ಪುಣೆ : ರತ್ನಾಗಿರಿಯ ಚಿಪ್ಲೂಣ್ ನ ತಿವಾರೆ ಡ್ಯಾಂ ಒಡೆದು ಹೋಗಲು ಏಡಿಗಳು ಕಾರಣ ಎಂದು ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ತಾನಾಜಿ ಸಾವಂತ್ ಅವರ ನಿವಾಸದ ಎದುರು ಎನ್‌ಸಿಪಿ ಕಾರ್ಯಕರ್ತರು ಏಡಿಗಳನ್ನು ಸುರಿದು ವಿನೂತನವಾಗಿ ಪ್ರತಿಭಟಸಿದ್ದಾರೆ.
ಪ್ರತಿಭಟನೆ ವೇಳೆ ಏಡಿಗಳನ್ನು ಹಿಡಿದುಕೊಂಡು ಬಂದ ಎನ್‌ಸಿಪಿ ಕಾರ್ಯಕರ್ತರು 25 ಕ್ಕೂ ಹೆಚ್ಚು ಜೀವಂತ ಏಡಿಗಳನ್ನು ಮನೆಯ ಮುಂದೆ ಸುರಿದಿದ್ದಾರೆ.
ಡ್ಯಾಂ ಒಡೆದು ಅಪಾರ ಪ್ರಮಾಣದ ನೀರು ಪ್ರವಾಹವಾಗಿ ಹರಿದು ಬಂದಕಾರಣ 23 ಮಂದಿ ಕೊಚ್ಚಿ ಹೋಗಿದ್ದರು. 20 ಮಂದಿಯ ಶವಗಳನ್ನು ಪತ್ತೆ ಹಚ್ಚಲಾಗಿದ್ದು, ಇನ್ನೂ ಮೂರು ಮಂದಿಯ ಶವಗಳಿಗಾಗಿ ಎನ್‌ಡಿಆರ್‌ಎಫ್ ಪಡೆಗಳು ಹುಡುಕಾಟ ಮುಂದುವರಿಸಿವೆ.