Advertisement
ಪಡುಬೆಟ್ಟು ಭಾಗದ ಸುಮಾರು 40-45 ಮನೆಗಳು ಇದೇ ರಸ್ತೆಯನ್ನು ಅವಲಂಬಿಸಿದ್ದರೆ, ಸಂಪರ್ಕ ರಸ್ತೆ ಅಭಿವೃದ್ಧಿಯಾದಲ್ಲಿ ಸುತ್ತಮುತ್ತಲ ಊರುಗಳ ನೂರಾರು ಜನರಿಗೆ ಅನುಕೂಲವಾಗಲಿದೆ. ಈ ರಸ್ತೆಯಲ್ಲಿ 1 ಕಿ.ಮೀ.ಗೆ ಹಲವು ವರ್ಷಗಳ ಹಿಂದೆ ಡಾಮರೀಕರಣ ಆಗಿದ್ದು ಸಂಪೂರ್ಣ ಎದ್ದು ಹೋಗಿರುತ್ತದೆ. ಉಳಿದ 1 ಕಿ.ಮೀ. ರಸ್ತೆ ಕಚ್ಚಾ ರಸ್ತೆಯಾಗಿದೆ.
ಸದ್ಯ ಜಲ್ಲಿ ಸಂಪೂರ್ಣ ಎದ್ದಿರುವಲ್ಲಿ ಸ್ಥಳೀಯರು ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡಿದ್ದರೆ, ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸ್ವಲ್ಪ ಭಾಗಕ್ಕೆ ಕ್ರಷರ್ ಹುಡಿ ಹಾಕಿ ದುರಸ್ತಿ ಮಾಡಲಾಗಿದೆ. ಮಳೆಗಾಲದಲ್ಲಿ ಮಣ್ಣು, ಕ್ರಶರ್ ಹುಡಿ ಕೊಚ್ಚಿ ಹೋಗಲಿದ್ದು, ಹೊಂಡಗುಂಡಿಗಳ ರಸ್ತೆಯಲ್ಲಿ ಸಾಗುವುದು ದುಸ್ತರವಾಗಲಿದೆ. ಸುತ್ತುವುದು ತಪ್ಪುತ್ತದೆ
ಸಂಪರ್ಕ ರಸ್ತೆ ಅಭಿವೃದ್ಧಿಯಾದರೆ ಜನರು ಎಡೆ¾àರು ಮೂಲಕ ಕಾರ್ಕಳ ರಸ್ತೆಗೆ ತೆರಳುವುದು ತಪ್ಪುತ್ತದೆ. ನೇರವಾಗಿ ಕೀರೊಟ್ಟುವಿನಿಂದ ನಿಂಜೂರಿಗೆ ತೆರಳಬಹುದು. ಅನಾವಶ್ಯಕ ಸುತ್ತಿ ಬಳಸಿ ಹೋಗುವುದು ಇದರಿಂದ ತಪ್ಪುತ್ತದೆ.
Related Articles
ಗ್ರಾ.ಪಂ. ಉಪಾಧ್ಯಕ್ಷರ ಅನುದಾನದಲ್ಲಿ ಈ ರಸ್ತೆಯಲ್ಲಿ 1 ಲಕ್ಷ ರೂ.ನಲ್ಲಿ ಕುಡಿಯುವ ನೀರಿನ ಪೈಪ್‌ಲೈನ್, 2 ಲಕ್ಷ ಅನುದಾನದಲ್ಲಿ ಕಚ್ಚಾ ರಸ್ತೆ, ಬೀದಿದೀಪಗಳನ್ನು ಅಳವಡಿಸಲಾಗಿದೆ. ಬೋರ್‌ವೆಲ್‌ಗೂ ಪ್ರಸ್ತಾವನೆ ಕಳುಹಿಸಲಾಗಿದೆ. ರಸ್ತೆ ಡಾಮರೀಕರಣಗೊಂಡು ಅಭಿವೃದ್ಧಿಯಾಗುವುದು ಮಾತ್ರ ಬಾಕಿ ಇದೆ.
Advertisement
ಹಲವಾರು ಜನರಿಗೆ ಉಪಯೋಗವಾಗುವ ಸಂಪರ್ಕ ರಸ್ತೆ ಶೀಘ್ರ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಹೆಚ್ಚುವರಿ ಯೋಜನೆ ತರಿಸಲು ಪ್ರಯತ್ನಿಸಲಾಗುತ್ತಿದೆ. -ಗಣೇಶ್ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷ ಜಿಲ್ಲಾ ಪಂಚಾಯತ್ ಅನುದಾನದಿಂದ ರಸ್ತೆ ಅಭಿವೃದ್ಧಿಗೆ 4 ಲಕ್ಷ ರೂ. ಇರಿಸಲಾಗಿದೆ. ವಾರದೊಳಗೆ ಕಾಮಗಾರಿ ಆರಂಭವಾಗಲಿದೆ. ಪೂರ್ಣ ರಸ್ತೆ ಅಭಿವೃದ್ಧಿಗೆ ಬೇರೆ ಯೋಜನೆಯನ್ನು ಬಳಸಬೇಕು.
-ಚಂದ್ರಿಕಾ ಕೇಳ್ಕರ್, ಜಿಪಂ ಸದಸ್ಯೆ