Advertisement
ಕಾರ್ಯಕ್ಷಮತೆಗೆ ಧೂಳುವಾಸ್ತವವಾಗಿ ಧೂಳಿನ ಪದರ ಸೋಲಾರ್ ಪ್ಯಾನಲ್‌ನ ಮೇಲೆ ಹರಡಿ ಕುಳಿತುಕೊಳ್ಳುವುದರಿಂದ ಅದರ ಎಫಿಶಿಯೆನ್ಸಿಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿಯೇ ಏರಿಳಿತವಾಗುತ್ತದೆ. ಇದನ್ನು ಹೋಗಲಾಡಿಸಿಕೊಳ್ಳಲು ನಿಯುಮಿತವಾಗಿ ಅದರ ಮೇಲ್ಮೆ„ಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಿರಬೇಕಾಗುತ್ತದೆ.
ದೊಡ್ಡ ಪ್ರಮಾಣದಲ್ಲಿ ಪ್ಯಾನೆಲ್ ಗಳನ್ನು ಹಾಕಿದಾಗ ಮಂಜು, ಮಳೆಗಾಲವನ್ನೋ ನಂಬಲೇಬಾರದು. ಅದನ್ನು ಕ್ಲೀನ್ ಮಾಡುವುದು ಕೂಡ ಉತ್ಪಾದನೆಯ ಒಂದು ಭಾಗ. ಮಾನವ ಶಕ್ತಿ ಬಳಸಿ ಸ್ವಚ್ಛಗೊಳಿಸಬಹುದು. ಅದಕ್ಕೆ ಬೇಕಾದ ಸಲಕರಣೆಗಳು ಮಾರುಕಟ್ಟೆಯಲ್ಲಿ ಲಭ್ಯ.ಯಂತ್ರ ವ್ಯವಸ್ಥೆಯೇ ಇದೆ. ಪ್ಯಾನೆಲ್ ಮೇಲೆ ಸ್ಪ್ರಿಂಕ್ಲರ್ ನೀರಿನ ಮೂಲಕ ವ್ಯವಸ್ಥಿತವಾಗಿ ಸ್ವಚ್ಛಗೊಳಿಸಲೂಬಹುದು. ಇಲ್ಲವಾದರೆ ಪ್ಯಾನಲ್ ಮೇಲಿನ ಧೂಳು ಕೊಡ ಹುವ ಭರದ ಗಾಳಿ ಊದುವ ಯಂತ್ರ ವ್ಯವಸ್ಥೆಯೂ ಇದೆ.
Related Articles
Advertisement
ಎಚ್ಚರಿಕೆ ಅಗತ್ಯನೀರು ಹನಿಸುವ ಕೆಲಸ ಬೆಳ್ಳಂಬೆಳಗ್ಗೆ ಅಥವಾ ಸೂರ್ಯಾಸ್ತದ ಅನಂತರವಾದರೆ ಸೂಕ್ತ. ಸೂರ್ಯನ ರಶ್ಮಿಯಿಂದ ಬಿಸಿಯಾಗಿರುವ ಪ್ಯಾನೆಲ್ ಮೇಲೆ ನೀರು ಹಾಯಿಸಿದಾಗ ಹಲವು ಬಾರಿ ಪ್ಯಾನೆಲ್‌ನಲ್ಲಿ ಬಿರುಕು ಉಂಟಾಗಬಹುದು. ಸೋಲಾರ್ ಪ್ಯಾನೆಲ್‌ಗಳನ್ನು ಸ್ವಚ್ಛಗೊಳಿಸುವ ಕಿಟ್ ಮಾರು ಕಟ್ಟೆಯಲ್ಲಿ ಸಿಗುತ್ತದೆ. ಸೋಲಾರ್ ಪ್ಯಾನೆಲ್ ಮೇಲಿನ ಸೂಕ್ಷ್ಮ ಗಾಜಿನ ಪದರಕ್ಕೆ ಏಟು ಬೀಳುವಂತಹ ಸ್ಪಾಂಜ್, ಬ್ರಷ್ ಬಳಕೆಯನ್ನಂತೂ ಮಾಡಬಾರದು. ಗುರು ಸಾಗರ