Advertisement

ಕರಕುಶಲ ಶಿಲ್ಪಿಗಳಿಗೆ ಬೇಕಿದೆ ಸರ್ಕಾರ ನೆರವು

06:47 AM May 15, 2020 | Lakshmi GovindaRaj |

ತಿಪಟೂರು: ಕೊರೊನಾ ಹಿನ್ನೆಲೆಯಲ್ಲಿ ದೇಶವೇ ಲಾಕ್‌ ಡೌನ್‌ ಆಗಿದ್ದು, ಇದರಿಂದ ಸಣ್ಣಪುಟ್ಟ ಕರಕುಶಲ ಶಿಲ್ಪ ಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದವರ ಜೀವನ ಅಯೋಮಯವಾಗಿದೆ. ತಾಲೂಕಿನ ಹೊನ್ನವಳ್ಳಿ ಹೋಬಳಿಯ  ಬ್ಯಾಡರಹಳ್ಳಿ ಗ್ರಾಮದ ಮುದ್ದಶೆಟ್ಟರ ಕುಟುಂಬ ಸುಮಾರು 30-40 ವರ್ಷಗಳಿಂದ ಮಣ್ಣಿನ ಹಸಿ ಗಣಪತಿ ವಿಗ್ರಹಗಳು,

Advertisement

ಕುಡಿವ ನೀರಿನ ಆಕರ್ಶಕ ಗಡಿಗೆ ಹಾಗೂ ಮಡಿಕೆಗಳನ್ನು ಮಾಡಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಒಂದು ದಿನವೂ ಬಿಡುವು ನೀಡದೆ ಹಸಿ ಗಣಪತಿ ವಿಗ್ರಹ ತಯಾರಿಸಿ ಬೆಂಗಳೂರಿನ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆ ಮಾಡಿರುವ ಗಣಪತಿ  ಹಾಗೂ ಗೌರಿ ವಿಗ್ರಹಗಳನ್ನು ಟೆಂಪೋದಲ್ಲಿ ಸಾಗಿಸಲೂ ಆಗದೇ ಮಾಡಿದ ಕೆಲಸ ವ್ಯರ್ಥವಾಗುತ್ತಿದೆ ಎಂಬ ನೋವಿನಲ್ಲಿದ್ದಾರೆ.

ಈ ಬಗ್ಗೆ ಉದಯವಾಣಿ ಜತೆ ಗಣಪತಿ ವಿಗ್ರಹ ತಯಾರಕ ಸಿದ್ದೇಶ್‌ ಮಾತನಾಡಿ, ನಮ್ಮ ಕುಟುಂಬ ಮಡಿಕೆ ಹಾಗೂ ಗಣಪತಿ  ತಯಾರಿಕೆಯ ಕಾಯಕವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದೇವೆ. ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಗೌರಿ-ಗಣೇಶನ ಹಬ್ಬದ ಸಮಯದಲ್ಲಿ ತಯಾರಿಸುವುದಲ್ಲದೇ, ಹಸಿ ಗಣೇಶನ ವಿಗ್ರಹಗಳಿಗೆ ವರ್ಷವಿಡಿ ಬೇಡಿಕೆ  ಇರುತ್ತದೆ. ಬೆಂಗಳೂರು ಮೂಲದಲ್ಲಿ ಹಸಿ ಗಣೇಶನ ವಿಗ್ರಹಗಳನ್ನು ಮಾಡಿ ಇಲ್ಲಿನ ವಾಹನಗಳ ಮೂಲಕ ಅಲ್ಲಿಗೆ ಕಳುಹಿಸ ಲಾಗುತ್ತದೆ.

ಆದರೆ ಈಗ ವಾಹನಗಳು ಓಡಾಡದ ಕಾರಣ ತಯಾರಿಸಿರುವ 500ಕ್ಕೂ ಹೆಚ್ಚು ಹಸಿಗಣೇಶನ ಮೂರ್ತಿಗಳು ಹಾಳಾಗುತ್ತಿವೆ. ಈಗಾಗಲೇ ಬ್ಯಾಂಕ್‌  ನಲ್ಲಿ 6 ಲಕ್ಷ ರೂ. ಲೋನ್‌ ಮಾಡಿಸಿ ನಮ್ಮ ಕಸುಬಿಗೆ ಅಗತ್ಯವಾಗಿರುವ ಯಂತ್ರ ಖರೀದಿಸಲಾಗಿದೆ. ಬ್ಯಾಂಕ್‌ಗೆ ತಿಂಗಳ ಕಂತು ಕಟ್ಟಬೇಕಿದ್ದು, ಜೀವನ ನಡೆಸುವುದು ಕಷ್ಟಕರವಾಗಿದೆ.  ಆದ್ದರಿಂದ ಸರ್ಕಾರ, ತಾಲೂಕು ಆಡಳಿತ ನಮಗೆ ಸೂಕ್ತವಾದ ಸಹಾಯಧನ ನೀಡ ಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next