Advertisement

2024 Elections: ಬಿಹಾರದ ಎಲ್ಲಾ 40 ಲೋಕಸಭಾ ಸ್ಥಾನಗಳನ್ನು ಎನ್‌ಡಿಎ ಗೆಲ್ಲಲಿದೆ: ಅಮಿತ್ ಶಾ

07:24 PM Sep 16, 2023 | Team Udayavani |

ಮಧುಬನಿ, (ಬಿಹಾರ): 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ ಎಲ್ಲಾ 40 ಲೋಕಸಭಾ ಸ್ಥಾನಗಳನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಗೆಲ್ಲಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

Advertisement

ಬಿಹಾರದ ಮಧುಬನಿ ಜಿಲ್ಲೆಯ ಝಂಜರ್‌ಪುರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವರು, ಬಿಹಾರದಲ್ಲಿ 2019 ರ ಚುನಾವಣೆಯಲ್ಲಿ ಎನ್‌ಡಿಎ 39 ಲೋಕಸಭಾ ಸ್ಥಾನಗಳನ್ನು ಪಡೆದಿತ್ತು. ಮುಂದಿನ ವರ್ಷದ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ 40 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆಯಲಿದೆ ಎಂದು ಹೇಳಿದರು.

ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಮತ್ತು “ಅವಕಾಶವಾದಿ ಮೈತ್ರಿಯಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಲಿದೆ ಎಂದರು.

“ಮೋದಿಜಿ ಮತ್ತೊಮ್ಮೆ ಪ್ರಧಾನಿಯಾಗದಿದ್ದರೆ, ಇಡೀ ಸೀಮಾಂಚಲ್ ಪ್ರದೇಶವು ಮತ್ತೆ ನುಸುಳುಕೋರರಿಂದ ತುಂಬಿರುತ್ತದೆ ಎಂದು ಹೇಳಿದರು.

ಜೆಡಿಯು-ಆರ್‌ಜೆಡಿ ಮೈತ್ರಿ ಕುರಿತು ಮಾತನಾಡಿದ ಅವರು , ಜೆಡಿಯು-ಆರ್‌ಜೆಡಿ ಮೈತ್ರಿಯು ಎಣ್ಣೆ ಹಾಗೂ ನೀರು ಇದ್ದಂತೆ. ಇದು ಎಂದಿಗೂ ಒಂದಲ್ಲ,ಹೆಚ್ಚು ಕಾಲ ಇರುವುದಿಲ್ಲ ಎಂದು ಹೇಳಿದರು.

Advertisement


ಬಿಹಾರದಲ್ಲಿ ಲಾಲು-ನಿತೀಶ್ ಸರ್ಕಾರವಿದೆ. ನಾನು ಬಿಹಾರದ ಪತ್ರಿಕೆಗಳನ್ನು ಓದುತ್ತಿದ್ದೇನೆ. ಪತ್ರಕರ್ತರು ಮತ್ತು ದಲಿತರ ಮೇಲೆ ಗುಂಡಿನ ದಾಳಿ, ಲೂಟಿ, ಅಪಹರಣ, ಹತ್ಯೆಗಳು ಹೆಚ್ಚಿವೆ. ಈ ಸ್ವಾರ್ಥ ಮೈತ್ರಿಯು ಬಿಹಾರವನ್ನು ಜಂಗಲ್ ರಾಜ್ ಕಡೆಗೆ ಕೊಂಡೊಯ್ಯುತ್ತಿದೆ. ಈಗ ಲಾಲು ಯಾದವ್ ಸಕ್ರಿಯರಾಗಿದ್ದಾರೆ ಮತ್ತು ನಿತೀಶ್ ಕುಮಾರ್ ನಿಷ್ಕ್ರಿಯರಾಗಿದ್ದಾರೆ. ಲಾಲು ಪ್ರಸಾದ್‌ ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಬಯಸಿದ್ದಾರೆ, ನಿತೀಶ್‌ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ ಅವರ ಆಸೆಗಳು ಎಂದಿಗೂ ಈಡೇರುವುದಿಲ್ಲ.

2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ ಎಂದು ಅವರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next