Advertisement

Mudhol: ಉದಯವಾಣಿ ವರದಿ‌ ಫಲಶೃತಿ: ಕಳ್ಳಭಟ್ಟಿ ಕೇಂದ್ರಗಳ ಮೇಲೆ ಅಧಿಕಾರಿಗಳ‌ ದಾಳಿ‌

07:43 PM Aug 16, 2024 | Team Udayavani |

ಮುಧೋಳ:ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿ ಅರಣ್ಯ ಇಲಾಖೆ‌ ಅಧಿಕಾರಿಗಳು ದಾಳಿ‌ ನಡೆಸಿ ಕಳ್ಳಭಟ್ಟಿ‌ ಕೇಂದ್ರಗಳನ್ನು ನಾಶಪಡಿಸಿದ್ದಾರೆ.

Advertisement

ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿ‌ ನಡೆಯುತ್ತಿದ್ದ ಕಳ್ಳಭಟ್ಟಿ ತಯಾರಿಕೆ ಬಗ್ಗೆ ಶುಕ್ರವಾರ ಉದಯವಾಣಿಯಲ್ಲಿ‌ ಚೀಂಕಾರ ರಕ್ಷಿತಾರಣ್ಯಕ್ಕೆ ಕಳ್ಳಕಾಕರ‌ ಕಾಕದೃಷ್ಠಿ ತಲೆಬರಹದಡಿ‌ ವಿಸ್ತೃತ ವರದಿ ಪ್ರಕಟಗೊಂಡಿತ್ತು. ವರದಿಯಿಂದ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ದಿನವಿಡೀ‌ ಅರಣ್ಯ ಪ್ರದೇಶದಲ್ಲಿ‌ನ ಮೂರು ಜಾಗಗಳನ್ನು ಜಾಲಾಡಿ ಕಳ್ಳಭಟ್ಟಿ ಕೇಂದ್ರಗಳನ್ನು ಧ್ವಂಸಗೊಳಿಸಿದ್ದಾರೆ.

ಡಿಎಫ್ಒ ಸಿ.ಜೆ.ಮಿರ್ಜಿ, ಜಮಖಂಡಿ‌ ಎಸಿಎಫ್ ಹಾಗೂ ಮುಧೋಳ‌ ವಲಯ ಅರಣ್ಯಾಧಿಕಾರಿ‌ ಎಚ್.ಬಿ. ಡೋಣಿ ಅವರ ಮಾರ್ಗದರ್ಶನದಲ್ಲಿ‌ ನಡೆದ ಕಳ್ಳಭಟ್ಟಿ‌ ಕೇಂದ್ರಗಳ‌‌ ಮೇಲಿನ ದಾಳಿ ಕಾರ್ಯಾಚರಣೆಯಲ್ಲಿ‌ ಉಪವಲಯ ಅರಣ್ಯಾಧಿಕಾರಿ‌ ರಮೇಶ ಮೆಟಗುಡ್ಡ, ಗಸ್ತು ಅರಣ್ಯಪಾಲಕ‌ರಾದ ಚಂದ್ರಶೇಖರ ಉಪ್ಪಾರ, ಶಿವರಾಜ ಸಜ್ಜನ,‌ ಆನಂದ ಸಾಗರ, ಗುರಪ್ಪ ಬಾಗೇವಾಡಿ, ವಾಚರ್ ಗಳಾದ ಹನಮಂತ ತಳವಾರ, ಈರಪ್ಪ‌‌ ಕೋಲೂರ ಹಾಗೂ ತಿಪ್ಪಣ್ಣ ವಾಬನ್ನವರ ಪಾಲ್ಗೊಂಡಿದ್ದರು.

Advertisement

ಯಡಹಳ್ಳಿ‌ ಚೀಂಕಾರ ರಕ್ಷಿತಾರಣ್ಯ ರಕ್ಷಣೆಗೆ ನಮ್ಮ ಸಿಬಂದಿ ನಿರಂತರ ಶ್ರಮವಹಿಸುತ್ತಾರೆ. ಉದಯವಾಣಿಯಲ್ಲಿ‌ ಪ್ರಕಟಗೊಂಡಿರುವ ಮಾಹಿತಿಯುಕ್ತ ವರದಿಯಿಂದ ಜಾಗೃತರಾದ ನಮ್ಮ ಸಿಬ್ಬಂದಿ ಮುಂದಿನ ದಿನಗಳಲ್ಲಿ‌ ನಿತ್ಯ ನಿರಂತರ ದಾಳಿಯಲ್ಲಿ‌ ತೊಡಗುವ ಮೂಲಕ ಅರಣ್ಯ ಸಂಪತ್ತು ಕಾಪಾಡಲು ಕಟಿಬದ್ದರಾಗಿರುವರು.
– ಸಿ.ಜೆ.ಮಿರ್ಜಿ ಡಿಎಫ್ಒ ಬಾಗಲಕೋಟೆ

ಮುಧೋಳ ವ್ಯಾಪ್ತಿಯ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿನ ಕಳ್ಳಭಟ್ಟಿ ಕೇಂದ್ರಗಳನ್ನು ನಾಶಪಡಿಸಿದ್ದು, ಮುಂದಿನ ದಿನಗಳಲ್ಲಿ ಗಸ್ತು ಪ್ರಕ್ರಿಯೆ ಚುರುಕುಗೊಳಿಸಿ ಕಳ್ಳಭಟ್ಟಿ ಸಂಪೂರ್ಣವಾಗಿ ನಿಯಂತ್ರಿಸಲಾಗುವುದು.
– ಎಚ್.ಬಿ.ಡೋಣಿ ವಲಯ ಅರಣ್ಯ ಸಂರಕ್ಷಣಾಧಿಕಾರಿ‌ ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next