Advertisement
124 ಕೇಂದ್ರಗಳು ಮತ್ತೆ ದಂಧೆ ಶುರುವಿಟ್ಟುಕೊಂಡಿರುವುದು ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಸವಾಲಾಗಿದೆ. ಆಂಧ್ರ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗೋವಾ ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿ ಕಳ್ಳಭಟ್ಟಿ ತಯಾರಿಕೆ ಹೆಚ್ಚಾಗಿ ಕಂಡು ಬಂದಿದೆ. ಗಡಿ ಭಾಗವಾದ ಕುಪ್ಪಂ, ಹಿಂದೂಪುರ, ಕೆಜಿಎಫ್, ಚಾಮರಾಜನಗರ, ಬೆಳಗಾವಿ ಭಾಗದಲ್ಲಿ ಕಳ್ಳಭಟ್ಟಿ ದಂಧೆ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಸಾಂಕ್ರಾಮಿಗಳ ರೋಗಗಳ ಕಾಯ್ದೆಯಡಿ ತಂದು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಯೂ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಉದಯವಾಣಿ ಜತೆ ಮಾತನಾಡಿದ ಅಬಕಾರಿ ಸಚಿವ ಎಚ್. ನಾಗೇಶ್, ಮದ್ಯ ಮಾರಾಟ ನಿರ್ಬಂಧ ಬೆನ್ನಲ್ಲೇ ಕಳ್ಳಭಟ್ಟಿ ದಂಧೆ ನಮಗೆ ಸಮಸ್ಯೆ ತಂದೊಡ್ಡಿದೆ. ಹಳೆಯ ಜಾಲದ ಜತೆಗೆ ಹೊಸಬರು ಸೇರಿಕೊಂಡು ಕೇಂದ್ರ ಪ್ರಾರಂಭಿಸಿರುವುದು ಪತ್ತೆಯಾಗಿದೆ. ಇದುವರೆಗೂ 3735 ಲೀಟರ್ ಕಳ್ಳ ಭಟ್ಟಿ ವಶಕ್ಕೆ ಪಡೆದು 25 ಪ್ರಕರಣ ದಾಖಲಿಸಲಾಗಿದೆ. ಈಗಿನ ಶಿಕ್ಷೆಗಿಂತ ಕಠಿಣ ಶಿಕ್ಷೆ ನೀಡುವ ಬಗ್ಗೆ ಯೂ ಮಾತುಕತೆ ನಡೆದಿದೆ. ಕಠಿಣ ಕಾಯ್ದೆಯಡಿ ಕಳ್ಳಭಟ್ಟಿ ದಂಧೆ ತರಲಾಗುವುದು ಎಂದು ಹೇಳಿದ್ದಾರೆ.
ಕೊರೊನಾ ಎಫೆಕ್ಟ್ನಿಂದಾಗಿ ಅಬಕಾರಿ ಇಲಾಖೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದಿನ ಮಾರಾಟ ಸ್ಥಗಿತಗೊಳಿಸಿದಂತಾಗಿದೆ. ಲಾಕ್‌ಡೌನ್‌ನಿಂದಾಗಿ ಏಪ್ರಿಲ್‌ನಲ್ಲಿ ಅಬಕಾರಿ ಆದಾಯ 1745 ಕೋಟಿ ರೂ. ಖೋತಾ ಆಗಿದೆ. ಮಾರ್ಚ್ ನಲ್ಲೂ 400 ಕೋಟಿ ರೂ. ಕಡಿಮೆ ಆಗಿತ್ತು ಎಂದು ಹೇಳಲಾಗಿದೆ.