Advertisement

ಕೋವಿಡ್‌ ನಿಯಮ ಪಾಲನೆಗೆ ಜಾಗೃತಿ

12:06 PM Apr 02, 2021 | Team Udayavani |

ರಾಮನಗರ: ಕೋವಿಡ್‌ ನಿಯಮ ಹಾಗೂ ದಂಡ ವಿಧಿಸುವ ಕುರಿತು ವಾಹನ ಸವಾರರಿಗೆ ಎಸ್ಪಿ ಗಿರೀಶ್‌ ಗುರುವಾರ ಅರಿವು ಮೂಡಿಸಿದರು.  ಎಸ್ಪಿಯವರೊಟ್ಟಿಗೆ ನಗರ, ಐಜೂರು ಮತ್ತು ಗ್ರಾಮಾಂತರ ಠಾಣೆ ಅಧಿಕಾರಿಗಳು ಭಾಗವಹಿಸಿದ್ದರು. ಗುರುವಾರ ಸಂಜೆ 5ರ ವೇಳೆ ಐಜೂರು

Advertisement

ವೃತ್ತಕ್ಕೆ ಆಗಮಿಸಿದ ಪೊಲೀಸ್‌ ಪಡೆ, ಸಿಗ್ನಲ್‌ನಲ್ಲಿ ನಿಂತು ಸಾರ್ವಜನಿಕರಿಗೆ ಕೋವಿಡ್‌ ಬಗ್ಗೆ ಅರಿವು ಮೂಡಿಸಿದರು. ಮಾಸ್ಕ್, ಕರ ಪತ್ರ ಕೊಟ್ಟು ಕೋವಿಡ್‌ ಸೋಂಕು ನಿಯಂತ್ರಣಕ್ಕೆ ನಿಯಮಗಳ ಪಾಲನೆ ಅನಿವಾರ್ಯ ಎಂದು ಮಾಹಿತಿ ಕೊಟ್ಟರು. ಅಲ್ಲದೇ, ಉದ್ಧಟತನ ತೋರಿದ ಕೆಲವರಿಗೆ ಪೊಲೀಸರು ದಂಡ ವಿಧಿಸಿದರು. ಐಜೂರು ವೃತ್ತದಿಂದ ಕನಕಪುರ ವೃತ್ತದವರೆಗೂ ಜಾಥಾ ನಡೆಸಿದ ಪೊಲೀಸರು,ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಕೆಲ ಅಂಗಡಿಗಳ ವರ್ತಕರಿಗೂ ದಂಡ ವಿಧಿಸಿದರು.

ವಾಹನ ಚಾಲಕರು ಅಲ್ಲಲ್ಲೇ ವಾಹನಗಳನ್ನು ನಿಲ್ಲಿಸಿ ತರಾತುರಿಯಲ್ಲಿ ಮಾಸ್ಕ್, ಹೆಲ್ಮೆಟ್‌ ಧರಿಸಿಮುಂದೆ ಸಾಗುತ್ತಿದ್ದರು. ಶುಕ್ರವಾರದಿಂದ ಪ್ರತಿದಿನ ಆಯಾ ಠಾಣೆ ವ್ಯಾಪ್ತಿಯಲ್ಲಿ ನಿತ್ಯ 2 ಗಂಟೆ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.

ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿಯಮ ಪಾಲಿಸಬೇಕಾಗಿದೆ. ಕೆಲವರು ಪತ್ರಕರ್ತರ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಪ್ರಸ್‌ ಬೋರ್ಡ್‌ಗಳನ್ನುವಾಹನಗಳ ಮೇಲೆ ಅಂಟಿಸಿಕೊಂಡು ಸಂಚರಿಸುತ್ತಿದ್ದಾರೆ. ಮುಂದಿನದಿನಗಳಲ್ಲಿ ಅಂತಹವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು. ● ಎಸ್‌.ಗಿರೀಶ್‌, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ, ರಾಮನಗರ.

Advertisement

Udayavani is now on Telegram. Click here to join our channel and stay updated with the latest news.

Next