Advertisement

MiG-29: ಶತ್ರು ರಾಷ್ಟ್ರಗಳ ಮೇಲೆ ಕಣ್ಣಿಡಲು ಶ್ರೀನಗರದಲ್ಲಿ MiG-29 ಫೈಟರ್ ಜೆಟ್ ನಿಯೋಜನೆ

09:24 AM Aug 12, 2023 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶ್ರೀನಗರ ವಾಯುಪಡೆ ನೆಲೆಯಲ್ಲಿ ಭಾರತವು MiG-29 ಯುದ್ಧ ವಿಮಾನಗಳನ್ನು ನಿಯೋಜಿಸಿದೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾದ ಬೆದರಿಕೆಯನ್ನು ಎದುರಿಸಲು ಭಾರತ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

Advertisement

ಈ ಹಿಂದೆ MiG-21 ಯುದ್ಧ ವಿಮಾನವನ್ನು ವಾಯುಪಡೆ ನಿಯೋಜಿಸಿತ್ತು. ಆದರೆ ಪ್ರಸ್ತುತ ನವೀಕರಿಸಿದ ಭಾಗವಾಗಿ MiG-29 ಯುದ್ಧವಿಮಾನಗಳನ್ನು ನಿಯೋಜಿಸಿದೆ.

ಈ ಕುರಿತು ಮಾತನಾಡಿದ ಭಾರತೀಯ ವಾಯುಪಡೆಯ ಪೈಲಟ್ ಸ್ಕ್ವಾಡ್ರನ್ ಲೀಡರ್ ವಿಪುಲ್ ಶರ್ಮಾ, ಶ್ರೀನಗರವು ಕಾಶ್ಮೀರ ಕಣಿವೆಯ ಮಧ್ಯದಲ್ಲಿದೆ ಮತ್ತು ಅದರ ಎತ್ತರವು ಬಯಲು ಪ್ರದೇಶಕ್ಕಿಂತ ಎತ್ತರದಲ್ಲಿದೆ ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಹೊರೆಗಳು ಮತ್ತು ಸವಾಲುಗಳ ಅನುಪಾತ ಮತ್ತು ವ್ಯಾಪ್ತಿಗೆ ಹತ್ತಿರವಿರುವ ಕಾರಣ ಕಡಿಮೆ ಪ್ರತಿಕ್ರಿಯೆ ಸಮಯವನ್ನು ಹೊಂದಿರುವ ವಿಮಾನವನ್ನು ಹೊಂದಲು ಇದು ಕಾರ್ಯತಂತ್ರವಾಗಿ ಉತ್ತಮವಾಗಿದೆ. ಅಲ್ಲದೆ ಇದು ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ಹೊಂದಿದೆ. MiG-29 ಎಲ್ಲಾ ಮಾನದಂಡಗಳನ್ನು ಪೂರೈಸುತ್ತದೆ, ಇದರಿಂದಾಗಿ ನಾವು ಎರಡೂ ರಂಗಗಳಲ್ಲಿ ಶತ್ರುಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದರು.

2019 ರಲ್ಲಿ ಬಾಲಾಕೋಟ್‌ನಲ್ಲಿ ಪಾಕಿಸ್ತಾನದ ಎಫ್ -16 ಅನ್ನು ಹೊಡೆದುರುಳಿಸಿದ ಮಿಗ್ -21 ಗಳಿಗಿಂತ ಮಿಗ್ -29 ಹಲವಾರು ಸುಧಾರಿತ ತಂತ್ರಜ್ನಾನವನ್ನು ಹೊಂದಿದ್ದು. ಗಾಳಿಯಲ್ಲಿ ದೀರ್ಘ-ಶ್ರೇಣಿಯ ದಾಳಿ, ಗಾಳಿಯಿಂದ ನೆಲದ ಮೇಲಿನ ಗುರಿಯ ಮೇಲೆ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ. ಅಲ್ಲದೆ ಯುದ್ಧದ ಸಮಯದಲ್ಲಿ ಎದುರಾಳಿ ವಿಮಾನಗಳ ಕಾರ್ಯಾಚರಣೆಯನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Hawaii ಕಾಳ್ಗಿಚ್ಚಿಗೆ ಬಲಿಯಾದವರ ಸಂಖ್ಯೆ 67ಕ್ಕೆ ಏರಿಕೆ… ಇನ್ನೂ ಹತೋಟಿಗೆ ಬಾರದ ಬೆಂಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next