Advertisement

ಧರ್ಮವೇಕೆ ಬೇಕು?ಬಿಟ್ಟೇ ಬಿಡಿ

07:20 AM Jul 20, 2017 | Team Udayavani |

ಬೀಜಿಂಗ್‌: ಭಾರತದ ನೆರೆಯ ದೇಶದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷ “ಧರ್ಮಾಚರಣೆ ಬೇಡ. ಪಕ್ಷದ ಏಕತೆಗಾಗಿ ಇಂಥ ಕ್ರಮ ಅಗತ್ಯ. ಅದನ್ನು ಮೀರಿದರೆ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದೆ. ಚೀನಾದ ಧಾರ್ಮಿಕ ನಂಬಿಕೆಗಳನ್ನು ನಿಯಂತ್ರಿಸುವ ಸಮಿತಿ ಮುಖ್ಯಸ್ಥ ಈ ಆದೇಶ ನೀಡಿದ್ದಾರೆ. ಧಾರ್ಮಿಕ ನಂಬಿಕೆಗಳ ಬಗ್ಗೆ ಒಲವು ಇರುವವರಿಗೆ ಅದನ್ನು ತ್ಯಜಿಸುವಂತೆ ತಿಳಿಸುವ ಕಾರ್ಯಗಳೂ ನಡೆಯಬೇಕು ಎಂದು ಅವರು ಹೇಳಿದ್ದಾರೆ. ಈ ಆದೇಶ ತೀವ್ರ ವಿವಾದಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಾಸ್ತಿಕವಾದದಲ್ಲಿ ನಂಬಿಕೆ ಇಡಬೇಕು ಎಂದಿದ್ದಾರೆ. ಇದರ ಜತೆಗೆ ಪಕ್ಷದ ಕಾರ್ಯಕರ್ತರು ಧಾರ್ಮಿಕ ನಂಬಿಕೆ ಬೆಂಬಲಿಸುವುದನ್ನೂ ಕೈಬಿಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

Advertisement

“ಕ್ವಿಶಿ’ ನಿಯತಕಾಲಿಕದಲ್ಲಿ ಶನಿವಾರ ಬರೆದ ಲೇಖನದಲ್ಲಿ ಈ ಮಾಹಿತಿ ಇದೆ. ಅಕ್ಟೋಬರ್‌ನಲ್ಲಿ ನಡೆಯುವ ಪಕ್ಷದ 19ನೇ ಮಹಾಧಿವೇಶನಕ್ಕೆ ಸಿದ್ಧತೆ ನಡೆಯುತ್ತಿರುವಂತೆಯೇ ಇದು ಬಹಿರಂಗವಾಗಿದೆ. ಇಷ್ಟು ಮಾತ್ರವಲ್ಲದೆ ಆರ್ಥಿಕಾಭಿವೃದ್ಧಿ ನೆಪದಲ್ಲಿ ಯಾವುದೇ ಧಾರ್ಮಿಕ ನಂಬಿಕೆಗಳಿಗೆ ಬೆಂಬಲ ನೀಡಬಾರದು. ಚೀನಾದಲ್ಲಿ ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುತ್ತಿವೆ ಎಂಬ ವರದಿಗಳ ನಡುವೆಯೇ ಇದು ಕಿಡಿ ಹೊತ್ತಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next