಿದರೆ, ಕುಟುಂಬ ವ್ಯವಸ್ಥೆಯೇಕೆ? ಬೀದಿಯಲ್ಲೇ ಸಂಸಾರ ಮಾಡಿ ಎಲ್ಲರಿಗೂ ಮಾದರಿಯಾಗಿರಲು ಸಾಧ್ಯವೇ?

ಆತ್ಮಗೌರವ ಇಲ್ಲದ ವ್ಯಕ್ತಿಗಳು ಇಂತಹ ಕ್ರಿಯೆಗಳನ್ನು ದುರುಪಯೋಗ ಪಡಿಸಿಕೊಳ್ಳಬಹುದು. ಮನಸಾರೆ ಒಬ್ಬರಿಗೆ ಮುತ್ತಿಕ್ಕುವುದು ಅದು ಮನಸ್ಸು ಅಮೂಲ್ಯ ಪ್ರೀತಿ ತೋರಿದಾಗ ಮಾತ್ರ. ಮನುಷ್ಯ ಮತ್ತೂಬ್ಬರನ್ನು ಯಾವುದಕ್ಕೆ ಬೇಕಾದರೂ ಬಲವಂತಪಡಿಸಬಹುದು. ಬಲತ್ಕಾರದಿಂದ ಮಾಡಿಸಬಹುದು. ಆದರೆ ಪ್ರೀತಿಯಿಂದ  ಮುತ್ತಿಕ್ಕು ವುದನ್ನಲ್ಲ. ಸ್ವ ಇಚ್ಛೆಯಿದ್ದಾಗ ಮಾತ್ರ, ಮನಸ್ಸಿದ್ದು ಒಬ್ಬರು ಮುತ್ತಿಕ್ಕುತ್ತಾರೆಂದರೆ ಅವರ ಹೃದಯಕ್ಕೆ ನಾವು ಹತ್ತಿರವಾದವರು ಎಂದೇ ಅರ್ಥ, ಅದನ್ನು ವ್ಯಕ್ತಪಡಿಸಲು ಮುತ್ತಿಕ್ಕುತ್ತಾರಷ್ಟೇ.

ನಮ್ಮ ಮನೆಯ ಸಾಕು ಪ್ರಾಣಿಗಳಿಗೆ ನಾವು ಮುದ್ದು ಮಾಡಿ ಮುತ್ತಿಕ್ಕುತ್ತೇವೆ. ಆದೇ, ಮನಗೆ ಬಂದ ಅತಿಥಿಗಳಿಗೆಲ್ಲಾ ಹಾಗೇ ಮಾಡಲು ಹೋಗುವುದಿಲ್ಲ. ಕೆಲವರಿಗೆ ಮಾಡಬಹುದು, ಕೆಲವರಿಗೆ ಇಲ್ಲ, ಅದು ಮಾನಸಿಕತೆಗೆ, ದೈಹಿಕತೆಗೆ ಸಂಬಂಧಿಸಿದ್ದು. ಹೇಳಿ ಕೊಳ್ಳಲು ಆಗದಂತಹ ಅಂತರಂಗದ ಸುಖಕ್ಕೆ ಸಂಬಂಧಿ ಸಿದ್ದು. ಪ್ರೀತಿಪಾತ್ರರು ನಿಧನರಾದಾಗ, ಕೆಲವೊಮ್ಮೆ ನಾವು ಮುತ್ತಿಕ್ಕುತ್ತೇವೆ. ಪುಟ್ಟ ಮಕ್ಕಳಿಗೆ ಮುತ್ತಿಕ್ಕಿಯೇ ಮಲಗಿಸುತ್ತೇವೆ. ನಮಗೆ ಪ್ರಿಯವಾದ ದೇವರ ಮೂರ್ತಿಗೂ ತಬ್ಬಿ ಮುತ್ತಿಕ್ಕುತ್ತೇವೆ, ಅಪ್ಪ-ಅಮ್ಮನಿಗೂ ಮುತ್ತಿಕ್ಕುತ್ತೇವೆ. ಪ್ರಾಣಸ್ನೇಹಿತರಿಗೂ ಮುತ್ತಿಕ್ಕುತ್ತೇವೆ. ಅದು ಸಾಮೀಪ್ಯ, ಬಂಧದ ದ್ಯೋತಕ. ಆದರೆ ಬೀದಿಯಲ್ಲಿ ರುವವರಿಗೆಲ್ಲ ಮುತ್ತಿಕ್ಕುವ ವಿಚಾರದಲ್ಲಿ ಮುತ್ತಿಗೆ ಬೆಲೆ ಇಲ್ಲ. ಹಾಗೊಂದು ವೇಳೆ ಮುತ್ತಿಕ್ಕಿದ ನಂತರದ ಪ್ರತಿಕ್ರಿಯೆಗಳು, ಪರಿಣಾಮಗಳು ಏನಾದರೂ ಆಗಬಹುದು ಅಲ್ಲವೇ? ಬಾಲ್ಯದಿಂದಲೇ ಎಲ್ಲ ಅನುಭವಗಳು ಪ್ರಕೃತಿದತ್ತವಾಗಿ ಬರುತ್ತವೆ. 

ಅದಕ್ಕಾಗಿ ಪ್ರತ್ಯೇಕ ಅಭ್ಯಾಸ, ತರಬೇತಿ ಬೇಡ, ಯಾವುದನ್ನೋ ವಿರೋಧಿಸಲು ಕಂಡ ಕಂಡಲ್ಲಿ ಮುತ್ತಿಕ್ಕುವುದರಿಂದ ನಿಜವಾದ ಸಮಸ್ಯೆ ಕಡಿಮೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಮಾಜದಲ್ಲಿ ನಾವು ಹಾಕಿಕೊಳ್ಳಬೇಕಾಗದ ಚೌಕಟ್ಟನ್ನು ತಂದೆ ತಾಯಿಯಂದಿರು ಕಲಿಸಬೇಕು. ಇದರಿಂದ ಮಕ್ಕಳು ಅತಿರೇಕದ ಮಟ್ಟಕ್ಕಿಳಿಯುವುದು ತಪ್ಪುತ್ತದೆ. ಬೇರೆಯವರಿಗೆ ಬುದ್ಧಿ ಕಲಿಸುವ ಯತ್ನವಾಗಿ ಬೀದಿಗಿಳಿದು ಮುತ್ತಿಕ್ಕುವ ಭರದಲ್ಲಿ ಜನ ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಳ್ಳುತ್ತಾರೆ. ಪ್ರತಿಯೊಬ್ಬ ಪ್ರಜೆ ತನ್ನನ್ನು ತಾನು ಗೌರವದಿಂದ ಕಂಡು, ಇತರರನ್ನೂ ಗೌರವಿಸಿದರೆ, ಸ್ವಸ್ಥ ಸಮಾಜ ಸೃಷ್ಟಿಯಾಗುತ್ತದೆ. ದೇಶಕ್ಕೂ ಗೌರವ ಸಿಗುತ್ತದೆ ಅಲ್ಲವೇ?

Advertisement

Udayavani is now on Telegram. Click here to join our channel and stay updated with the latest news.

Next