Advertisement

ಭತ್ತದ ಕೃಷಿಗೆ ಸಹಾಯಧನ ಅಗತ್ಯ : ಮನುಮುತ್ತಪ್ಪ

06:45 AM Aug 10, 2017 | |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭತ್ತದ ಕೃಷಿ ಉಳಿಯಬೇಕಾದರೆ ಸರಕಾರ ಬೆಂಬಲ ಬೆಲೆ ಹಾಗೂ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷರಾದ ಎ.ಕೆ. ಮನುಮುತ್ತಪ್ಪ ತಿಳಿಸಿದ್ದಾರೆ.

Advertisement

ಹಾಸನದ ಕೃಷಿಕ್‌ ಭಾರತಿ ಕೋ ಆಪರೇಟಿವ್‌, ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕುಶಾಲನಗರ ಶಾಖೆ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ ನಿಯಮಿತ, ಸಹಕಾರ ಹಾಗೂ ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ ಸಭಾಂಗಣದಲ್ಲಿ ನಡೆದ ಸಹಕಾರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ರೈತರು ನಷ್ಟವನ್ನು ಅನುಭವಿಸುತ್ತಿದ್ದು, ಭತ್ತದ ಕೃಷಿಯಿಂದ ಹಿಂದೆ ಸರಿಯುತ್ತಿ ದ್ದಾರೆ. ಕೃಷಿಯನ್ನು ಉಳಿಸುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ. ಇದನ್ನು ಮನಗಂಡು ಸರಕಾರ ರೈತರ ಸಹಾಯಕ್ಕೆ ಬರಬೇಕೆಂದು ಹೇಳಿದರು. ಈ ಹಿಂದೆ ಜಿಲ್ಲೆಯ ಜನ ಕೃಷಿ ಚಟುವಟಿಕೆಗೆ ಹಿಂದೇಟು ಹಾಕುತ್ತಿರಲಿಲ್ಲ. ವರ್ಷದಲ್ಲಿ 2 ಬೆಳೆ ತೆಗೆಯುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಬೆಂಬಲ ಬೆಲೆಯ ಅಗತ್ಯವಿದೆ. ಅಲ್ಲದೆ ಸಹಾಯಧನವನ್ನು ಮತ್ತು ಖಾತ್ರಿಯನ್ನೂ ನೀಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರಕಾರ ಮಹಾಮಂಡಳದ ನಿರ್ದೇಶಕ ಬೆಲ್ಲು ಸೋಮಯ್ಯ ಮಾತನಾಡಿ, ರೈತರು ಆರ್ಥಿಕವಾಗಿ ನಷ್ಟದಲ್ಲಿರುವಾಗ ಕೃಷಿ ಇಲಾಖೆ ಕೇವಲ 1500 ರೂ. ಪ್ರೋತ್ಸಾಹಧನ ನೀಡಲು ಮುಂದಾಗಿರುವುದು ಸರಿ ಯಾದ ಕ್ರಮವಲ್ಲವೆಂದರು.
 
ರೈತರನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್‌ ಸರಕಾರ ರೈತರಿಗೆ ಯಾವುದೇ ಅನುಕೂಲವನ್ನು ನೀಡುತ್ತಿಲ್ಲ. ಈಗಾಗಲೇ ಕೊಡಗಿನ ಏಲಕ್ಕಿ, ಜೇನು, ಮೆಣಸು, ಕಿತ್ತಳೆ ಅವನತಿಯತ್ತ ಸಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಕೊಡಗಿನ ಕಾಫಿ ಬೆಳೆಯನ್ನು ಕಳೆದುಕೊಳ್ಳುವ ಭೀತಿ ಎದುರಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

ಬೆಂಗಳೂರು ಕ್ರಿಬೊRàದ ರಾಜ್ಯ ಮಾರಾಟ ವ್ಯವಸ್ಥಾಪಕ ಎಚ್‌.ಇ. ಮರಿಸ್ವಾಮಿ ಮಾತನಾಡಿ, ಸಹಕಾರಿ ಸಂಘಗಳು ಬಲಗೊಳ್ಳುವುದರಿಂದ ರೈತರು ಕೂಡ ಸಬಲರಾಗುತ್ತಾರೆ. ಇಂತಹ ಅವಕಾಶಗಳನ್ನು ಸದುಪ ಯೋಗಪಡೆಸಿಕೊಳ್ಳಬೇಕು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next