Advertisement

NDA; ಬಿಜೆಪಿಯೊಂದಿಗೆ ಮತ್ತೆ ಚಂದ್ರಬಾಬು ನಾಯ್ಡು ಸಖ್ಯ?

12:04 AM Feb 08, 2024 | Team Udayavani |

ಹೊಸದಿಲ್ಲಿ: ಉತ್ತರಭಾರತದಲ್ಲಿ ಗರಿಷ್ಠ ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಬಿಜೆಪಿ, ದಕ್ಷಿಣ ಭಾರತ ದಲ್ಲೂ ಅಷ್ಟೇ ಬಲವಾಗಿ ಕಾರ್ಯಾಚರಣೆ ನಡೆಸುತ್ತಿದೆ. 2019ರಲ್ಲಿ ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಬಿಜೆಪಿಯೊಂದಿಗೆ ಸಖ್ಯ ಬೆಳೆಸಲು ಬುಧವಾರ ದಿಲ್ಲಿಯಲ್ಲಿ ಮಾತುಕತೆ ನಡೆಸಿದ್ದಾರೆಂದು ಮೂಲಗಳು ಹೇಳಿವೆ.

Advertisement

ರಾಜಕೀಯವಾಗಿ, ಕಾನೂನಾತ್ಮಕವಾಗಿ ಹಲವು ಸಮಸ್ಯೆ ಎದುರಿಸುತ್ತಿರುವ ಟಿಡಿಪಿಯ ಪುನರುತ್ಥಾನಕ್ಕೆ ಚಂದ್ರಬಾಬು ನಾಯ್ಡು ಮುಂದಾಗಿದ್ದಾರೆ ಎನ್ನಲಾಗಿದೆ.

ತ.ನಾಡಿನ ಮಾಜಿ ಶಾಸಕರು ಬಿಜೆಪಿಗೆ

ಮಂಗಳ ವಾರ ತಮಿ ಳು  ನಾಡಿನಲ್ಲಿ ಹಲವು ಮಾಜಿ ಎಐಎಡಿ ಎಂಕೆ ಸಂಸದರು, ಶಾಸಕರು ಬಿಜೆಪಿ ಸೇರಿ ದ್ದಾರೆ. ಇನ್ನೊಂದೆಡೆ, ಫೆ.13ಕ್ಕೆ ಕೇರಳದಲ್ಲಿ ಕೇರಳ ಜನಪಕ್ಷಮ್‌ (ಜಾತ್ಯತೀತ) ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದೆ. ಆ ಪಕ್ಷದ 112 ನಾಯಕರು ಅಮಿತ್‌ ಶಾ ಉಪಸ್ಥಿತಿಯಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ. ಮೂಲಗಳ ಪ್ರಕಾರ, ಬಿಜೆಪಿ ದಕ್ಷಿಣಭಾರತದಲ್ಲಿ ಲೋಕಸಭಾ ಸ್ಥಾನ ಗಳನ್ನು ಗೆಲ್ಲುವುದಕ್ಕಿಂತ, ವಿಧಾನಸಭಾ ಚುನಾವಣೆಯ ಬಗ್ಗೆ ಗಮನಹರಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next