Advertisement

NDA ಗೆ 366, ಇಂಡಿಯಾ ಕೂಟಕ್ಕೆ 104: ಟೈಮ್ಸ್‌ ನೌ ಸಮೀಕ್ಷೆ

12:40 AM Feb 08, 2024 | Team Udayavani |

ಹೊಸದಿಲ್ಲಿ: ಲೋಕಸಭಾ ಚುನಾವಣೆ ಯಲ್ಲಿ ಎನ್‌ಡಿಎ 366 ಸ್ಥಾನ ಗಳಿಸಲಿದೆ. ಇಂಡಿಯಾ ಮೈತ್ರಿಕೂಟ 104 ಹಾಗೂ ಇತರ ಪಕ್ಷಗಳು 73 ಸ್ಥಾನಗಳನ್ನು ಗಳಿಸಲಿವೆ ಎಂದು ಎಂದು ಟೈಮ್ಸ್‌ ನೌ ಮತ್ತು ಮ್ಯಾಟ್ರಿಝ್ ನಡೆಸಿದ ಸಮೀಕ್ಷೆ ತಿಳಿಸಿದೆ.

Advertisement

ಗುಜರಾತ್‌, ಛತ್ತೀಸ್‌ಗಢ, ದಿಲ್ಲಿಯಲ್ಲಿ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ನಿತೀಶ್‌ಕುಮಾರ್‌ ಸೇರ್ಪಡೆಯಿಂದ ಬಿಹಾರದಲ್ಲಿ ಎನ್‌ಡಿಎ 35 ಸೀಟುಗಳನ್ನು ಗೆಲ್ಲಲಿದ್ದು, ಇತರ ಪಕ್ಷಗಳು 5 ಸ್ಥಾನಗಳಿಗೆ ತೃಪ್ತಿಪಡಬೇಕಾಗುತ್ತದೆ. ತಮಿಳು ನಾಡಿನಲ್ಲಿ ಎನ್‌ಡಿಎ ಒಂದು ಹಾಗೂ ಇಂಡಿಯಾ ಮೈತ್ರಿಕೂಟ 36 ಸ್ಥಾನವನ್ನು ಪಡೆಯಲಿದೆ. ಪಶ್ಚಿಮ ಬಂಗಾಲದಲ್ಲಿ ಟಿಎಂಸಿ 26 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

ರಾಜ್ಯದಲ್ಲಿ ಬಿಜೆಪಿ ದಳ ಮೈತ್ರಿಗೆ 23, ಕಾಂಗ್ರೆಸ್‌ಗೆ 5
ಕರ್ನಾಟಕದಲ್ಲಿ 21 ಸ್ಥಾನಗಳನ್ನು ಬಿಜೆಪಿ ಮತ್ತು 2 ಸ್ಥಾನಗಳನ್ನು ಜೆಡಿಎಸ್‌ ಗೆಲ್ಲಲಿದೆ. ಕಾಂಗ್ರೆಸ್‌ 5 ಸ್ಥಾನಗಳನ್ನು ಗಳಿಸಲಿದೆ ಎಂದು ಈ ಸಮೀಕ್ಷೆ ಹೇಳಿದೆ. ಮತಗಳ ಶೇಕಡಾವಾರು ಪ್ರಮಾಣದಲ್ಲಿ ಬಿಜೆಪಿ ಶೇ 46.2, ಕಾಂಗ್ರೆಸ್‌ ಶೇ 42.3, ಜೆಡಿಎಸ್‌ ಶೇ. 8.4 ಹಾಗೂ ಇತರ ಪಕ್ಷಗಳು ಶೇ 3.1ರಷ್ಟು ಮತ ಗಳಿಸಿಕೊಳ್ಳಲಿವೆ. ಸಿದ್ದರಾಮಯ್ಯ ಸಾಧನೆ ಕುರಿತು ಶೇ. 18ರಷ್ಟು ತೃಪ್ತಿ ವ್ಯಕ್ತಪಡಿಸಿದ್ದು, ಶೇ 27ರಷ್ಟು ಮಂದಿ ಪರವಾಗಿಲ್ಲ ಎಂದಿದ್ದಾರೆ. ಶೇ. 34ರಷ್ಟು ಮಂದಿ ಅತೃಪ್ತಿ ವ್ಯಕ್ತಪಡಿಸಿದ್ದು, ಶೇ. 21ರಷ್ಟು ಪ್ರತಿಕ್ರಿಯಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next