ಹೊಸದಿಲ್ಲಿ: ಪ್ರಯಾಣಿಕನೊಬ್ಬನನ್ನು ಕ್ಷುಲ್ಲಕ ಕಾರಣಕ್ಕೆ ಇಂಡಿಗೋ ಸಿಬಂದಿಗಳು ನೆಲಕ್ಕೆ ಬೀಳಿಸಿ, ಕತ್ತಿನ ಪಟ್ಟಿ ಹಿಡಿದು ಥಳಿಸಿದ ಘಟನೆ ನಡೆದಿದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
Advertisement#WATCH: IndiGo staff manhandle a passenger at Delhi’s Indira Gandhi International Airport (Note: Strong language) pic.twitter.com/v2ola0YzqC
— ANI (@ANI) November 7, 2017
Related Articles
ಪ್ರಯಾಣಿಕ ಮತ್ತು ಸಿಬಂದಿಯ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿ ಅವಾಚ್ಯ ಶಬ್ಧಗಳ ಬಳಕೆಯಾಗಿ ಹೊಡೆದಾಡುವ ಮಟ್ಟಕ್ಕೆ ತಿರುಗಿದೆ.
ವಿಮಾನದಿಂದಿಳಿದ ಹಿರಿಯ ವಯಸ್ಸಿನ ಪ್ರಯಾಣಿಕ ಬಸ್ ಹತ್ತುವಾಗ ತಡೆದಿದ್ದು, ಈ ವೇಳೆ ಹೊಡೆದಾಟ ನಡೆದಿದೆ. ಜಗಳವನ್ನು ಇತರ ಸಿಬಂದಿಗಳು ಬಿಡಿಸಿದ್ದಾರೆ.
ಅಕ್ಟೋಬರ್ 15 ರಂದು ಘಟನೆ ನಡೆದಿದ್ದು ಈ ಬಗ್ಗೆ ನಾಗರಿಕ ವಿಮಾನಯಾನ ಇಲಾಖೆ ಸ್ಪಷ್ಟನೆ ಕೇಳಿದ್ದು , ಇಂಡಿಗೋ ಕ್ಷಮೆ ಯಾಚಿಸಿದೆ.
ವಿಡಿಯೋ ಚಿತ್ರೀಕರಿಸಿದ ಸಿಬಂದಿಯನ್ನೇ ಇಂಡಿಗೋ ಅಮಾನತು ಮಾಡಿದ್ದು, ದುರ್ವರ್ತನೆ ತೋರಿದ ಸಿಬಂದಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.