Advertisement
ತಾಲೂಕಿನ ಕೊಪ್ಪ ಕೆರೆ ತುಂಬಿದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೊಪ್ಪ ಜಿಪಂ ವ್ಯಾಪ್ತಿಯ ಎಲ್ಲಾ ಕೆರೆಗಳು ತುಂಬಿದ್ದು ಬೆಕ್ಕಳಲೆ, ಕಿರಂಗೂರು ಹಾಗೂ ಹಳೇಹಳ್ಳಿಯ ಕೆರೆ ತುಂಬಿಸಲು ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.
Related Articles
ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಮಳೆ ಆರಂಭಗೊಂಡು ಕಬಿನಿ, ಹಾರಂಗಿ, ಕಾವೇರಿ ಹಾಗೂ ಹೇಮಾವತಿ ಅಣೆಕಟ್ಟೆಗಳು ತುಂಬಿ ಸಮೃದ್ಧಿ ಯಾಗಿ ರೈತರ ಜಮೀನುಗಳಿಗೆ ನೀರು ಹರಿಸುತ್ತಿದ್ದು ಜತೆಗೆ 1 ಲಕ್ಷ ಕ್ಯುಸೆಕ್ ತಮಿಳುನಾಡಿಗೆ ಹರಿಯುತ್ತಿರುವುದಾಗಿ ಹೇಳಿದರು.
Advertisement
ಪ್ರವಾಸಿ ತಾಣ: ವಿಸಿ ನಾಲೆಯ ಕೊನೆಯ ಭಾಗದ ಜಮೀನುಗಳಿಗೆ ನೀರು ಹರಿಸಲು ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸಿದ್ದು, ನಾಲಾ ಆಧುನೀಕರಣಕ್ಕೆ ಬಿಡುಗಡೆಗೊಂಡು ನನೆಗುದಿಗೆ ಬಿದ್ದಿರುವ 2 ಕೋಟಿ ರೂ.ಗಳ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದರಲ್ಲದೇ, ಕೊಪ್ಪ ಕೆರೆ ಬಳಿ ಸಮುದಾಯ ಭವನ ನಿರ್ಮಿಸಿ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿಸಲು ಈಗಾಗಲೇ ಸಚಿವರೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಿದರು.
ಕಾರ್ಯಕರ್ತರ ಸಭೆ: ತಾಲೂಕಿನ ಕೊಪ್ಪ ಶಾಶ್ವತಿ ಸಮುದಾಯ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಗೆ ಭೇಟಿ ನೀಡಲಿದ್ದು, ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ ಬಳಿಕ ಮಂಡ್ಯದ ಸರಕಾರಿ ಕ್ರೀಡಾಂಗಣದಲ್ಲಿ ಕೃತಜ್ಞತಾ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದು,ª ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ತಾಪಂ ಅಧ್ಯಕ್ಷೆ ಜಯಲಕ್ಷಮ್ಮ, ಜಿಪಂ ಸದಸ್ಯರಾದ ರೇಣುಕಮ್ಮ, ಮರಿಹೆಗಡೆ, ತಾಪಂ ಸದಸ್ಯ ಮನೋಹರ್,ಮಾಜಿ ಉಪಾಧ್ಯಕ್ಷ ಎಚ್.ಜಿ. ರಾಮಚಂದ್ರು, ಮುಖಂಡರಾದ ಮಹದೇವು, ಚಿಕ್ಕೋನಹಳ್ಳಿ ತಮ್ಮಯ್ಯ, ಜಯರಾಂ, ಸುರೇಶ್, ಎಇಇ ಮಹದೇವು ಭಾಗವಹಿಸಿದ್ದರು.