Advertisement
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್, 2014ರಲ್ಲಿ ಗಳಿಸಿದ್ದ ಶೋಚನೀಯ 44 ಸ್ಥಾನ ಗಳಿಗಿಂತ ದುಪ್ಪಟ್ಟು, ಅಂದರೆ 88 ಸ್ಥಾನ ಗಳನ್ನು ಗಳಿಸಲು ಶಕ್ತವಾಗುತ್ತದೆ. ಕಾಂಗ್ರೆಸ್ ಹಾಗೂ ಅದರ ಮೈತ್ರಿಕೂಟದ ಎಲ್ಲಾ ಪಕ್ಷಗಳೂ ಸೇರಿ (ಯುಪಿಎ) ಒಟ್ಟಾರೆ 140 ಸ್ಥಾನಗಳನ್ನು ಮಾತ್ರ ಗೆಲ್ಲ ಲಿದ್ದು, ಈ ಬಾರಿ ಶತಾಯ ಗತಾಯ ಬಿಜೆಪಿ ಯನ್ನು ಅಧಿಕಾರದಿಂದ ದೂರವಿಡ ಬೇಕೆಂಬ ಕನಸು ಭಗ್ನಗೊಳ್ಳಲಿದೆ. ಇನ್ನು, 129 ಸ್ಥಾನಗಳು ಇತರೆ ಪ್ರಾದೇಶಿಕ ಪಕ್ಷ ಗಳು, ಸ್ವತಂತ್ರ ಅಭ್ಯರ್ಥಿಗಳ ಪಾಲಾಗುತ್ತವೆ ಎಂದು ಸಮೀಕ್ಷೆ ಹೇಳಿದೆ.
Related Articles
Advertisement
ಪಣಜಿ ವಿಧಾನಸಭಾ ಕ್ಷೇತ್ರ: ಮೇ 19ಕ್ಕೆ ಉಪ ಚುನಾವಣೆಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪಾರೀಕರ್ ನಿಧನ ದಿಂದ ತೆರವಾಗಿರುವ ಪಣಜಿ ವಿಧಾನ ಸಭಾ ಕ್ಷೇತ್ರ ಮತ್ತು ತಮಿಳು ನಾಡಿನ ಸುಲೂರು, ಅರೆವಕುರಿಚಿ, ತಿರುಪರಂ ಕುಂ ದರಂ, ಒಟ್ಟಾಪಿಡರಂ ಕ್ಷೇತ್ರಗಳಿಗೆ ಮೇ 19ರಂದು ಉಪ ಚುನಾವಣೆ ನಡೆ ಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಸದ್ಯದಲ್ಲೇ ಆರಂಭವಾಗುವ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನವೂ ಮೇ 19ರಂದೇ ನಡೆಯಲಿದೆ ಎಂದು ಆಯೋಗ ತಿಳಿಸಿದೆ. ಎ. 22ರಂದು ಈ ಬಗ್ಗೆ ಅಧಿಸೂಚನೆ ಹೊರ ಬೀಳಲಿದ್ದು, ಅಂದಿನಿಂದಲೇ ನಾಮ ಪತ್ರ ಸಲ್ಲಿಕೆ ಆರಂಭವಾಗು ತ್ತದೆ. ನಾಮಪತ್ರ ಸಲ್ಲಿ ಸಲು ಎ. 29 ಕೊನೆಯ ದಿನವಾಗಿದ್ದು, ನಾಮಪತ್ರ ಹಿಂಪಡೆಯುವ ಗಡುವು ಮೇ 2ರಂದು ಕೊನೆಗೊಳ್ಳಲಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಮೇ 23ರಂದು ಘೋಷಣೆಯಾಗಲಿದ್ದು, ಅದೇ ದಿನ ಈ ಉಪ ಚುನಾವಣೆಗಳ ಫಲಿತಾಂಶವೂ ಹೊರ ಬೀಳಲಿದೆ. ತ.ನಾಡಲ್ಲಿ 360.80 ಕೋಟಿ ರೂ. ವಶ
ಲೋಕಸಭೆ ಚುನಾವಣ ಅಕ್ರಮ ಪತ್ತೆ ಹಚ್ಚುತ್ತಿರುವ ಚುನಾವಣ ಆಯೋ ಗವು ತಮಿಳುನಾಡಿನಲ್ಲಿ ಒಟ್ಟು 360.80 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ಹಾಗೂ ಇತರೆ ಅಮೂಲ್ಯ ವಸ್ತುಗಳನ್ನು ವಶಪಡಿಸಿಕೊಂಡಿದೆ. ಈವರೆಗೆ 122.30 ಕೋಟಿ ರೂ. ನಗದು ಹಾಗೂ 238.54 ಕೋಟಿ ರೂ. ಮೊತ್ತದ ಚಿನ್ನ, ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿದ್ದು, ಅಕ್ರಮ ತಡೆ ಗಟ್ಟುವ ನಿಟ್ಟಿನಲ್ಲಿ ಶತ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾರತಮ್ಯವಿಲ್ಲ ಎಂದ ವಿತ್ತ ಇಲಾಖೆ
ಮಧ್ಯಪ್ರದೇಶದಲ್ಲಿ ನಡೆದ ಐಟಿ ದಾಳಿಗೆ ಸಂಬಂಧಿಸಿ ಚರ್ಚಿಸಲು ಕಂದಾಯ ಕಾರ್ಯದರ್ಶಿ ಹಾಗೂ ಸಿಬಿಡಿಟಿ ಮುಖ್ಯಸ್ಥರಿಗೆ ಮಂಗಳವಾರ ಚುನಾವಣ ಆಯೋಗ ಬುಲಾವ್ ನೀಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ವಿತ್ತ ಸಚಿ ವಾಲಯ, ಕಂದಾಯ ಇಲಾಖೆಯು ಯಾವುದೇ ತಾರತಮ್ಯ, ಪಕ್ಷಪಾತ ವಿಲ್ಲದೇ ದಾಳಿ ನಡೆಸಿದೆ. ಅದು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟಿ¨ ಕಾಂಗ್ರೆಸ್ ಅಭ್ಯರ್ಥಿಗೆ “ಭೀಮ್’ ಬಲ
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಬಿಜೆಪಿಯ ಏಜೆಂಟ್ ಎಂಬ ಬಿಎಸ್ಪಿ ನಾಯಕಿ ಮಾಯಾವತಿ ಹೇಳಿಕೆಗೆ ಆಜಾದ್ ಕೆಂಡವಾಗಿದ್ದಾರೆ. ಮಾಯಾ ಹೇಳಿಕೆಯಿಂದ ಆಕ್ರೋಶಗೊಂಡಿರುವ ಅವರು, ಉತ್ತರಪ್ರದೇಶದ ಸಹರಾನ್ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ತಮ್ಮ ಸಮು ದಾಯದ ಸದಸ್ಯರಿಗೆ ಮಂಗಳವಾರ ಕರೆ ನೀಡಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಮ್ರಾನ್ ಮಸೂದ್ ಕಣಕ್ಕಿಳಿದಿದ್ದಾರೆ. ರಾಹುಲ್‌ಗಾಂಧಿ ವಿರುದ್ಧವೇ ಭ್ರಷ್ಟಾಚಾರ ಪ್ರಕರಣವಿದ್ದು, ಅವರೇ ಜಾಮೀನು ಪಡೆದು ಓಡಾಡುತ್ತಿದ್ದಾರೆ. ಹೀಗಿರುವಾಗ ಭ್ರಷ್ಟಾಚಾರ ಕುರಿತು ಚರ್ಚೆಗೆ ಬರುವಂತೆ ಮೋದಿಯವರಿಗೆ ಆಹ್ವಾನ ನೀಡುವ ನೈತಿಕತೆಯೇ ರಾಹುಲ್‌ಗಿಲ್ಲ.
ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ 2 ವಿದೇಶಿ ರಕ್ಷಣಾ ಕಂಪನಿಗಳಿಗೆ ಮೋದಿ ಸರಕಾರ ಅನುಕೂಲ ಮಾಡಿಕೊಟ್ಟಿದೆ. ಪ್ರಧಾನಿ ಮೋದಿ ಅವರು ದೇಶದ ರಾಷ್ಟ್ರೀಯ ಭದ್ರತೆ ಜೊತೆಗೆ ಆಟವಾಡುತ್ತಿದ್ದಾರೆ.
ಸೀತಾರಾಂ ಯೆಚೂರಿ, ಸಿ, ಸಿಪಿಎಂ ನಾಯಕ ಮೋದಿ ಸರಕಾರ ಮಾಡಿದ ಬಹುದೊಡ್ಡ ಕಾರ್ಯವೆಂದರೆ ದೇಶವನ್ನು ಭದ್ರಪಡಿಸಿದ್ದು. ರಾಹುಲ್ ಬಾಬಾ ಮತ್ತು ಸ್ನೇಹಿತರು, ತುಕಡೇ ತುಕಡೇ ಗ್ಯಾಂಗ್‌ನಿಂದ ದೇಶಕ್ಕೆ ಸುಭದ್ರ ಸರಕಾರ ನೀಡಲು ಸಾಧ್ಯವೇ?
ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಎಲ್ಲಿತ್ತೋ, ಅದೇ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕೆನ್ನುವುದು ನನ್ನ ಇಚ್ಛೆ. ಇಸ್ಲಾಂ ಧರ್ಮ ಭಾರತಕ್ಕೆ ಬಂದಿದ್ದೇ ತಡವಾಗಿ. ದೇಗುಲವನ್ನು ಕೆಡವಿಯೇ ಮಸೀದಿ ನಿರ್ಮಿಸಲಾಗಿತ್ತು.
ವೀರಭದ್ರ ಸಿಂಗ್, ಕಾಂಗ್ರೆಸ್ ನಾಯಕ ಹುತಾತ್ಮ ಯೋಧರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಮತ ಕೇಳುತ್ತಿರುವ ಮೋದಿಯವರಿಗೆ ನಾಚಿಕೆಯಾಗಬೇಕು. ಮೋದಿಯ ಚಟುವಟಿಕೆಗಳನ್ನು ಏನಾದರೂ ಹಿಟ್ಲರ್ ನೋಡಿದ್ದರೆ, ಆತ್ಮಹತ್ಯೆಗೆ ಶರಣಾಗುತ್ತಿದ್ದ.
ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕಿ