Advertisement

NDA ಪ್ರವೇಶ ಪರೀಕ್ಷೆ: ಎಕ್ಸ್‌ಪರ್ಟ್‌ನ 20 ವಿದ್ಯಾರ್ಥಿಗಳು ತೇರ್ಗಡೆ

12:43 AM Sep 25, 2024 | Team Udayavani |

ಮಂಗಳೂರು: ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಮತ್ತು ನೇವಲ್‌ ಅಕಾಡೆಮಿಯ ಪ್ರವೇಶಕ್ಕಾಗಿ ಕೇಂದ್ರೀಯ ಲೋಕಸೇವಾ ಆಯೋಗ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್‌ ಪದವಿಪೂರ್ವ ಕಾಲೇಜಿನ 20 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

Advertisement

ಆಶಿಶ್‌ ಸಿದ್ದಣ್ಣ ಹಾವನ್ನವರ್‌, ಭುವನ್‌ ಜಿ., ಚಂದ್ರಹಾಸ ಪ್ರಾಂಜಲ್‌ ಎಸ್‌.ಜಿ., ಧೀರೆನ್‌ ಎ. ಶೆಟ್ಟಿ, ಗೋಕುಲ್‌ ಜಿ.ಎಸ್‌., ಕರಣ್‌ ನೇಕರ್‌, ಕ್ರಿಶ್‌ ಎಸ್‌., ಕುಶಾಲ್‌ ಹಟ್ಟಿ, ಲಕ್ಷ್ಯ ಎಲ್‌. ಪೂಜಾರ್‌, ಮನ್ವಿತ್‌ ಎಸ್‌., ನಿಖಿಲ್‌ ಸೊನ್ನದ್‌, ಪೂಜಾ, ಪ್ರಜ್ವಲ್‌ ಭಟ್‌, ಪ್ರಣವ್‌ ಎಂ.ಮಾರಮನ್ನವರ್‌, ಪ್ರಣವ್‌ ಎಂ.ಪಿ., ಪ್ರೀತಂ ಸೋಮಶೇಖರ್‌ ಕೋರಿ, ರೋಹನ್‌ ಜಿ., ಎಸ್‌.ಪಿ.ದುಶ್ಯಂತ್‌ ಜೈನ್‌, ಸಾಯಿಶ್‌ ಶ್ರವಣ ಪಂಡಿತ್‌, ಶುಭಿತ್‌ ದಂಡಮುಡಿ ತೇರ್ಗಡೆಯಾದವರು.

ಕೇಂದ್ರ ಲೋಕಸವಾ ಆಯೋಗವು ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಮತ್ತು ಇಂಡಿಯನ್‌ ನೇವಲ್‌ ಅಕಾಡೆಮಿ ಪ್ರವೇಶಕ್ಕಾಗಿ ವರ್ಷಕ್ಕೆ ಎರಡು ಬಾರಿ ಪ್ರವೇಶ ಪರೀಕ್ಷೆ ನಡೆಸುತ್ತದೆ.

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ಸಂಸ್ಥೆಯೊಂದರ 20 ವಿದ್ಯಾರ್ಥಿಗಳು ತೇರ್ಗಡೆಯಾಗುವುದು ಅಭೂತಪೂರ್ವ ಸಾಧನೆಯಾಗಿದೆ. ಈ ಸಾಧನೆ ಮಾಡಿದಎಲ್ಲ ವಿದ್ಯಾರ್ಥಿಗಳು ಅಭಿನಂದನಾ ರ್ಹರು ಎಂದು ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ| ನರೇಂದ್ರ ಎಲ್‌. ನಾಯಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next