Advertisement

ಅಪಘಾತ ನಿಯಂತ್ರಣಕ್ಕೆ ಅಗತ್ಯ ಕ್ರಮ; ಆಯುಕ್ತೆ ಗಾಯತ್ರಿದೇವಿ

06:48 PM Mar 25, 2022 | Nagendra Trasi |

ಹೊಳಲ್ಕೆರೆ: ತಾಲೂಕಿನ ದುಮ್ಮಿ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಸ್ಥಳಕ್ಕೆ ಸಾರಿಗೆ ಇಲಾಖೆಯ ಶಿವಮೊಗ್ಗ ಪ್ರಾದೇಶಿಕ ಆಯುಕ್ತೆ ಗಾಯತ್ರಿದೇವಿ ಭೇಟಿ ನೀಡಿ ಪರಿಶೀಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಸ್‌ ಚಾಲಕ ಅತಿ ವೇಗದಿಂದ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಎದುರಿಗೆ ಬೈಕ್‌ ಬರುತ್ತಿದ್ದರೂ ಲೆಕ್ಕಿಸದೆ ಲಾರಿ ಹಿಂದಿಕ್ಕುವ ಭರದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾನೆ. ದುಮ್ಮಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಬಸ್‌ ಚಾಲಕನ ನಿರ್ಲಕ್ಷ್ಯಕ್ಕೆ ನಾಲ್ಕು ಜೀವಗಳು ಬಲಿಯಾಗಿವೆ. ಬೈಕ್‌ ಚಾಲಕ ನಾಲ್ವರನ್ನು ಕೂಡ್ರಿಸಿಕೊಂಡುಚಲಾಯಿಸುವುದು ಕೂಡ ಅಪಾಯಕಾರಿ. ಜೀವ
ಹಾನಿ ತಪ್ಪಿಸಲು ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಪಾಲಿಸಬೇಕೆಂದರು.

ಅಪಘಾತ ಸಂಭವಿಸದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದರೂ ಚಾಲಕರ ನಿರ್ಲಕ್ಷ್ಯದಿಂದ ಈ ರೀತಿ ಆಗುತ್ತಿವೆ. ರಸ್ತೆ ಅಪಘಾತ ತಡೆಗೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಸಾರಿಗೆ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಅಪಘಾತ ನಿಯಂತ್ರಣಕ್ಕೆ ಹಳ್ಳಿಗಳಲ್ಲಿ ಬೀದಿನಾಟಕ ಪ್ರದರ್ಶನ, ಕಾನೂನು ಅರಿವು, ಹೊಳಲ್ಕೆರೆಯಿಂದ ಚನ್ನಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಿರುವುಗಳಲ್ಲಿ ಹಳದಿ ಪಟ್ಟಿ, ಹಂಪ್ಸ್‌ ಹಾಗೂ ಮಾರ್ಗಸೂಚಿ ಫಲಕ ಅಳವಡಿಕೆಯಂತಹ ವಿವಿಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಚಿತ್ರದುರ್ಗದ ಪ್ರಾದೇಶಿಕ ಸಾರಿಗೆ ಅ ಧಿಕಾರಿ ಎಸ್‌. ಬಾಲಕೃಷ್ಣ, ಹಿರಿಯ ವಾಹನ ನಿರೀಕ್ಷಕ ಎನ್‌.ಬಿ. ಕರುಣಾಕರ, ಸಿಪಿಐ ರವೀಶ್‌, ಪಿಎಸ್‌ಐ ಮೋಹನ್‌ ಇತರರು ಇದ್ದರು.

ಮಾದಕ ಪರ್ದಾಥ, ಕುಡಿತ, ಗುಟ್ಕಾ ಹಾಕಿಕೊಂಡು ವಾಹನಗಳನ್ನು ಓಡಿಸುವ ವಾಹನ ಚಾಲಕರಿಗೆ ದಂಡ ವಿಧಿಸಲು ಇಲಾಖೆ ಸಿದ್ದವಿದೆ. ಅಪಘಾತ ಎಸಗಿದ ಬಸ್‌ ಚಾಲಕನಿಗೆ ಎರಡು ದಿನಗಳ ಹಿಂದೆ ಮಂಗಳೂರಿನಲ್ಲಿ ಗುಟ್ಕಾ ಹಾಕಿಕೊಂಡಿದ್ದಕ್ಕೆ ನಾವೇ 2 ಸಾವಿರ ರೂ. ದಂಡ ವಿಧಿಸಿದ್ದೆವು. ಆದರೂ ಎಚ್ಚೆತ್ತುಕೊಳ್ಳದೆ ಅಪಘಾತ ಮಾಡಿ ನಾಲ್ವರ ಸಾವಿಗೆ ಕಾರಣನಾಗಿರುವುದು ನೋವು ತಂದಿದೆ.
ಗಾಯತ್ರಿದೇವಿ, ಸಾರಿಗೆ ಇಲಾಖೆಯ ಶಿವಮೊಗ್ಗ 
ಪ್ರಾದೇಶಿಕ ಆಯುಕ

Advertisement
Advertisement

Udayavani is now on Telegram. Click here to join our channel and stay updated with the latest news.

Next