Advertisement
ಕರ್ನಾಟಕ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ, ಅರಣ್ಯ ಇಲಾಖೆ ಮತ್ತು ಶ್ರೀ ಧ.ಮಂ. ಕಾಲೇಜಿನ ಆಶ್ರಯದಲ್ಲಿ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಮಂಗಳವಾರ ನಡೆದ “ಪಶ್ಚಿಮ ಘಟ್ಟಗಳ ಸಂರಕ್ಷಣೆ, ಮಹತ್ವ, ನೇತ್ರಾವತಿ ಮತ್ತು ಇತರ ಉಪನದಿಗಳ ಪವಿತ್ರತೆ-ಪ್ರಾಮುಖ್ಯತೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವನ್ಯಜೀವಿಗಳು ಇಂದು ಆಹಾರ ಅರಸುತ್ತಾ ನಾಡಿಗೆ ಬಂದು ಮನು ಷ್ಯನ ಹಾವಳಿಗೆ ತುತ್ತಾಗುತ್ತಿವೆ. ಮಾತು ಬರುತ್ತಿದ್ದರೆ ಅವುಗಳೂ ಸಂಘಟಿತ ವಾಗುತ್ತಿದ್ದವು. ಆದರೆ ಮನುಷ್ಯನ ಹಾವಳಿಯ ವಿರುದ್ಧ ಧ್ವನಿ ಎತ್ತಲಾಗದಂತ ಪರಿಸ್ಥಿತಿ ಅವುಗಳದು. ಅವುಗಳ ಆಹಾರಕ್ರಮಕ್ಕೆ ಅನುಗುಣವಾಗಿ ಧರ್ಮಸ್ಥಳ ಕ್ಷೇತ್ರವು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅರಣ್ಯ ಭಾಗದಲ್ಲಿ 54,000 ಹಣ್ಣಿನ ಗಿಡಗಳನ್ನು ನಾಟಿ ಮಾಡಿದೆ. ಈ ಯೋಜನೆ ಮುಂದುವರಿಯಲಿದೆ ಎಂದು ಡಾ| ಹೆಗ್ಗಡೆ ತಿಳಿಸಿದರು.
Related Articles
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಅಧ್ಯಕ್ಷ ರವಿ ಕುಶಾಲಪ್ಪ ಅವರು ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಅಗತ್ಯವನ್ನು ತಿಳಿಸಿದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನಟಾಲ್ಕರ್, ಉಜಿರೆ ಎಸ್‌ಡಿಎಂ ಕಾಲೇಜು ಪ್ರಾಂಶುಪಾಲರಾದ ಡಾ| ಪಿ.ಎನ್. ಉದಯಚಂದ್ರ, ಡಿಎಫ್‌ಒ ದಿನೇಶ್ ಕುಮಾರ್ ಉಪಸ್ಥಿತರಿದ್ದರು.ಪ್ರಾಧ್ಯಾಪಕ ಡಾ| ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
Advertisement
ಜಲಮೂಲ ಸ್ವಚ್ಛವಾಗಿರಿಸೋಣಅರಣ್ಯ ಸಂರಕ್ಷಣೆ ನಮ್ಮದೇ ಹೊಣೆ; ಅರಣ್ಯ ಇಲಾಖೆ, ಸರಕಾರ ನಮ್ಮ ಪ್ರತಿನಿಧಿಗಳು. ಧರ್ಮಸ್ಥಳದಲ್ಲಿ 40 ವರ್ಷಗಳಿಂದ ಅಡುಗೆ ಮತ್ತಿತರ ಉದ್ದೇಶಗಳಿಗೆ ಉರುವಲು, ಮರದ ಉತ್ಪನ್ನ ಬಳಸದೆ ಪರ್ಯಾಯ ಸಂಪನ್ಮೂಲಗಳನ್ನು ಬಳಸಲಾಗುತ್ತಿದೆ. ಕಿಟಕಿ-ಬಾಗಿಲುಗಳಿಗೆ ಮರದ ಬದಲು ಫೈಬರ್ ಉತ್ಪನ್ನವನ್ನು ಬಳಸಲಾಗುತ್ತಿದೆ. ಅರಣ್ಯವಾಸಿಗಳನ್ನು ಸ್ಥಳಾಂತರಿಸುವ ಮುನ್ನ ಜೀವನ ಭದ್ರತೆಗೆ ಬೇಕಾದ ಪರಿಹಾರ ನೀಡಬೇಕು. ನದಿಗಳಲ್ಲಿ ಮುಳುಗುವುದರಿಂದ ಪವಿತ್ರವಾಗುತ್ತೇವೆ ಎಂದುಕೊಳ್ಳುವ ನಾವು ಇದೇ ವೇಳೆ ಜಲಮೂಲಗಳನ್ನು ಸ್ವಚ್ಛವಾಗಿರಿಸಬೇಕು. ಅದಕ್ಕಾಗಿ ಕ್ಷೇತ್ರದಿಂದ 500 ಕೆರೆಗಳ ಪುನಶ್ಚೇತನ ಮಾಡಲಾಗಿದೆ ಎಂದು ಡಾ| ಹೆಗ್ಗಡೆ ತಿಳಿಸಿದರು.