Advertisement
ಗಾಢವಾದ ಓದು, ಬರಹದ ನಿರಂತರ ಅಭ್ಯಾಸ ಹಾಗೂ ಆಲಿಸುವಿಕೆ ಭಾಷಾ ಸಾಮರ್ಥ್ಯ ಉತ್ತಮಪಡಿಸಿಕೊಳ್ಳಲು ಅಗತ್ಯ ಎಂದ ಅವರು ಪ್ರಸ್ತುತ ಸಂದರ್ಭದಲ್ಲಿ ಸಂವಹನ ಕಲೆಯನ್ನು ಹೇಗೆ ಬೆಳೆಸಿಕೊಳ್ಳಬಹುದು ಎಂಬುದನ್ನು ನಿದರ್ಶನಗಳ ಮೂಲಕ ಸ್ಪಷ್ಟಪಡಿಸಿದರು.ಪ್ರಭಾರ ಪ್ರಾಂಶುಪಾಲೆ ಧನಲಕ್ಷ್ಮೀ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಶಿಕ್ಷಕರು ಮಕ್ಕಳಲ್ಲಿ ಭಾಷಾ ಸಾಮರ್ಥ್ಯ ಬೆಳಸುವ ಜವಾಬ್ದಾರಿ ಹೊತ್ತಿರುವುದರಿಂದ ಪರಿಣಾಮಕಾರಿ ಸಂವಹನ ಕಲೆ ಸ್ವತಃ ರೂಢಿಸಿಕೊಳ್ಳಬೇಕು ಎಂದರು.
ಭ್ರಮರ ಬಿ.ಕೆ. ವಂದಿಸಿದರು. ಬೆನಿಟಾ ಜುವೆನ್ಸ್ ಕ್ರಾಸ್ಟ ಕಾರ್ಯಕ್ರಮ ನಿರೂಪಿಸಿದರು.